ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಬೇಡಿಕೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ ಶಶೀಲ್ ಜಿ ನಮೋಶಿ

ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಬೇಡಿಕೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ ಶಶೀಲ್ ಜಿ ನಮೋಶಿ
ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆಯನ್ನು ರಜೆರಹಿತ ಇಲಾಖೆ Non-vacation Department ಎಂದು ಪರಿಗಣಿಸುವಂತೆ ಮಾನ್ಯ ನಿರ್ದೇಶಕರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಬೆಂಗಳೂರು, ಕಲಬುರ್ಗಿ ಜಿಲ್ಲಾ ಘಟಕದ ಪದಾಧಿಕಾರಿಗಳು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಅವರಿಗೆ ಮನವಿ ಸಲ್ಲಿಸಿದರು ಮನವಿಯನ್ನು ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯರು ದಿನಾಂಕ 15/04/2025 ರಂದೆ ನಿಮ್ಮ ಮನವಿಯನ್ನು ಮಾನ್ಯ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ನವರ ಗಮನಕ್ಕೆ ತರುವೆ ಎಂದು ಹೇಳಿದರು ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು ಕೂಡಲೆ ಸಚಿವರು ಇವುಗಳನ್ನು ಈಡೆರಿಸಬೇಕು ಎಂದು ನಿಮ್ಮ ಪರವಾಗಿ ಒತ್ತಡ ಹೇರಲಾಗುವುದು ಎಂದು ಭರವಸೆ ನೀಡಿದರು.
ಮಾನ್ಯ ನಿರ್ದೇಶಕರು 2025-26 ನೇ ಸಾಲಿನ ಶೈಕ್ಷಣಿಕ ಅವಧಿಯ ಸುತ್ತೋಲೆಯಲ್ಲಿ ಕಾಲೇಜು ಪ್ರಾರಂಭದಿನಾಂಕ:02-06-2025 ಎಂದು ನಿಗದಿಪಡಿಸಿದ್ದಾರೆ. 2025ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆ-1 ರಲ್ಲಿ ಫಲಿತಾಂಶ ಉತ್ತೀರ್ಣಗೊಳಿಸದ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆ-2 ಕಡ್ಡಾಯವಾಗಿ ನೋಂದಾಯಿಸಲು ಹಾಗೂ ಇಂತಹ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ನಡೆಸುವುದರ ಮೂಲಕ ಸದರಿ ವಿದ್ಯಾರ್ಥಿಗಳ ಫಲಿತಾಂಶವನ್ನು ಸುಧಾರಣೆಗೊಳಪಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಮಾನ್ಯ ಅಧ್ಯಕ್ಷರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯವರು ದಿನಾಂಕ:24-04-2025 ರಿಂದ 08-05-2025ರ ದ್ವಿತೀಯ ಪಿ.ಯು.ಸಿ ಪರೀಕ್ಷೆ-2ರ ಅಂತಿಮ ವೇಳಾ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ಪಿ.ಯು.ಸಿಯ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಮೂರು ಪರೀಕ್ಷೆಗಳನ್ನು ನಡೆಸಲು ಪ್ರಾರಂಭಿಸಿದ್ದಾಗಿನಿಂದ ಉಪನ್ಯಾಸಕರ ಮೇಲೆ ವಿಪರೀತವಾದ ಕಾರ್ಯಭಾರದ ಒತ್ತಡ ಹೆಚ್ಚಾಗುತ್ತಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ರಜೆ ಸಹಿತ ಇಲಾಖೆಯಾಗಿದ್ದು, (ಬಿಡುವಿನ) ಉಪನ್ಯಾಸಕರು ಪ್ರತಿ ಶೈಕ್ಷಣಿಕ ಸಾಲಿನಲ್ಲಿ ದಸರೆ ಮತ್ತು ಬೇಸಿಗೆ ರಜೆ ಪಡೆಯುವುದು ಅವರ ಹಕ್ಕಾಗಿರುತ್ತದೆ. ಈಗಾಗಲೇ ಉಪನ್ಯಾಸಕರು ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆ-1ರ ಪರೀಕ್ಷಾ ಕಾರ್ಯ ಮತ್ತು ಮೌಲ್ಯ ಮಾಪನ ಕಾರ್ಯ ಮುಗಿಸಿ ವಿಶ್ರಾಂತಿ ಪಡೆಯುತ್ತಿರುವುವಾಗಲೇ ಇಲಾಖೆ ಉಲ್ಲೇಖ (02) ರಲ್ಲಿ ದ್ವಿತೀಯ ಪಿ.ಯು.ಸಿ-1ರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನ ನಡೆಸುವಂತೆ ಸುತ್ತೋಲೆ ಹೊರಡಿಸಿರುವುದು ಉಪನ್ಯಾಸಕರ ರಜೆಯ ಹಕ್ಕನ್ನು ಕಸಿದಂತಾಗುತ್ತದೆ. ದ್ವಿತೀಯ ಪಿ.ಯು.ಸಿ ಪರೀಕ್ಷೆ-2ರ ವೇಳಾಪಟ್ಟಿ ಪ್ರಕಾರ ಪರೀಕ್ಷಾ ಕಾರ್ಯ ನಿರ್ವಹಿಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮಾಡಬೇಕಾಗಿರುವುದರಿಂದ ಉಪನ್ಯಾಸಕರಿಗೆ ಯಾವುದೇ ರಜೆ ದೊರೆಯುವುದಿಲ್ಲ.
ಆದ್ದರಿಂದ ಪದವಿಪೂರ್ವ ಶಿಕ್ಷಣ ಇಲಾಖೆಯನ್ನು 'ರಜೆ ರಹಿತ ಇಲಾಖೆ" ಎಂದು ಪರಿಗಣಿಸಿ ರಜೆ ರಹಿತ ಇಲಾಖಾ ನೌಕರರಿಗೆ ಸಿಗುವ ಎಲ್ಲಾ ಸವಲತ್ತುಗಳನ್ನು ಉಪನ್ಯಾಸಕರಿಗೂ ನೀಡಬೇಕು. ಇಲ್ಲವಾದರೆ ನಿರ್ದೇಶಕರು ವಿಶೇಷ ಪರಿಹಾರ ಬೋಧನೆ ನಡೆಸುವಂತೆ ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯುವಂತೆ ಮಾನ್ಯ ನಿರ್ದೇಶಕರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಶಿಕ್ಷಣ ಸಚಿವರ ಮನವಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕಲಬುರ್ಗಿ ಜಿಲ್ಲಾ ಅಧ್ಯಕ್ಷರಾದ ಜೆ ಮಲ್ಲಪ್ಪ ಕಾರ್ಯದರ್ಶಿಗಳಾದ ನರಸಪ್ಪ ರಂಗೋಲಿ, ಕಾರ್ಯಾಧ್ಯಕ್ಷ ನಾಮದೇವ ಕಡಕೋಳ, ಚಿಂಚೋಳಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಲಮೂರ , ನಲಕಂಟೆಯವರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀದೇವಿ ಭಾವಿದೊಡ್ಡಿ, ನಾಗರಾಜ್,ಸವಿತಾ ನಾಶಿ,ಮಾಪಣ್ಣ ಜಿರೋಳ್ಳಿ, ಐ ಕೆ ಪಾಟೀಲ್ ಉಪಸ್ಥಿತರಿದ್ದರು.