ಸಾಲೇಬಿರನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ ಪ್ರಭು ವಿರುದ್ದ ಅವಿಶ್ವಾಸ ಮಂಡನೆ
ಸಾಲೇಬಿರನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ ಪ್ರಭು ವಿರುದ್ದ ಅವಿಶ್ವಾಸ ಮಂಡನೆ
ಚಿಂಚೋಳಿ : ತಾಲೂಕಿನ ಸಾಲೇಬಿರನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ ಪ್ರಭು ಅವರ ವಿರುದ್ದ ಶುಕ್ರವಾರ ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ ಸಮ್ಮುಖದಲ್ಲಿ ಅವಿಶ್ವಾಸ ಮಂಡನೆ ಪ್ರಕ್ರಿಯೆ ಜರುಗಿತು. ಗ್ರಾಮ ಪಂಚಾಯಿತಿ ಒಟ್ಟು ಸದಸ್ಯರ ಬಲ 16 ಆಗಿದ್ದು, ಇದರಲ್ಲಿ 12 ಜನ ಸದಸ್ಯರು ಆವಿಶ್ವಾಸ ಮಂಡನೆ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ನಿಯಮ ಅನುಸಾರ ಅವಿಶ್ವಾಸ ಮತಕ್ಕೆ ಹಾಕಲಾಯಿತು. ಅಧ್ಯಕ್ಷೆ ರಾಜೇಶ್ವರಿ ವಿರುದ್ದ 12 ಜನ ಸದಸ್ಯರು ಕೈ ಎತ್ತುವ ಮೂಲಕ ಅವಿಶ್ವಾಸ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರು. ಅಧ್ಯಕ್ಷೆಯ ಪರ ಶೂನ್ಯ ಬೆಂಬಲ ವ್ಯಕ್ತವಾಗಿದರಿಂದ 3ನೇ 2 ರಷ್ಟು ಭಾಗ ಬಹುಮತ ಸಾಬೀತುಪಡಿಸಿದರಿಂದ ಅಧ್ಯಕ್ಷೆ ರಾಜೇಶ್ವರಿ ಪ್ರಭು ಅವರ ವಿರುದ್ದ ಅವಿಶ್ವಾಸ ಮಂಡನೆ ಪ್ರಕ್ರಿಯೆ ನಡೆಸಿ ಪೂರ್ಣಗೊಳಿಸಲಾಗಿದೆ ಎಂದು ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ ಅವರು ಮಾಹಿತಿ ನೀಡಿದರು.
ಡಿ. 14 ರಂದು ಗ್ರಾಮ ಪಂಚಾಯಿತಿ ಕೆಲ ಸದಸ್ಯರುಗಳಿಂದ ಅಧ್ಯಕ್ಷೆಯ ವಿರುದ್ದ ಅವಿಶ್ವಾಸ ಮಂಡನೆಗೆ ಅರ್ಜಿ ಸಲ್ಲಿಸಲಾಗಿತ್ತು. ಹೀಗಾಗಿ ಪಂಚಾಯತ್ ರಾಜ್ ಕಾಯ್ದೆಯ ನಿಯಮಗಳ ಪ್ರಕಾರ ಡಿ. 21 ರಂದು ನೋಟಿಸ್ ಜಾರಿ ಮಾಡಿ, ಸಮಯ ಮತ್ತು ದಿನಾಂಕ ನಿಗದಿಪಡಿಸಲಾಗಿತ್ತು. ಈ ಹಿನ್ನಲೆಯಲ್ಲಿ ಶುಕ್ರವಾರ ಜ. 10 ರಂದು ಅವಿಶ್ವಾಸ ಮಂಡನೆ ಪ್ರಕ್ರಿಯೆ ನಡೆಸಲಾಗಿದೆ ಆಯುಕ್ತರು ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಾಹೇದ್ ಅಲಿ, ಗ್ರಾಮ ಆಡಳಿತ ಅಧಿಕಾರಿ ಕಾರ್ತಿಕ್, ಕಂದಾಯ ನೀರಿಕ್ಷಕ ಆರೀಫ್, ಸದಸ್ಯರಾದ ರಾಜಶೇಖರ ದಂಡಿನ, ವೀರಾರೆಡ್ಡಿ ಚೆಟ್ನಳ್ಳಿ, ಗೀತಾ ಸಂಜು, ಸುನೀತಾ ಶಿವಲಿಂಗಪ್ಪ, ಅಶೋಕ ರಾಠೋಡ್, ಗೋಪಾಲ ಚವ್ಹಾಣ, ರೇಣುಕಾಬಾಯಿ ಲೋಕೇಶ, ಸುರೇಖಾ. ಸಿ, ಮೀನಾಕ್ಷಿ ಶಿವಶಂಕರ, ಸರಸ್ವತಿ ವಿಶ್ವನಾಥ, ಶಿವಶರಣಪ್ಪ ಮಲ್ಲಪ್ಪ, ಝರಣಪ್ಪ ತುಕ್ಕಪ್ಪ ಅವರು ಇದ್ದರು.