ಮಧ್ಯಕಾಲೀನ ಕಲಬುರ್ಗಿ

ಮಧ್ಯಕಾಲೀನ ಕಲಬುರ್ಗಿ

ಮಧ್ಯಕಾಲೀನ ಕಲಬುರ್ಗಿ

ಮಧ್ಯಕಾಲೀನ ಕಲಬುರ್ಗಿ ಎಸ್ ಕೆ ಅರುಣಿ ಅವರ ಸಂಶೋಧನ ಕೃತಿಯಲ್ಲಿ ಒಂದಾಗಿದ್ದು ಮಧ್ಯಕಾಲೀನ ದಬ್ಬನ್ ಪ್ರದೇಶದಲ್ಲಿ zಬಹಮನಿ ಸುಲ್ತಾನರು ನಿರ್ಮಿಸಿದ ರಾಜಧಾನಿ ನಗರ ಕಲಬುರ್ಗಿಯು ನಾಡಿನ ಚರಿತ್ರೆಯಲ್ಲಿ ಬಹುಮುಖ್ಯ ಪಾತ್ರವಹಿಸಿದೆ. ಮುಕ್ಕಾಲು ಶತಮಾನ ಕಾಲ (1350-1426) ರಾಜಧಾನಿ ನಗರವಾಗಿದ್ದ ಕಲಬುರ್ಗಿಯು ವಿವಿಧ ಭಾಗದ ಸಂತರನ್ನು, ದಾರ್ಶನಿಕರನ್ನು ಆಕರ್ಷಿಸಿತ್ತು. ಅವರಲ್ಲಿ ಸಂತ ಸಿರಾಜುದ್ದೀನ್ ಜುನೈದಿ, ಸಂತ ಕ್ವಾಜ ಬಂದೇ ನವಾಜ್ ಗೇಸುದರಾಜ್ ಹಾಗೂ ಸಂತ ಶರಣಬಸವರು ಪ್ರಮುಖರು.

ಅಪೂರ್ವವಾದ ಜುಮ್ಮಾ ಮಸೀದಿ, ಕೋಟೆ, ಗುಂಬಜಗಳು ಕಲಬುರ್ಗಿಯ ಪ್ರಧಾನ ವಾಸ್ತುಶಿಲ್ಪದ ಕುರುಹುಗಳಾಗಿವೆ. ಪ್ರಸ್ತುತ ಕೃತಿಯು ಬಹಮನಿ ಸುಲ್ತಾನರು ನಿರ್ಮಿಸಿದ ರಾಜಧಾನಿ ನಗರದ ವಿನ್ಯಾಸ ಹಾಗೂ ಮಧ್ಯಕಾಲೀನ ಸಂದರ್ಭದ ಮಹತ್ವತೆಯನ್ನು ವಿವರಿಸುತ್ತದೆ. ಪ್ರಾಚೀನ ಕಾಲದ 'ಕಲಂಬುರಗಿ' ಪಟ್ಟಣವನ್ನು ಬಹಮನಿಯರು ಒಂದು ರಾಜಧಾನಿ ನಗರವನ್ನಾಗಿ ಪರಿವರ್ತಿಸಿದ ಪ್ರಕ್ರಿಯೆಯ ವಿವಿಧ ಆಯಾಮಗಳನ್ನು ಈ ಕೃತಿಯು ವಸ್ತುನಿಷ್ಠವಾಗಿ ತೆರೆದಿಡುತ್ತದೆ.