ಕವನ ಕಸೂತಿ (ಅದ್ವಿಕಾ)

ಕವನ ಕಸೂತಿ (ಅದ್ವಿಕಾ)

 ಕವನ ಕಸೂತಿ (ಅದ್ವಿಕಾ)

ಕಲಬುರಗಿಯಲ್ಲಿಯ ಅಜೀಂ ಪ್ರೇಮ್‌ಜಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಆದ್ವಿಕಾ. ಕೆ ಚಿಕ್ಕ ವಯಸ್ಸಿನಲ್ಲೆ ಸಾಹಿತ್ಯದ ಆಸಕ್ತಿಯನ್ನು ವೃದ್ಧಿಸಿಕೊಂಡು, ತನ್ನ ಚೊಚ್ಚಲ ಕವನ ಸಂಕಲನ “ಕವನ ಕಸೂತಿ” ಯನ್ನು ಸಾಹಿತ್ಯ ಲೋಕಕ್ಕೆ ನೀಡುವುದರ ಮೂಲಕ ಬಾಲಕವಿ ಕವಿಯಿತ್ರಿಯಾಗಿ ಗುರುತಿಸಿಕೊಂಡಿದ್ದು ಹೆಮ್ಮೆಯ ವಿಷಯ.

 "ಕವನ ಕಸೂತಿ"ಕವನ ಸಂಕಲನದಲ್ಲಿ “ಗುರುವಿನ ಬೆಳಕು" ಕವನದಲ್ಲಿ "ಭವಿಷ್ಯಕ್ಕೆ ಬೀಜ ಗತ್ತುಗಾನ ಬಿತ್ತಿದವರು" "ಬಾಲ್ಯ" ಪದ್ಯದಲ್ಲಿ “ನಮ್ಮ ಸುಂದರ ಬಾಲ್ಯ ಕಳೆದ ಕ್ಷಣಗಳೆಲ್ಲ ಅಮೂಲ್ಯವಿಂದು ಮೂಗಿನ ಕಾಣದೇ ಹೇಳುತ್ತಾಳೆ, ಅದ್ವಿಕಾ. ಇಲ್ಲಿ ಅವಳು ಬಣ್ಣದ ಕಾಮನ ಬಿಲ್ಲು ಇದೆ. ಹೂಗಳ ಪರಿಮಳವಿದೆ ಹಣೆಯು ಚಂದಿರನ ಬೆಳೆದಿಂಗಳು ಹರಡಿದೆ. ರಂಗುರಂಗಿನ ಹೂಗಳು ಅರಳಿವೆ. ಸುಂದರ ಜೀವನ ತುಂಬೆಲ್ಲ ಸೋಪಾನದ ನಗುವಿದೆ. "ಮರಗಿಡಗಳ ನೆರಳು" ಮಧುರ ಕಂಠದ ಕೋಗಿಲೆ ಹೀಗೆ ಪ್ರಕೃತಿಯ ಚೆಲುವಿಕೆಯನ್ನು ಇಮ್ಮಡಿಸಿದೆ.

ಅದ್ವಿಕಾ ಹೆನೆದ ಕಸೂತಿಯಲ್ಲಿ ಅರವತ್ತೇರಡು ಕವನಗಳಿವೆ. ಈ ಕವನಗಳಲ್ಲಿ 'ಧ್ವನಿ' ಮಣ್ಣಿನ ವಾಸನೆ, ಶಾಲೆಯ ಸೊಬಗು, ಕರೋನಾದಂತಹ ಮಹಾಮರಿಯ ಭಯವೂ ಇಲ್ಲಿದೆ. "ಸುಖವಿದ್ದಲ್ಲಿ ದು:ಖ, ದು:ಖ ಇದ್ದಲ್ಲಿ ಸುಖ ಇರುತ್ತದೆ. ಇದು ಸೃಷ್ಟಿಯನಿಯಮ. ಅದ್ವಿಕಾ ವಿದ್ಯಾರ್ಥಿನಿ ಹತ್ತೂ ಕಡೆ ಕಣ್ಣಾಡಿಸಿ ರಚಿಸಿದ ಕವನಗಳು ಸರಳವೂ, ಸುಂದರವೂ ಆಗಿದ್ದು, ಮಕ್ಕಳ ಮನ ಮುಟ್ಟುತ್ತವೆ. ಓದುಗರ ಹೃದಯ ತಟ್ಟುತ್ತವೆ. ಮಕ್ಕಳಲ್ಲಿರುವ ಕುಶಲತೆ, ಜಾಣೆ, ಔದಾರ್ಯವನೆಲ್ಲರೂ ಮೆಚ್ಚಿಕೊಳ್ಳಬೇಕು. ಅದ್ವಿಕಾಳ ಕಾವ್ಯಕ್ಕೆ ಮೂಡಿದ ಕಲ್ಪನೆಯ ಗರಿ. ಕನ್ನಡಿಗರ ಕಣ್ಮನ ಸೆಳೆಯುತ್ತದೆ.

 ಕಲಬುರಗಿಯ ಉಮಾ ಪ್ರಕಾಶನದಿಂದ 2023 ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ 74 ಪುಟಗಳಿದ್ದು ನೂರು ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

ಡಾ. ಶರಣಬಸಪ್ಪ ವಡ್ಡನಕೇರಿ