ಮನುಜ ( ಆಧುನಿಕ ವಚನ)

ಮನುಜ ( ಆಧುನಿಕ ವಚನ)

ಮನುಜ ( ಆಧುನಿಕ ವಚನ)

ಶ್ರೀಮತಿ ಪ್ರಮಿಳಾ ಅವರು ತಮ್ಮ " ಮನುಜ' ದ ಪ್ರತಿ ಪುಷ್ಪಗುಚ್ಛದಲ್ಲಿಯೂ ಮನುಜ " ಎಂಬ ಅಂಕಿತದ ಗುಲಾಬಿ ಹೂವನ್ನು ಜೋಡಿಸಿರುವುದರಿಂದ ವಾಸ್ತವಿಕ ಅರ್ಥದಲ್ಲಿ ಇದು ವಚನಗಳ ಸಂಕಲನವೇ ಆಗಿದೆ ಆದರೆ ಅವರೆಲ್ಲಿಯೂ ವಚನಗಳೆಂದು ಕರೆದಿಲ್ಲ. ಹಿಂದೊಮ್ಮೆ ಹನ್ನೆರಡನೆಯ ಶತಮಾನದಲ್ಲಿ ದಟ್ಟ ಅನುಭವ ಪೂರ್ಣವಾಗಿ ಈ ಬರೆದಂಥ ಶಿವಶರಣರ ವಚನ ಪ್ರಕಾರ, ಈಗಿನವರ ಕೈಯಲ್ಲಿ ಕೇವಲ ದರೆ ರೂಪಮಾತ್ರ ಉಳಿಸಿಕೊಂಡು ಆತ್ಮವನ್ನೇ ಕಳೆದುಕೊಂಡಿದೆಯೆಂದು ಹೇಳಿದರೆ ದಯವಿಟ್ಟು ಆಧುನಿಕ ವಚನಕಾರರು ತಪ್ಪು ಭಾವಿಸಬಾರದು. ನಾನು ಎಲ್ಲ ವಚನಕಾರರ ಎಲ್ಲ ವಚನಗಳನ್ನು ಸಾರ್ವತ್ರಿಕಗೊಳಿಸಿ ಈ ಹೇಳಿಕೆ ನೀಡುತ್ತಿದ್ದೇನೆಂದು ತಿಳಿದುಕೊಳ್ಳಬಾರದು. ಕೆಲವೊಂದು ಆಧುನಿಕ ವಚನಗಳಲ್ಲಿಯೂ ಅನುಭಾವವು ಕೆನೆಗಟ್ಟಿರುವುದನ್ನು ಗಮನಿಸುತ್ತೇವೆ. "ವಚನ" ಎಂದರೆ ಕೊಟ್ಟ ಮಾತು, ನುಡಿದಂತೆ ನಡೆಯುವ ಆಶ್ವಾಸನೆ ಎಂಬ ಗಂಭೀರ ಅರ್ಥ ಇರುವುದರಿಂದ ವಚನಗಳನ್ನು ಬರೆಯುವ ಆಧುನಿಕ ಮಹನೀಯರು ತಮ್ಮ ನಡೆ-ನುಡಿಯನ್ನು ಒಂದಾಗಿಸುವ ತೀವ್ರತೆಯನ್ನು ತಂದುಕೊಳ್ಳಬೇಕೆಂಬುದೇ ನನ್ನ ಹಾರೈಕೆ. ಇದು ಅಸಾಧ್ಯವಾಗಿದ್ದಲ್ಲಿ ವಚನ ಸಾಹಿತ್ಯದ ಪಾವಿತ್ರ್ಯತೆಗೆ ಭಂಗ ಬರಲಾಗದೆಂಬುದೇ ನನ್ನ ಸವಿನಯ ಪ್ರಾರ್ಥನೆ

ಮನ'' ಶಬ್ದದಿಂದ '' ಮಾನವ '' ನಿಷ್ಪತ್ತಿಯಾಗಿದ್ದರೆ " ಮನು ” ಋಷಿಯಿಂದ " ಮನುಜ " ಶಬ್ದ ಬಂದಿದೆಯೆಂದು ಭಾಷಾ ಪಂಡಿತರು ಹೇಳುತ್ತಾರೆ. ಮನು ಬಹಳ ಸ್ವಾರ್ಥಿಯಾಗಿದ್ದನೆಂದು " ಮನುಸ್ಮೃತಿ .. ಓದಿದವರು ಹೇಳುತ್ತಾರೆ. ಆತನ ವಂಶಸ್ಥರೂ ಸ್ವಾರ್ಥಿಗಳೇ ಆಗಿರುವುದರಿಂದ ಸ್ವಾರ್ಥಿಗಳಿಗೆ ಮಾತ್ರ ' ಮನುಜ ಎಂದು ಸಂಬೋಧಿಸಲಾಗುತ್ತದೆ. ಮಾನವನೂ ಮನುಷ್ಯನೇ, ಮನುಜನೂ ಮನುಷ್ಯನೇ ಆದರೂ " ಮಾನವ'' ಶಬ್ದಕ್ಕೆ ದೊಡ್ಡಸ್ತಿಕೆ ಇದೆ, " ಮನುಜ " ಶಬ್ದಕ್ಕೆ ಸಣ್ಣಸ್ತಿಕೆ ಪರಿಪಾಠದಲ್ಲಿ ಬೆಳೆದು ಕೊಂಡು ಬಂದಿದೆ "ಏನಾದರೂ ಆಗು ಮೊದಲು ಮಾನವನಾಗು" ಎಂದು ಹೇಳುತ್ತಾರೆ ವಿನಹ ಮೊದಲು ಮನುಜನಾಗು ಎನ್ನುವದಿಲ್ಲ. * ಮಾನವ ನಿಂದ ಮಹಾಮಾನವ ನಾಗಬೇಕು '' ಎಂದು ಕರೆಕೊಡುತ್ತಾರೆ ಹೊರತು " ಮನುಜ '' ರಿಂದ ಮಹಾ ಮನುಜರಾಗಬೇಕು ಎಂದು ಯಾರೂ ಉಪದೇಶಿಸುವದಿಲ್ಲ ಈ ಅರ್ಥ ವ್ಯಾಪ್ತಿಯಿರುವಾಗ ಸಹೋದರಿ ಶ್ರೀಮತಿ ಪ್ರಮೀಳ ಅವರು ತಮ್ಮ ಎಲ್ಲ ಸದುಪದೇಶಗಳನ್ನು ಸ್ವಾರ್ಥಿಯೆನಿಸುವ 'ಮನುಜ' ರಿಗೆ ಸಂಬೋಧಿಸಿರುವುದರಿಂದ ಮನುಜನಲ್ಲಿ ಸಹಜವಾಗಿ ಬೆಳೆದು ಬಂದಿರುವ ಸ್ವಾರ್ಥ, ಸ್ವಜನ ಪಕ್ಷಪಾತ, ಅಜ್ಞಾನ, ದುರಾಶೆ, ಮೋಹ, ಮದ, ಮತ್ಸರಗಳ ಬಗ್ಗೆ ಅವರು ಬಹಳ ವ್ಯಥಿತರಾಗಿ, ಕೇಳ ಮನುಜ " ನೋಡಾ ಮನುಜ '' ಎಂದು ಅರ್ಥಪೂರ್ಣವಾಗಿ ಸಂಬೋಧಿಸಿದ್ದಾರೆ. ರೇಷ್ಮೆ ಹುಳ ಮೊದಲಾದ ಕೀಡೆ ಜಾತಿಗಳಿಗೆ ಬದುಕಿನಲ್ಲಿ ಹಲವು ಸ್ಥಿತ್ಯಂತರಗಳು ಮತ್ತು ರೂಪಾಂತರಗಳು ಕಾಲಮಾನದಲ್ಲಿ ಬರುವ ರೀತಿಯಲ್ಲಿ ಮನುಷ್ಯ ಪ್ರಾಣಿಯೂ ಜೀವನದಲ್ಲಿ ಹಲವು ಹಂತಗಳನ್ನು ಏರಬೇಕು. ಹುಟ್ಟು ಮನುಜತ್ವದ ಪೊರೆ ಕಳಚಿ ಮಾನವನಾಗಿ ಬೆಳೆಯಬೇಕು. ಮಾನವತ್ವದಿಂದ ಮಹಾಮಾನತ್ವಕ್ಕೆ ಸಾಗಬೇಕು, ಮಹಾಮಾನವನೇ ಮುಂದೆ ದೇವ ಮಾನವನಾಗಬೇಕು. ಇಂತಹ ದಿವ್ಯ ಸಂದೇಶವನ್ನು 'ಮನುಜ' ಸಂಕಲನ ಸಾರುತ್ತದೆ.

ಲೇಖಕಿ- ಪ್ರಮೀಳ ಜಾನಪ್ಪಗೌಡ ಚಿಂಚೋಳಿ 

ಪ್ರಥಮ ಮುದ್ರಣ- 2002

ಬೆಲೆ- 30

ಪುಟಗಳು-70

ಪ್ರತಿಗಳು-1000

ಪ್ರಕಾಶಕರು -ಪ್ರಮೀಳ ಜಾನಪ್ಪಗೌಡ ಚಿಂಚೋಳಿ 

ಮನೆ 1-1495/1b/1 ಗೋದುತಾಯಿ ನಗರ ಕಲಬುರಗಿ -585102

ಬಿ. ಮಹಾದೇವಪ್ಪ, ಗುಲಬರ್ಗಾ