ಮುಧೊಳ ಗ್ರಾಮದಲ್ಲಿ ನೂರಾತೊಂಬತೇರಡನೆಯ ಬಸವ ಜ್ಯೋತಿ ಕಾರ್ಯಕ್ರಮ

ಮುಧೊಳ ಗ್ರಾಮದಲ್ಲಿ ನೂರಾತೊಂಬತೇರಡನೆಯ ಬಸವ ಜ್ಯೋತಿ ಕಾರ್ಯಕ್ರಮ
ಕಮಲನಗರ : ಇಂದಿನ ದಿನಮಾನಗಳಲ್ಲಿ ಸತ್ಸಂಗ ಕಾರ್ಯಕ್ರಮಕ್ಕೆ ತಾವು ಬರುವುದರ ಜೊತೆಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಬರಬೇಕು. ಇಂದಿನ ಮಕ್ಕಳು ಮುಂದಿನ ನಾಗರಿಕರು ಎಂದು ವಟಗೆ ನುಡಿದರು.
ಮುಧೋಳ ಗ್ರಾಮದಲ್ಲಿ ಪ್ರತಿ ತಿಂಗಳಲ್ಲಿ ನಡೆಯಲಿರುವ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಂಸ್ಕಾರದ ಕೊರತೆ ಇರುವುದರಿಂದ ಪಾಲಕರು ತಮ್ಮ ಮಕ್ಕಳ ಮೇಲೆ ವಿಶೇಷವಾದಂತಹ ಕಾಳಜಿ ವಹಿಸುವುದರ ಜೊತೆಗೆ ಆಧ್ಯಾತ್ಮಿಕ ಕುರಿತು ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಪ್ರಸ್ತಾವಿಕ ನುಡಿಯಲ್ಲಿ ಪ್ರಗತಿಪರ ರೈತರಾದ ಹಾವಗಿರಾವ ವಟಗೆ ಅವರು ಮಾತನಾಡಿದರು.
ಗುರುಬಸವೇಶ್ವರ ಅನುಭವ ಮಂಟಪದ ಹಾಗೂ ರಾಷ್ಟ್ರೀಯ ಬಸವದಳದ ಕಮಲನಗರ ತಾಲೂಕಿನ ಅಧ್ಯಕ್ಷರಾದ ಶರಣ ಶ್ರೀ ನಾಗಯ್ಯ ಸ್ವಾಮಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಒಂದು ದಿವಸದಲ್ಲಿ ಕೆಡುವ ಹಾಲಿನಲ್ಲಿ, ಎರಡು ದಿವಸದ ಕೆಡುವ ಮೊಸರಿನಲ್ಲಿ, ಮೂರು ದಿವಸದಲ್ಲಿ ಕೆಡುವ ಬೆನ್ನೆಯಲ್ಲಿ, ದೀರ್ಘಾಯುಷ್ಯವುಳ್ಳ ತುಪ್ಪ ಇರುವುದು ಎಷ್ಟು ಪರಮ ಸತ್ಯವೋ ಪ್ರತಿ ಮಾನವರಲ್ಲಿಯೂ ಜ್ಞಾನದ ಜ್ಯೋತಿ ಇರುವುದು ಅಷ್ಟೇ ಸತ್ಯ. ಆದರೆ ಅದನ್ನ ಅರಿಯಬೇಕಾದರೆ ಮಹಾತ್ಮರ ಸಂತರ ಜೀವನ ಚರಿತ್ರೆಗಳನ್ನು ಓದುವುದರಿಂದ ಜ್ಞಾನದ ಜ್ಯೋತಿಯನ್ನು ಸಮಾಜದಲ್ಲಿ ಮನೆ ಮನೆಗೂ ಮುಟ್ಟಿಸುವ ಕೆಲಸವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಇಂತಹ ಕಾರ್ಯವನ್ನು ಮಾಡುವುದು ಇವತ್ತಿನ ಕಾಲಮಾನಗಳಲ್ಲಿ ಅಗತ್ಯವಾಗಿದೆ ಎಂದು ಬಹಳ ಮಹಾರ್ಮಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮಕ್ಕೆ ಆಗಮಿಸಿರುವ ಔರಾದ(ಬಿ) ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಶ್ರೀ ಬಿಎಂ. ಅಮರವಾಡಿ ಸರ್ ಅವರು ಸನ್ಮಾನವನ್ನು ಸ್ವೀಕರಿಸಿಕೊಂಡು ಇಂತಹ ಬಸವ ಜ್ಯೋತಿ ಕಾರ್ಯಕ್ರಮಕ್ಕೆತಾವು ಬರುವುದರ ಜೊತೆ ತಮ್ಮ ಮಕ್ಕಳನ್ನು ಕರೆತರುವುದು ಅತಿ ಅಗತ್ಯವಾಗಿದೆ ಕಾರಣ ಮಕ್ಕಳಿಗೆ ವಿಶ್ವಗುರು ಬಸವಣ್ಣನವರ ಕುರಿತು ಈ ನಾಡಿನ ಅನೇಕ ಮಹಾತ್ಮರ ಸಂತರ ದಿವ್ಯ ಚರಿತ್ರೆಯನ್ನು ತಿಳಿದುಕೊಳ್ಳುವ ಸಂದರ್ಭ ಇದಾಗಿದೆ. ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ತಮ್ಮ ಮಕ್ಕಳನ್ನು ಕರೆತರುವುದು ಅತಿ ಮುಖ್ಯವಾಗಿದೆ ಎಂದು ನುಡಿದರು.
ಸುಮಾರು ವರ್ಷಗಳಿಂದ ಬಸವ ಜ್ಯೋತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಈ ಕಾರ್ಯಕ್ರಮವನ್ನು ಮುಂದೆಯೂ ಕೂಡ ತಪ್ಪದೇ ನಡೆಸಿಕೊಂಡು ಹೋಗಬೇಕು ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿರುವ ಪರಮ ಪೂಜ್ಯರಾದ ಶ್ರೀಮ ನಿ ಪ್ರ ಡಾ. ಶಿವಾನಂದ ಮಹಾಸ್ವಾಮಿಗಳು ಗುರುಬಸವೇಶ್ವರ ಸಂಸ್ಥಾನ ಮಠ ಹುಲ್ಸೂರ್ ಇವರು ಮಾತನಾಡಿ 12ನೆಯ ಶತಮಾನದ ವಿಶ್ವ ಗುರು ಬಸವಣ್ಣನವರು ಹಾಗೂ ಬಸವಾದಿ ಶರಣರು ಮಾಡಿದ ಕೆಲಸಗಳು ಬಹು ಅಮೋಘವಾದದ್ದು ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ನೀವುಗಳೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನವನ್ನು ಹೊಂದಿ ಮುಕ್ತಿಯನ್ನು ಪಡೆದುಕೊಳ್ಳಬೇಕೆಂದು ಆಶೀರ್ವದಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಕೊಂಡಿರುವ ಶರಣ ಶ್ರೀ ಮಾಧವರಾವ್ ಹುಲ್ಲಾಳೆಯವರು ಪಂಢರಪುರದ ಸಂತ ತುಕಾರಾಮ ಜೀವನ ಚರಿತ್ರೆ ಕುರಿತು ಸುಂದರವಾದ ವ್ಯಾಖ್ಯಾನದೊಂದಿಗೆ ಮನೆ-ಮನಗಳಿಗೆ ಮುಟ್ಟುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಶರಣ ಬಸವರಾಜ ಖೆಳಗೆ, ಶಿವಕುಮಾರ ಕುಂಬಾರ, ಬಸವರಾಜ ಹಳ ಕಾಯಿ, ಬಸವರಾಜ ಒಂಟೆ ,ಧನರಾಜ್ ಪಾಟೀಲ ,ಶರಣೆ ಮಹಾದೇವಿ ಸ್ವಾಮಿ , ಶಕುಂತಲಾ ಅವರಾದಿ ಹಾಗೂ ಮುಧೋಳ (ಬಿ) ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಅನೇಕ ಬಸವಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬಸವ ಬಳಗ ತಂಡದವರಿಂದ ವಚನ ಮತ್ತು ಭಜನೆ ಕಾರ್ಯಕ್ರಮವನ್ನು ನೆರವೇರಿತು.ನಂತರದಲ್ಲಿ ಮಂಗಳ ಮತ್ತು ಮಹಾಪ್ರಸಾದ ಮಾಡಿಸಲಾಗಿತ್ತು.
ನಿವೃತ್ತ ಮುಖ್ಯೋಪಾಧ್ಯಾಯರು ಕಾಶಿನಾಥ ಭವರಾ ಸ್ವಾಗತಿಸಿದರು. ವೀರೇಶ್ ಮಾಸಿಮಾಡೆ ನಿರೂಪಣೆ ಮಾಡಿದರು.ಶರಣು ಬಸವರಾಜ ಹಳಕ್ಯಾಯಿ ಸಮರ್ಪಣೆ ಮಾಡಿದರು.