ಡಾ. ಎಸ್. ಕೆ. ಅರುಣಿ

ಡಾ. ಎಸ್. ಕೆ. ಅರುಣಿ

ಡಾ. ಎಸ್. ಕೆ. ಅರುಣಿ

ದಕ್ಷಿಣ ಭಾರತದ ಶ್ರೇಷ್ಠ ಇತಿಹಾಸ ತಜ್ಞರಲ್ಲಿ ಒಬ್ಬರಾದ ಯಾದಗಿರಿ ಜಿಲ್ಲೆಯ ಶಹಾಪುರದವರಾದ ಎಸ್.ಕೆ. ಅರುಣಿ ಅವರು ಕೇಂದ್ರ ಸರ್ಕಾರದ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತು (ಐ.ಸಿ.ಹೆಚ್.ಆರ್)ನಲ್ಲಿ ಕಳೆದ 22 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಬೆಂಗಳೂರಿನ ದಕ್ಷಿಣ ಪ್ರಾದೇಶಿಕ ಕೇಂದ್ರದ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಂಶೋಧನೆಗಳು ಕರ್ನಾಟಕದ ಇತಿಹಾಸ, ಪುರಾತತ್ವ ಮತ್ತು ಕಲೆಗಳಿಗೆ ಸಂಬಂಧಿಸಿವೆ. 'ದಬ್ಬನಿ ಚಿತ್ರಕಲೆ' (2001). 'ಯಲಹಂಕ ನಾಡಪ್ರಭುಗಳ ವಾಸ್ತುಶಿಲ್ಪ 8” (2007). Surapurs Samsthana-Historical and Archaeological Study of a Poligar state in South India (2004) 'ಬೆಂಗಳೂರು ಪರಂಪರೆ-ಇತಿಹಾಸ ಸಂಶೋಧನೆಯ ಹೊಸ ನೋಟಗಳು' (2019), 'ಕರ್ನಾಟಕ ಇತಿಹಾಸದ ಅನ್ವೇಷಣೆಗಳು' ಇವರ ಸಂಶೋಧನೆಯ ಪ್ರಮುಖ ಕೃತಿಗಳಾಗಿವೆ. Gems of Scholarships-Archaeology Antiquities: Selected Articles from the QJMS 1909-2009 (2009); 'ಕರ್ನಾಟಕದಲ್ಲಿ ಪುರಾತತ್ವ ಅಧ್ಯಯನಗಳು' (2010) ಹಾಗೂ 'ನಮ್ಮ ಬೆಂಗಳೂರು' (2012) ಇವರ ಸಂಪಾದಿತ ಕೃತಿಗಳಾಗಿವೆ. ದಿ ಹಿಂದೂ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಅಂಕಣ ಬರಹಗಳು ಮತ್ತು ಸಂಶೋಧನಾ ನಿಯತಕಾಲಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ.

ಡಾ.ಶರಣಬಸಪ್ಪ ವಡ್ಡನಕೇರಿ