371 ಜೆ ಅನುಷ್ಠಾನಕ್ಕೆ ದಶ ಸಂಭ್ರಮ ಚಂದನದಲ್ಲಿ ಚರ್ಚೆ ಇಂದು

371 ಜೆ ಅನುಷ್ಠಾನಕ್ಕೆ ದಶ ಸಂಭ್ರಮ ಚಂದನದಲ್ಲಿ ಚರ್ಚೆ ಇಂದು
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಜಾರಿ ಮಾಡಿದ 371 ಜೆ ಕಲಂ ಅನುಷ್ಠಾನಗೊಂಡು ಹತ್ತು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಈ ಬಗ್ಗೆ ವಿಶೇಷ ಚರ್ಚೆಯನ್ನು ದೂರದರ್ಶನ ಚಂದನ ವಾಹಿನಿಯಲ್ಲಿ ಇಂದು ಶನಿವಾರ ಮಧ್ಯಾಹ್ನ 2:30ಕ್ಕೆ ಬಿತ್ತರಿಸಲಾಗುವುದು.
ಸಂವಿಧಾನದ 371 ಜೆ ಅನುಷ್ಠಾನದಿಂದ ಈ ಭಾಗದಲ್ಲಾದ ಬದಲಾವಣೆಗಳು ಮತ್ತು ನಿರೀಕ್ಷೆಗಳ ಕುರಿತಾಗಿ ಆರ್ಥಿಕ ತಜ್ಞರು ಮತ್ತು ನಿವೃತ್ತ ಪ್ರಾಧ್ಯಾಪಕರಾದ ಡಾ. ಸಂಗೀತ ಕಟ್ಟಿಮನಿ ಹಾಗೂ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷರು ಹಾಗೂ ಆರ್ಥಿಕ ತಜ್ಞರಾದ ಡಾ ರಜಾಕ್ ಉಸ್ತಾದ್ ಭಾಗವಹಿಸಿದ ವಿಶೇಷ ಚರ್ಚೆಯನ್ನು ದೂರದರ್ಶನ ಚಂದನ ವಾಹಿನಿ ಬಿತ್ತರಿಸಲಿದೆ ದೂರದರ್ಶನದ ವಿಶೇಷ ಕಾರ್ಯಕ್ರಮ ನಿರೂಪಕರಾದ ಡಾ. ಸದಾನಂದ ಪೆರ್ಲ ಚರ್ಚೆಯನ್ನು ನಡೆಸಿಕೊಟ್ಟಿದ್ದಾರೆ. ಈ ಭಾಗವು ಸಂವಿಧಾನದ ವಿಶೇಷ ಸವಲಭ್ಯಗಳನ್ನು ಪಡೆದು ಕಂಡ ಬೆಳವಣಿಗೆ ಹಾಗೂ ಮುಂದಿನ ದಿನಗಳಲ್ಲಿ ಅನುಸರಿಸಬೇಕಾದ ಹೆಜ್ಜೆಗಳ ಕುರಿತಾಗಿ ತಜ್ಞರು ಚರ್ಚೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವನ್ನು ಸಂಗಮೇಶ್ ಮಲ್ಲಿಕಾರ್ಜುನ್, ದಶರತ್ ಸಿದ್ರಾಮ ಮುಂತಾದ ತಂಡ ಸಿದ್ಧಪಡಿಸಿದ್ದು ವೀಕ್ಷಕರು ನೋಡಿ ಅಭಿಪ್ರಾಯ ತಿಳಿಸಬೇಕೆಂದು ಕಾರ್ಯಕ್ರಮ ಮುಖ್ಯಸ್ಥರಾದ ಸೋಮಶೇಖರ ಎಸ್ ರುಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ