ಡಾ.ಎಂ.ಜಿ.ದೇಶಪಾಂಡೆ
ಸಾಹಿತ್ಯದ ದೊರೆ ಡಾ.ಎಂ.ಜಿ.ದೇಶಪಾಂಡೆಯವರು.
ಬೀದರ ಜಿಲ್ಲೆ ಐತಿಹಾಸಿಕ, ಶರಣ ಸಾಹಿತ್ಯ ಸಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ನೆಲ,
ದೇಶಪಾಂಡೆಯವರ ಊರು ಮೊರ್ಗಿ ಗ್ರಾಮ ತೆಲಂಗಾಣ ರಾಜ್ಯಕ್ಕೆ ಒಳಪಟ್ಟಿದೆ.ಬೀದರನಿಂದ ಕೇವಲ 20 ಕಿ.ಮೀ ಅಂತರವಷ್ಟೇ.
ಹೀಗಾಗಿ ಇಲ್ಲಿ ಬಹಳ ಜನರ ಮಾತೃ ಭಾಷೆ ಕನ್ನಡ ವಾಗಿದೆ.
ದೇಶಪಾಂಡೆಯವರ ಪೂರ್ತಿ ಹೆಸರು ಮಾಣಿಕರಾವ , ತಂದೆ ಗೋವಿಂದರಾವ ದೇಶಪಾಂಡೆ,
ತಾಯಿ ಲಕ್ಷ್ಮಿಬಾಯಿ ದಂಪತಿಗಳ ಉದರದಲ್ಲಿ ದಿ 21.3.1952ರಂದು ಬೀದರನಲ್ಲಿ ಜನಸಿದರು.
ವಿದ್ಯಾಭ್ಯಾಸ
ದೇಶಪಾಂಡೆಯವರ ಬಡತನದ ಕುಟುಂಬ ಹೀಗಾಗಿ ಇವರ ವಿದ್ಯಾಭ್ಯಾಸಕ್ಕೆ ಆಂದ್ರದ ಅವರ ದೊಡ್ಡಮ್ಮನ ಮನೆಯಲ್ಲಿ ಓದಿದರು.
ಕೆಲವು ದಿನಗಳ ನಂತರ ಬೀದರಗೆ ಬಂದು ವಿದ್ಯಾಭ್ಯಾಸ ಮುಂದುವರೆಸಿದರು.
ದೇಶಪಾಂಡೆಯವರು 10 ನೇ ತರಗತಿಯಲ್ಲಿ ಓದುತ್ತಿರುವಾಗ ಅವರ ತಾಯಿಗೆ ಕ್ಯಾನ್ಸರ ರೋಗದಿಂದ ಕೆಲವೇ ದಿನಗಳಲ್ಲಿ ಮರಣ ಹೊಂದಿದರು.ಹಿರಿಯರ ಆಸೆಯಂತೆ ಪಿ.ಯು.ಸಿ. ಪೂರ್ಣಗೊಳಿಸಿದರು.
ಕೆಲವೇ ದಿನಗಳಲ್ಲಿ ಅವರಿಗೆ dcc ಬ್ಯಾಂಕನಲ್ಲಿ ಗುಮಾಸ್ತ ಹುದ್ದೆಗೆ ಸೇರಿಕೊಂಡರು ಕೆಲವು ದಿನಗಳ ನಂತರ ಭಾಲ್ಕಿ ಶಾಖೆಗೆ ವರ್ಗಾವಣೆ ವಾಯಿತು. ಬ್ಯಾಂಕಿಗೆ ಆಗಮಿಸಿದ ಶಾಂತಿ ಕಿರಣ ಪತ್ರಿಕೆಯ ಸಹ ಸಂಪಾದಕರಾದ ಡಾ.ಜಿ ಬಿ ವೀಸಾಜಿಯವರ ಪರಿಚಯವಾಯಿತು.ದೇಶಪಾಂಡೆಯವರ ಬರೆದ ಚಾಚಾ ನೆಹರು, ಗಣರಾಜ್ಯ್, ಮಂತ್ರಿ ಬಂದರು, ಬಡವನಳಿಗಾಲ ಮುಂತಾದ ಕವನಗಳು, ಹಾಗು ಇವರ ಬರೆದ ಲೇಖನಗಳು ಶಾಂತಿ ಕಿರಣ ಪತ್ರಿಕೆಯಲ್ಲಿ ಬಿತ್ತರಿಸಿವೆ.
ದೇಶಪಾಂಡೆ ಅವರ ಚೊಚ್ಚಲ ಕೃತಿ "ಪ್ರಕಾಶ_ಜ್ಯೋತಿ" ಕಾದಂಬರಿಯನ್ನು ಮುದ್ರಿಸಿ ಜನರ ಕೈಗೆ ನೀಡಿ ಸಾಹಿತ್ಯ ಲೋಕದಲ್ಲಿ ಸಂಚಲನ ಮೂಡಿಸಿದ್ದರು.
ಮತ್ತೊಂದು ಕಾದಂಬರಿ "ಹೂ_ಬಾಡಿದಾಗ "ಪ್ರಕಟಿಸುತ್ತಾರೆ.ಕೆಲವು ದಿನಗಳ ನಂತರ ಭಾಲ್ಕಿಯಲ್ಲಿ ದೇಶಪಾಂಡೆಯವರು ವೀಣಾ ಅವರನ್ನು ಮದುವೆಯಾದರು.
ಬೀದರಗೆ ವರ್ಗಾವಣೆ ಗೊಂಡು ಅಲ್ಲಿಯೂ ಕೂಡ ತಮ್ಮ ವೃತ್ತಿಯ ಜೊತೆ ಜೊತೆಗೆ ತಮ್ಮ ಬರಹದ ಮೂಲಕ ಅನೇಕ ಸಾಹಿತ್ಯ ಕೃಷಿ ಗೈದಿದ್ದಾರೆ.
ಪತ್ರಿಕ ಸಂಪಾದಕರಗಿ ಸೇವೆ.
ದೇಶಪಾಂಡೆಯವರು ವೃತ್ತಿಯ ಜೊತೆ ಜೊತೆಗೆ ಕನ್ನಡಾಂಬೆ ಕೈ ಬರಹ ಪತ್ರಿಕೆ ಸಂಪಾದಕರಾಗಿ ಮುದ್ರಿಸಿ ಓದುಗರೆ ಕೈಗೆ ನೀಡಿದ್ದಾರೆ.
ದೇಶಪಾಂಡೆಯವರು ಅನೇಕ ಸಾಹಿತಿಗಳ ಪ್ರೋತ್ಸಾಹ ಫಲವಾಗಿ 1.11.1976ರಲ್ಲಿ ಶಾಂತಿ_ಕನ್ನಡಿಗರ_ಬಳಗ ಸಂಸ್ಥೆಯನ್ನು ಹುಟ್ಟು ಹಾಕಿ ತನ್ಮೂಲಕ ಕವಿಗೋಷ್ಠಿ, ಕೃತಿ ವಿಮರ್ಶೆ,ವಿವಿಧ ವಿಷಯಗಳ ಕುರಿತು ಉಪನ್ಯಾಸ, ಸಾಹಿತಿಗಳ ಚರ್ಚಾ ಕೂಟ ಹೀಗೆ ಹತ್ತು ಹಲವಾರು ನಿರಂತರ ಕಾರ್ಯಕ್ರಮಗಳ ಮೂಲಕ ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಕೊಟ್ಟಿದ್ದಾರೆ.
ವೃತ್ತಿಯ ಜೊತೆಗೆ ಬಿಡುವು ಮಾಡಿಕೊಂಡು ಸ್ಥಳೀಯ ಪತ್ರಿಕೆಗಳಾದ ಜನ ದನಿ, ಉತ್ತರಕರ್ನಾಟಕ, ವಚನ ಕ್ರಾಂತಿ, ದಮನ್ ಪರಿಹಾರ ಕಾರಂಜ ಎಕ್ಸಪ್ರೆಸ್ ಹಾಗು ರಾಜ್ಯಮಟ್ಟದ ಪತ್ರಿಕೆಗಳಾದ ತುಷಾರ, ಪ್ರಜಾವಾಣಿ, ವಿಜಯಕರ್ನಾಟಕ, ತರಂಗ, ಮಂಗಳ ಮುಂತಾದ ಪತ್ರಿಕೆಗಳಲ್ಲಿ ಲೇಖನ, ಕಥೆ ಹಾಗು ಚಿಂತನ ವಿಷಯಗಳ ನ್ನೊಳಗೊಂಡ ಬರಹಗಳನ್ನು ಪ್ರಕಟಿಸುವದರ ಮೂಲಕ ಎಲ್ಲರ ಜನ ಮೆಚ್ಚುಗೆಗೆ ಪಾತ್ರರಾಗಿರುವರು.
ಕೃತಿಗಳು
1)ಪ್ರಕಾಶ ಜ್ಯೋತಿ,
2)ಹೂ ಬಡಿದಾಗ,
3)ಭ್ರಮೆ ಅನ್ವೇಷಣೆ,
4)ಚೆಲುವಿನ ಚಿತ್ತಾರಗಳು
5)ಪಾರಿಜಾತ
6)ಗೀತಮಾನಸ
7)ಭಕ್ತಿ ಕುಸುಮಾಂಜಲಿ
8)ಮನ ಸಾಕ್ಷಿ
9)ಕಾವ್ಯ ಚಿತ್ರಮಂಜರಿ
10)ಚಿಂತನ ಮಂದಾರ
11)ಇಂಚರ
12)ವಚನ
13)ಚಂದ್ರಿಕೆ
14)ಚಂದ್ರ ಹಾರ
15)ಕಾಮಧೇನು
16)ವಿರಹ ಪ್ರೀತಿ
17)ಶ್ರಾವಣಿ
18)ದೇವಯಾನಿ
19)ಬದುಕು
20)ಆಶಾ ಕಿರಣ.
21)ಮೀರಾಬಾಯಿ
22)ಅಜ್ಜನ ಹಳ್ಳಿ
23)ವಿದುರ ನಗರಿ
24)ಕಥೆಯಾದ ಬದುಕು
25)ಶ್ರೀ ಜಗನಾಥ ಮಹಾರಾಜ
26)ಶ್ರೀ ಹರಿದತ್ತ ಭಜನಮ್ರತ
27)ಪ್ರೀತಿ ತಂದ ಫಜೀತಿ.
28)ಕಾವ್ಯ ಸೌರಭ,
29)ಗುರುಪಾದಪ್ಪಾ ನಾಗಮರಪಳ್ಳಿ.
30)ನಾಗಲಿಂಗನ ತತ್ವಪದಗಳು.
31)ಯಾವುದು ಸತ್ಯ
32)ಚುಟುಕು ಸೌರಭ
33)ಹನಿ, ಹನಿ, ಸುಧೆ
34)ಪಾರಾಗ
35)ರತ್ನ ಧವಳ
36)ಹೂ ಬಿಡದ ಗುಲಾಬಿ ಗಿಡ
37)ಜೇಂಕಾರ.
38)ಬೆಳಕಿನ ಹೆಜ್ಜೆಗಳು
39)ದೇವನ ಜೋಕಾಲಿ
40)ಶ್ರೀ ಹರಿದತ್ತ ಭಜನಮ್ರತ
41)ಒಡೆದ ಕನ್ನಡಿ
42)ಮಾಣಿಕ್ಯ ದೀಪ್ತಿ
43)ಜೀವ ಸೆಲೆ
44)ಜೀವನವು ಇಷ್ಟೇನಾ
45)ರತ್ನ ಮಂಜರಿ
46)ಆತ್ಮ ದರ್ಶನ
47)ಸಾಹಿತ್ಯ ರತ್ನಗಳು
48)ಗ್ರಾಮ ಚೇತನ
49)ನಗುವೇ ಅಮೃತ ಮುಂತಾದ ಕೃತಿಗಳನ್ನು ರಚಿಸಿರುವರಲ್ಲದೆ *ಮಂತ್ರಮಹರ್ಷಿ ಶ್ರೀಗುರುಜಿ, ಮಂತ್ರಮಹರ್ಷಿ ಶ್ರೀ ಸದ್ಗುರು ಶ್ರೀಪತಾನಂದ ಆತ್ಮನಂದ ಮಹಾರಾಜ, ಶ್ರೀ ಜಗನಾಥ ಮಹಾರಾಜ ರ ಕೃತಿಗಳನ್ನು ಸಂಶೋಧಿಸಿ ಪ್ರಕಟಿಸಿರುತ್ತಾರೆ.
ಇವರ *ಶ್ರೀ ಮಂತ್ರ ಮಹರ್ಷಿ ಕೃತಿ ಹಿಂದಿ ಹಾಗು ಇಂಗ್ಲಿಷ್ ಭಾಷೆಗೆ ಭಾಷಾಂತರವಾಗಿದೆ
ಗೌರವ ಹಾಗು ಪ್ರಶಸ್ತಿಗಳು"
1)ಧರಿನಾಡು ಕೇಂದ್ರ ಸಾಹಿತ್ಯ ಸಂಘ ಸಮ್ಮೇಳನ :ಸರ್ವಾಧ್ಯಕ್ಷ
2)2ನೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಬೀದರ ಸಮ್ಮೇಳನ :ಸರ್ವಾಧ್ಯಕ್ಷ.
3)ಆಧುನಿಕ ಕನ್ನಡ ಸಾಹಿತ್ಯ ಕೇಂದ್ರ ಸಸ್ತಾಪುರ ಸಮ್ಮೇಳನ : ಸರ್ವಾಧ್ಯಕ್ಷ
4)ಚುಟುಕು ಸಾಹಿತ್ಯ ಪರಿಷತ್ ಸಮ್ಮೇಳನ : ಸರ್ವಾಧ್ಯಕ್ಷ
ಪ್ರಶಸ್ತಿಗಳು
1)ಬೀದರ ಜಿಲ್ಲಾಡಳಿತ :---ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
2)ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸನ್ಮಾನ ಹಾಗು ಕವಿ ಗೋಷ್ಠಿಯಲ್ಲಿ ಭಾಗಿ. (2006)
3) ಗೌರವ ಸನ್ಮಾನ 2013:----ಶರಣ ಸಂಸ್ಕೃತಿ ಉತ್ಸವ ಬೀದರ.
4)ದೇವಯಾನಿ ಕಥಾ ಸಂಕಲನಕ್ಕೆ ಗುಲ್ಬರ್ಗ ವಿಶ್ವ ವಿದ್ಯಾಲಯದಿಂದ ರಾಜ್ಯೋತ್ಸವ ಹಾಗು ಉತ್ತಮ ಕಥಾ ಪ್ರಶಸ್ತಿ
5)ಕಾವ್ಯ ಪ್ರಶಸ್ತಿ :--ಕೇರಳ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ
6)ದಾಸ ಸಾಹಿತ್ಯ ಪ್ರಶಸ್ತಿ ಪ್ರಧಾನ:--ಬಸವ ಮುಕ್ತಿ ಮಂದಿರ ಶ್ರೀ ಗಳಿಂದ
7) ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಸಮ್ಮೇಳನ ಹುಲಸೂರು : ಸರ್ವಾಧ್ಯಕ್ಷ
8)ಕಾಸರಗೋಡು ಪ್ರಶಸ್ತಿ ಹಾಗು ಬೆಂಗಳೂರು ಸಂಸ್ಥೆಯಿಂದ ಸಾಹಿತ್ಯದ ಸೇವೆ ಗಮನಿಸಿ ಗೌರವ ಡಾಕ್ಟರೇಟ್ ಪ್ರಶಸ್ತಿ ಭಾಜನರಗಿರುವ ದೇಶಪಾಂಡೆಯವರು ಸದ್ಯ ನಿವೃತ್ತಿ ಜೀವನ ನಡೆಸುತ್ತಿರುವರು.
ಸ್ವಾರ್ಥಕ್ಕಾಗಿ ಎನನನ್ನು ಬಯಸದ ವ್ಯಕ್ತಿ ಅಪ್ಪಾಜಿ ದೇಶಪಾಂಡೆಯರು ಅವರ ಬದುಕನ್ನೇ ಸಾಹಿತ್ಯ ಕ್ಷೇತ್ರ ಕ್ಕೆ ಮುಡುಪಾಗಿಟ್ಟ ಮೃದು ಮನಸಿನ ಮಾಣಿಕ್ಯ ದೇಶಪಾಂಡೆಯವರು (ಕನ್ನಡ ಕಟ್ಟಿದವರು ಪುಸ್ತಕದಲ್ಲಿ ಇವರ ಬಗ್ಗೆ ಪೂರ್ತಿ ಪರಿಚಯ ಸಿಗುತ್ತೆ ).
-ಓಂಕಾರ ಪಾಟೀಲ.
ಕಾರ್ಯದರ್ಶಿ : ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ.