ಸಿದ್ದಣ್ಣ ಕುಂಬಾರ

ಸಿದ್ದಣ್ಣ ಕುಂಬಾರ

ಸಿದ್ದಣ್ಣ ಕುಂಬಾರ 

ಸಿದ್ದಣ್ಣ ಕುಂಬಾರ ಅವರು ಮೂಲತಃ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಬೆಣ್ಣೇಸಿರೂರ ಗ್ರಾಮದವರಾಗಿದ್ದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಇವರೊಬ್ಬ ಗ್ರಾಮೀಣ ಭಾಗದ ಕೊಳಲು ನುಡಿಸುವ ಅಪರೂಪದ ಕಲೆಗಾರರಾಗಿದ್ದಾರೆ. 

ಇವರು ಚಿಕ್ಕ ವಯಸ್ಸಿನಲ್ಲಿ ಕೃಷಿ ಕಾಯಕದ ಜೊತೆಗೆ ಮೂಗಿನಿಂದ ಕೊಳಲ ನುಡಿಸುವುದನ್ನು ಚಿಕ್ಕ ವಯಸ್ಸಿನಲ್ಲಿಯೇ ಕಲಿತು ಸಾಧನೆ ಮಾಡಿದ್ದಾರೆ. ಕಲೆ ಯಾರ ಸ್ವತ್ತು ಅಲ್ಲ , ಕೊಳಲ ನುಡಿಸುವುದು ಇವರಿಗೆ ಯಾರೂ ಗುರುಗಳು ಹೇಳಿಕೊಡಲಿಲ್ಲ ಇದು ಭಗವಂತನ ಕೊಡಿಗೆ ಎಂದು ಅವರು ಸಂತೋಷದಿಂದ ಹೇಳಿಕೊಳ್ಳುತ್ತಾರೆ. 

ಬಡತನದಲ್ಲಿ ಹುಟ್ಟಿ ಬೆಳೆದು. ಅಕ್ಷರ ಅಭ್ಯಾಸ ಮಾಡದೆ 74 ಇಳಿವಶದಲ್ಲಿ ಕೂಡ ಹವ್ಯಾಸಿ ಕಲಾವಿದರಾಗಿದ್ದಾರೆ. 

ಚೆನ್ನಮಲ್ಲಪ್ಪ ತಂದೆ ಶಿವಗಂಗಮ್ಮ ತಾಯಿ ಇವರ ಉದರದಲ್ಲಿ ಎರಡನೇ ಮಗನಾಗಿ ಸಿದ್ದಣ್ಣ ಕುಂಬಾರ ಜನಿಸಿದರು. ಕೃಷಿ ಕಾಯಕದ ಜೊತೆಗೆ ಕುಂಬಾರಿಕೆಯ ಕುಲಕಸುಬು ಮಾಡಿ ಬದುಕಿದವರು.

     ಗ್ರಾಮೀಣ ಭಾಗದ ಕಲಾವಿದರನ್ನು ಸರ್ಕಾರ ಗುರುತಿಸಿ ಇಂಥವರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಬೇಕು. 

ಅಲ್ಲದೆ ಅನೇಕ ಸಂಘ ಸಂಸ್ಥೆಗಳು ಕೂಡ ಇವರನ್ನು ಗೌರವಿಸಿ ಸನ್ಮಾನ ಜೊತೆಗೆ ಕಾರ್ಯಕ್ರಮಗಳಲ್ಲಿ ಇವರ ಕಲೆಯನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟು ಆರ್ಥಿಕವಾಗಿ ಇವರನ್ನು ಸದೃಢಗೊಳಿಸಬೇಕಾಗಿದೆ.ಸಂಪರ್ಕಿಸಲು ನಂಬರ : 9880262415

ಲೇಖಕ ಶರಣಗೌಡ ಪಾಟೀಲ ಪಾಳಾ