ಒಲಿದ ರಾಜ್ಯೋತ್ಸವ ಪ್ರಶಸ್ತಿ ನೇರ ದಿಟ್ಟ ನಿಲುವಿನ ಸಾಹಿತಿ: ಡಾ.ಹನುಮಂತ ರಾವ ದೊಡ್ಡಮನಿ
ಒಲಿದ ರಾಜ್ಯೋತ್ಸವ ಪ್ರಶಸ್ತಿ
ನೇರ ದಿಟ್ಟ ನಿಲುವಿನ ಸಾಹಿತಿ: ಡಾ.ಹನುಮಂತ ರಾವ ದೊಡ್ಡಮನಿ
ಕನ್ನಡ ದಲಿತ ಚಳವಳಿ ಮತ್ತು ಸಾಹಿತ್ಯ ಎರಡು ಕಡೆ ಏಕಕಾಲದಲ್ಲಿ ಹೋರಾಟ ಮಾಡಿದವರಲ್ಲಿ ಡಾಹನುಮಂತರಾವ ಬಿ.ದೊಡ್ಡಮನಿ ಒಬ್ಬರು.ಅವರು ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದವರು.ಇವರ ತಂದೆ ಕೃಷಿಕ.ದಲಿತ ಬಡತನದ ಮಧ್ಯ ಜಾನಪದ ವೈದ್ಯ ಪದ್ಧ ತಿಯನ್ನು ಕಲಿತದ್ದರಿಂದ ಹಲವರಿಗೆ ಉಪಯೋಗವಾ ಯಿತು.ಇಂತಹ ಮನೆತನದ ಭೀಮಶಾ ಮತ್ತು ಆದರ್ಶ ಗೃಹಿಣಿ ಹುಚ್ಚಮ್ಮ(ಪಾರವ್ವ)ರ ಮಗನಾಗಿ ೧ನೇ ಜೂನ್ ೧೯೫೮ರಲ್ಲಿ ಏಳನೆಯ ಮಗನಾಗಿ ಹುಟ್ಟಿದ್ದರು.ಭೀಮ ಶಾ ಇವರ ತಂದೆ ಸರಕಾರದ ಪಿಡಬ್ಬ್ಯೂದಲ್ಲಿ ಗ್ಯಾಂಗ್ ಮ್ಯಾನ್ ರಾಗಿ ಸೇವೆ ಸಲ್ಲಿಸಿದರು.
ಮಲ್ಲಾಬಾದಿಯಲ್ಲಿಯೇ ಇವರ ಶಿಕ್ಷಣ ಕಲಿಕೆ ಪ್ರಾರಂಭವಾಯಿತು.ಪ್ರತಿಭಾಂತ ವಿದ್ಯಾರ್ಥಿ. ಆಗಲೇ ಜನಪದ ಹಾಡು,ಕುಣಿತಗಳಲ್ಲಿ ಆಸಕ್ತಿ ಹೊಂದಿದರು. ವಿದ್ಯಾಭ್ಯಾಸದ ಕಡೆ ವಿಶೇಷ ಆಸಕ್ತಿಯನ್ನು ತಂದೆ ಹೊಂದಿದಂತೆ,ಹನುಂಮತರಾವರು ಸಹ ಚೂಟಿಯಾಗಿ ಅಂದೇ ಪ್ರಶ್ನಿಸುವ ಗುಣ ಬೆಳೆಸಿಕೊಂಡರು.ಅಣ್ಣಾರಾ ವ್ ಬಸವಂತರಾವ್ ಮಾಲಿಪಾಟೀಲರು ಇವರ ಊರಿ ನವರೇ ಆಗಿದ್ದರಿಂದ ಶಿಕ್ಷಕರಾಗಿದ್ದರಿಂದ ಇವರ ಮೇಲೆ ಹೆಚ್ವಿನ ಕಾಳಜಿ ಹೊಂದಿದ್ದರಿಂದ ಏಳನೆಯ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ೧೯೬೪ರಲ್ಲಿ ಪಾಸಾದರು. ಎಸ್.ಎಸ್.ಎಲ್.ಸಿಯನ್ನ
೧೯೭೭ರಲ್ಲಿ ಉತ್ತೀರ್ಣರಾದರು. ಪಿಯುಸಿ ೧೯೭೭ ರಲ್ಲಿ ,ಬಿ.ಎ.೧೯೮೨ರಲ್ಲಿ ತೇರ್ಗಡೆಯಾದರು. ಮುಂಬೈ ನಲ್ಲಿ ನೌಕರಿ ಸೇರಿದರು.ತದನಂತರ ಎಂ.ಎ.,ಕನ್ನಡ ಮ ತ್ತು ಜಾನಪದ ವಿಷಯ ಆಯ್ದುಕೊಂಡು ೧೯೮೭ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಾಸಾದರು. ಚುಂವೂರು ಮಾಪುರ ತಾಯಿ: ಒಂದು ಅಧ್ಯಯನ ಎಂಬ ವಿಷಯ ಆಯ್ದುಕೊಂಡಿ ಡಾ.ಬಸವರಾಜ ಪೋ ಲಿಸ್ ಪಾಟೀಲ ಅವರ ಮಾರ್ಗದರ್ಶನದಲ್ಲಿ ೨೦೦೭ರ ಲ್ಲಿ ಡಾಕ್ಟರೇಟ್ ಪದವಿ ಪಡೆದರು.ಯುಜಿಸಿ ನೆಟ್ ಪಾಸಾದರು.
ವೃತ್ತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜಿ ನಲ್ಲಿ ಕನ್ನಡ ಉಪನ್ಯಾಸಕರಾಗಿ,ಹಿರಿಯ ಶ್ರೇಣಿ ಉಪ ನ್ಯಾಸಕರಾಗಿ ಆಳಂದ,ಅಫಜಲಪುರ, ಮಹಾಗಾಂವ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ವಿಶ್ರಾಂತ ಜೀವನ ಕಲಬು ರಗಿಯ ಸಿರಸಿಮಡ್ಡಿಯಲ್ಲಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದಲ್ಲಿ ಪಾ ಲ್ಗಿಂಡವರು.ದಲಿತ ಚಳವಳಿಯಲ್ಲಿ ಡಾ.ಡಿ.ಜಿ.ಸಾಗರ ಅವರೊಂದಿಗೆ ಹಲವು ಹೋರಾಟದಲ್ಲಿ ಪಾಲ್ಗೊಂಡು
ಹೊಡೆತಬಡಿತದ ಸಿಹಿ ಉಂಡು ಜೇಲು ಸೇರಿದರು.ಹಿಡಿ ದ ಹಠ ಬಿಡದವರು.ಇನ್ನೊಬ್ಬರಿಗೆ,ತನಗೆ ಅನ್ಯಾಯ ಆಗಬಾರದೆಂದು ಚಳವಳಿಯ ನೇತೃತ್ವ ವಹಿಸಿಕೊಂಡ ರು.ಅನೇಕ ಗಾಯಗಳಾಗಿವೆ.ಚಾಕು,ಚೂರಿಗಳಿಂದ ಹಿಂಸಾತ್ಮಕ ಮತ್ತು ಶಾಂತಿ ಎರಡು ಮೂಲಕ ಚಳವಳಿ ಗೆ ಇಂಬು ನೀಡಿದವರು.ಆ ಗುಣ ಇಂದಿಗೂ ಇದೆ.ರಾಜ ಕೀಯ ರಂಗದಲ್ಲಿಪ್ರವೇಶ ಪಡೆದು ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಸೋಲು ಕಂಡವರು.ತಮ್ಮ ಜೀವನ ದ ಬಹು ಭಾಗ ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾ ಗಿ ತಮ್ಮನ್ನು ತಾವು ತೊಡಗಿಸಿಕೊಂಡವರು.
ಬಾಲ್ಯದಿಂದಲೇ ಸಾಹಿತ್ಯ ಆಸಕ್ತಿ ಹೊಂದಿದ್ದರು. ಆದರೆ ಇವರ ಪ್ರಕಟಣೆಗಳು ೧೯೯೫ ರಿಂದ ಪ್ರಾರಂಭ ವಾದವು.ಅಲ್ಲಿಂದ ೨೦೨೪ರತನಕ ಮೂವತ್ತು ಕೃತಿಗ ಳನ್ನು ಪ್ರಕಟಿಸಿದ್ದಾರೆ
ಕಾವ್ಯ ಕ್ಷೇತ್ರದಲ್ಲಿ ಸಾಕಷ್ಟು ದುಡಿದವರು.ಆವೇಶ,ಶೋ ಷಣೆ,ಬಡತನ,ನಿರುದ್ಯೋಗ, ಅಸಮಾನತೆ,ಮೌಢ್ಯತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ಲಿಂಗ ತಾರತಮ್ಯ, ತಮ್ಮನ ಅಗಲುವಿಕೆ ಮೊದಲಾದ ಸಾಮಾಜಿಕ ವಿಷಯಗಳ ಕು ರಿತು ಗಂಭೀರವಾದ ಕವನ ರಚಿಸಿದ್ದಾರೆ.ಅವರಲ್ಲಿ ಒಂ ದು ಬದ್ಧತೆಯಿದೆ.ಬುದ್ದ,ಬಸವ,ಅಂಬೇಡ್ಕರ್ ಅವರ ಚಿಂತನೆಗಳನ್ನು ಒಪ್ಪಿ,ಅಪ್ಪಿ ಅದರಂತೆ ಬಾಳಿ ಬದುಕಿದ ಬಹುಶ್ರುತ ಕವಿ.ದಲಿತ-ಬಂಡಾಯದ ಕಹಳೆ ಜೊತೆಗೆ ಮಾನವಿಯತೆ ಪ್ರತಿಪಾದಿಸುವ ಜೀವಿ ದೊಡ್ಡಮನಿಯ ವರು. ಮೂರು ದಶಕಗಳ ಅವರ ಕಾವ್ಯಯಾನದಲ್ಲಿ
ಹಲವು ಪ್ರಯೋಗಗಳನ್ನು ಮಾಡಿದ್ದಾರೆ.ಅದರ ಜೊತೆ ಗೆ ಸೃಜನಶೀಲ ಸಂವೇದನೆಯ ಕವಿಯಾದವರು.
ನೊಂದವರ ಹಾಡುಗಳು(೧೯೯೫),ನಮ್ಮದೇಶ ನಮ್ಮ ಜನ(೧೯೯೭),ಆಕ್ರೋಶ (೨೦೦೨),ಮರೆಯದ ಮಾಣಿಕ್ಯ(೨೦೧೧),ಪಂಚಾಯತಿ(೨೦೧೩), ಮತ್ತು ಸೊಲ್ಲೆತ್ತಿ ಹಾಡೇನ( ೨೦೨೦) ಹೀಗೆ ಆರು ಕವನ ಸಂಕ ಲನವನ್ನು ಹೊರ ತಂದು ಗಮನ ಸೆಳೆದವರು.ಸದಾ ಕಿಚ್ವು ದಲಿತಪರ ಧೋರಣೆ ಅವರ ಕಾವ್ಯದ ಆಶಯ. ನೈಜತೆಯ ಬದುಕನ್ನು ಬಿಂಬಿಸುತ್ತವೆ.ಶ್ರೀಸಾಮಾನ್ಯರ ಒಳನೋಟ ಬಿತ್ತರಿಸುವ ಕಾರ್ಯ ಕವನಗಳಲ್ಲಿವೆ.ಬಂ ಡಾಯದ ಧೋರಣೆ,ದಲಿತ ಪ್ರಜ್ಞೆ, ಆಷಾಡಭೂತಿತನ, ಧರ್ಮ,ರಾಜಕೀಯ,ಭ್ರಷ್ಟಾಚಾರ,ಅತ್ಯಾಚಾರದಂತಹ ಹಲವು ವೈವಿಧ್ಯಮಯ ಕಾವ್ಯ ಓದುಗರ ಗಮನ ಸೆಳೆದಿವೆ.ಸಿಟ್ಟು,ಸೆಡವು,ಮನುಷ್ಯನ ನೀಚತನ, ಕ್ರೂರ ತ್ವವನ್ನು ಪ್ರಶ್ನಿಸುತ್ತಾರೆ.ನೊಂದವರ ಹಾಡು ಕವನ.ಬಡ ವರ,ದಲಿತರ ಶೋಷಣೆ ಶಹಾಪೂರದ ಲಕ್ಷ್ಮಣ ಬೆಂಡಿ ಗೇರಿ,ನಿರ್ಣಾ,ಡೊಂಗರಗಾಂವ,ಚಿಂಚೋಳಿ,ಅಳ್ಳಗಿ,ಗಣಜಲಖೇಡದಲ್ಲಿ ನಡೆದ ಘಟನೆಗಳು, ಸಾವು,ಹೆಣ ಹೂಳಲು ಜಾಗವಿಲ್ಲ ಇವನ್ನೆಲ್ಲ ನೋಡಿ,ಅನುಭವಿಸಿದ ಯಾತನೆ
ಇನ್ನೇನು ದಲಿತರು ಹೆದರಬೇಡಿ
ದಲಿತ ಸಂಘವಿದೆ ಬಂದು ಬಿಡಿ
ಸಂಘೊಂದು ಕಟ್ಟಬೇಕು
ಸಂಘಟಿತರಾಗಬೇಕು ಎನ್ನುವ ಮೂಲಕ ದಸಂಸದ ಆಶಯದಂತೆ ಹೋರಾಟ ಮಾಡಿ ನ್ಯಾಯ ಗೆಲ್ಲೋಣ ಎಂದು ವಿವರಿಸುವರು ಕವಿ.ಕಿಡಿ ಎಂಬ ಕವನದಲ್ಲಿ
ಕಣಕದಿರು ಮಬುಜ
ಕೆಣಕಿ ತಿಣಕದಿರು
ನೊಂದ ಮನುಜರ
ಮನಸ್ಸು ಚಲಿಸದೆಂದು
ನೀವತಿಳಿಯದಿರು
ಎಂಬ ಮಾತುಗಳು ಮನನೀಯವಾಗಿವೆ.
ನಾಟಕಗಳು: ರಂಗಭೂಮಿಯ ಮೂಲಕ ಬಯಲಾಟ, ದೊಡ್ಡಾಟ,ಸಣ್ಣಾಟ,ವೃತ್ತಿ, ಹವ್ಯಾಸಿ, ನಂತರದಲ್ಲಿ ಅನೇಕ ನಾಟಕಗಳು ಬಂದಿವೆ.ದಲಿತ ಬಂಡಾಯದ ಹೊತ್ತಿಗೆ ಹಲವಾರು ವೈಜ್ಞಾನಿಕ, ವೈಚಾರಿಕ ನಾಟಕಗಳ ವೈವಿಧ್ಯತೆ ಕಾಣುತ್ತೇವೆ.ಅದರಂತೆ ಜನಸಾಮಾನ್ಯರಿಂದ ಅನೇಕ ಸಾಮಾಜಿಕ ತಲ್ಲಣ,ವರ್ತಮಾನದ ನಾಟಕವ ನ್ನು ಡಾ.ಹನುಮಂತರಾವ ದೊಡ್ಡಮನಿ ರಚಿಸಿದ್ದಾರೆ. ದೇವಿ ಕಾರ್ಯ, ಏಡ್ಸಬಂತು,ಚಂಪಿ ಕನಸು,ಬಲಿಪಶು, ಕನಸು ನನಸಾಗಲಿಲ್ಲ ಎಂಬ ಆರು ನಾಟಕಗಳನ್ನು ತುಂ ಬಾ ಅರ್ಥಪೂರ್ಣವಾಗಿ ರಚಿಸಿದ್ದಾರೆ. ಇವು ರಂಗ ಪ್ರಯೋಗ ಕಂಡಿವೆ. ಈ ಪ್ರದೇಶದ ಆಚರಣೆಗಳನ್ನು ಗಮನದಲ್ಲಿಟ್ಟುಕೊಂಡು ಬರೆದವರು.ಮೌಢ್ಯತೆ,ಕಂದಾ ಚಾರ,ಧಾರ್ಮಿಕ ಪದ್ಧತಿಗನುಸಾರವಾಗಿ,ಸಂಪ್ರದಾಯ ಹೆಸರಲ್ಲಿ ತುಂಬುವ ಮೌಢ್ಯವನ್ನು ಎತ್ತಿ ಹೇಳಿದ್ದಾರೆ. ಆ ನಾಟಕದ ಅಂಕ,ದೃಶ್ಯ, ಸಂಭಾಷಣೆ, ಪಾತ್ರ ರಚನೆಗ ಳಿಂದ ಓದುಗರಲ್ಲಿ ಕುತೂಹಲ ಹುಟ್ಟಿಸಿ ಚಿಂತನೆಗೆ ಹಚ್ಚಿವೆ. ಏಡ್ಸ್ ಬಂತು ನಾಟಕ ಬಹು ಜನಪ್ರಿಯತೆ ಗಳಿಸಿತು. ಕಳೆದ ಇಪ್ಪತ್ತು ವರ್ಷಗಳ ಹಿಂದೆ ಮಹಾಮಾ ರಿ ರೋಗವಾಗಿ ಅನೇಕರನ್ನು ಬಲಿತೆಗೆದುಕೊಂಡಿದೆ.ಈ ಸಮಾಜ ನೋಡುವ ದೃಷ್ಟಿ, ಅದನ್ನು ತಡೆಗಟ್ಟಲು ವಹಿ ಸಬೆರಕಾದ ಎಚ್ಚರವನ್ನು ಸಂದೇಶ ನೀಡುವ ನಾಟಕ.
ಚಂಪಿ ಕನಸು ಮತ್ತು ಕನಸು ನನಸಾಗಲಿಲ್ಲ ಎರಡು ನಾಟಕ ಸಾಮಾಜಿಕ ವ್ಯವಸ್ಥೆಯನ್ನು ಅನಾವರಣಗೊ ಳಿಸುತ್ತವೆ.ಪರಿವಾಜ್ರಕ ಬುದ್ಧನ ತತ್ವ ಸಂದೇಶ ಸಾರುವ
ನಾಟಕ.ಇದರಲ್ಲಿ ವೈಚಾರಿಕ ದೃಷ್ಟಿಗೋಚರ ವಾಗುತ್ತದೆ.
ಇಂತಹ ನಾಟಕಗಳ ಮೂಲಕ ದೊಡ್ಡಮನಿ ಅವರ ಸಂದೇಶಗಳು ಗೊತ್ತಾಗುತ್ತವೆ.
ಪಂಚಮ ಆತ್ಮಕಥನ: ದಲಿತ ಆತ್ಮಕಥೆಗೆ ಒಂದು ದೃಷ್ಟಿ ಸೃಷ್ಟಿ ಇದೆ.ಮಹಾರಾಷ್ಟ್ರದ ದಲಿತ ಆತ್ಮಕಥನ ತುಂಬಾ ಜನಪ್ರಿಯವಾಗಿವೆ.ಹಾಗೇ ಕನ್ನಡದಲ್ಲಿ ಮಾಲಗತ್ತಿ,ಸಿದ್ಧ ಲಿಂಗಯ್ಯ,ಎಲ್.ಹನುಮಂತಯ್ಯ,ಮೂಡ್ನಾಕೂಡು, ಸುಳ್ಳದ್,ದೇಶಮಾನೆ ಸಮತಾ,ಪೋತೆ,ಮೊದಲಾದ ದಲಿತ ಆತ್ಮಕಥನದಂತೆ ಪಂಚಮ ವಿಭಿನ್ನ ಮತ್ತು ಜಾನಪದ ಶೈಲಿಯಲ್ಲಿ ರಚಿಸಿದ್ದಾರೆ. ಅವರ ಪರಿಸರ,ಪ್ರ ಭಾವ,ಓದು,ಶೈಕ್ಷಣಿಕ, ವೃತ್ತಿ,ಅಒಮಾನ,ಅವಮಾನಗ ಳನ್ನು ಮೆಟ್ಟಿ ನಿಂತ ಪರಿಯನ್ನು ತುಂಬಾ ಅರ್ಥಗರ್ಭಿತ ವಾಗಿ ನಿರೂಪಿಸಿದ್ದಾರೆ. ಇದೊಂದು ಆತ್ಮಕಥನ ಕ್ಕೆ ಸೇರುವ ಕೃತಿ.
ಕಥಾ ಸಾಹಿತ್ಯ:ಕನ್ನಡ ಸಾಹಿತ್ಯ ಅತ್ಯಂತ ಪ್ರಖರವಾಗಿ ಬೆಳವಣಿಗೆ ಆಗಿರುವುದು ಕಥೆಗಳಿಂದಲೇ.ಮಾಸ್ತಿಯಿಂ ದ ಆರಂಭವಾಗಿ ಅನೇಕ ಸಂವೇದನೆ ಬಂದು ಹೋಗಿವೆ ಅವುಗಳಲ್ಲಿ ಗ್ರಾಮೀಣ, ದಲಿತ, ಶೋಷಣೆ, ಅಪಮಾ ನ,ಅವಮಾನ, ಜೀವನದ ತಲ್ಲಣಗಳನ್ನು ಕಂಡು ಬರು ವುದು ಡಾ.ಹನುಮಂತರಾವ ಅವರಲ್ಲಿ. ಶಾರಿ ಶಾಣ್ಯಾ ಆದಾಗ ಮತ್ತು ಬಿಸಿಲು ಬೆಳದಿಂಗಳು ಎರಡು ಕಥಾ ಸಂಕಲ ವಾಸ್ತವವಾಗಿ ದಲಿತ,ಸಾಮಾಜಿಕ ಬಹುಮುಖ ದ ವಸ್ತು ಅನಾವರಣವಾಗಿವೆ.ನಡೆದ ಘಟನೆಗಳು, ನೈಜ ಚಿತ್ರಣಗಳನ್ನು ಬಹು ಸೂಕ್ಷ್ಮ ವಾಗಿ ಚಿತ್ರಿಸಿದ್ದಾರೆ. ಹಳ್ಳಿಯ ಅನುಭವ,ಅಕ್ಷರ ವಂಚಿತ ಮಹಿಳೆಯರ ಬಗೆ ಇಲ್ಲಿ ರಚನೆಗೊಂಡಿವೆ.
ವ್ಯಕ್ತಿ ಚಿತ್ರಣ/ಜೀವನ ಚರಿತ್ರೆ: ಒಬ್ಬ ವ್ಯಕ್ತಿ ಮಾಡಿದ ಸಾಧನೆ,ಆತನ ಜೀವನ ವಿವರಗಳನ್ನು ತುಂಬಾ ಆಪ್ತ ವಾಗಿ,ಆಯಾ ಪರಿಸರ ಹಿನ್ನೆಲೆಯಲ್ಲಿ ಸಾವಿರದ ಮಹಾ ನುಭಾವರು ಎಂಬ ಶೀರ್ಷಿಕೆ ಸಾವೇ ಇಲ್ಲದ ವ್ಯಕ್ತಿ ಚಿತ್ರ ಣಗಳು ಇದರಲ್ಲಿವೆ.
ಸಂಶೋಧನೆ: ಚುಂಚೂರು ಮಾಪುರ ತಾಯಿ ಒಂದು ಅಧ್ಯಯನ ಎಂಬ ತಲೆ ಬರಹದಡಿಯಲ್ಲಿ ಸಾಂಸ್ಕೃತಿಕ ಅಧ್ಯಯನ ಮಾಡಿದ್ದಾರೆ. ಇದರ ಹಿನ್ನೆಲೆ ಅಧ್ಯಯನ ದ ಮಹತ್ವ, ಉದ್ದೇಶ, ವ್ಯಾಪ್ತಿ,ಮಾಪುರ ತಾಯಿಯ ಪರಂ
ಪರೆ,ಬಹುಮುಖಿ ಜಾನಪದ ಅಧ್ಯಯನದ ಮೂಲಕ ಹೊರ ಹಾಕಿದ್ದಾರೆ.ಇದೊಂದು ಮಹತ್ವದ ಅಧ್ಯಯನ. ಕ್ಷೇತ್ರ ಕಾರ್ಯ,ಧಾರ್ಮಿಕ ವಿವಿಧ ವಿಚಾರ ಚಿಂತನೆ ಮಂಥನೆ ಮಾಡಿ ಹೊಸ ಹೊಳವುಗಳನ್ನು ಇಲ್ಲಿ ದಾಖ ಲಿಸಿದ್ದಾರೆ.
ಜಾನಪದ: ಜಾನಪದ ಅಧ್ಯಯನ ತುಂಬಾ ಸಮರ್ಥ ವಾಗಿ ಡಾ.ದೊಡ್ಡಮನಿಯವರು ಮಾಡಿದ್ದಾರೆ.ಜನಪದ ವಿವಿಧ ಆಯಾಮದ ವಿಷಯಗಳನ್ನು ತಗೆದುಕೊಂಡು
ಸುಕ್ಷೇತ್ರ ಘತ್ತರಗು,ಜಾನಪದ ಹಬ್ಬಗಳು ಎಂಬ ಕೃತಿ ಯಲ್ಲಿ ಹಬ್ಬಗಳಾದ ವಿಜಯದಶಮಿ,ದೀಪಾವಳಿ, ಬಹು ಬಗೆಯ ಹಬ್ಬ ಹರಿದಿನಗಳನ್ನು ಅದರ ಹಿನ್ನೆಲೆ, ಪರಂಪರೆ ವಿಶಿಷ್ಠವಾದ ಆಚರಣೆಗಳು ತುಂಬಾ ಕಲಾ ತ್ಮಕವಾಗಿ ನಿರೂಪಿಸಿದ್ದಾರೆ. ಈ ಹಬ್ಬಗಳನ್ನು ತಿಳಿಯು ವ ಆಕರ ಗ್ರಂಥವಾಗಿದೆ.ಘತ್ತರಗಿ ಭಾಗಮ್ಮ,ಸುಕ್ಷೇತ್ರ ಘತ್ತರಗಿ ಈ ಎರಡು ಕೃತಿಗಳು ನಮ್ಮ ಪ್ರಾದೇಶಿಕ ದೇ ವತೆ ಮತ್ತು ಸ್ಥಳ ಮಹಿಮೆಯನ್ನು ತಿಳಿಸುತ್ತವೆ.ಈ ಕೃತಿ ಗಳು ಮೂರು ಮುದ್ರಣ ಕಂಡಿವೆ.ಮರಾಠಿಗೂ ಅನು ವಾದಗೊಂಡಿವೆ.
ಜಾನಪದ ತೊಟ್ಟಿಲು: ಜಾನಪದ ಸಂಗಮ,ಹಚ್ಚಡದ ಪದರಾಗ,ಜಾನಪದ ಜೀವನ ಮೌಲ್ಯಗಳು, ಐದು ಪ್ರ ಮುಖ ಗ್ರಂಥಗಳು.ಇಲ್ಲಿಜಾನಪದ ಸಾಹಿತ್ಯ,ಕಲೆ,ಕಲಾ ವಿದರು,ಜಾನಪದ ವಿದ್ವಾಂಸರು, ಜನಪದ ರಂಗಭೂ ಮಿ ಕುರಿತಾದ ಮಹತ್ವದ ಸಂಶೋಧನಾ, ವಿಮರ್ಶೆ, ಲೇಖನಗಳು, ಜನಪದ ಕೃತಿ ಅವಲೋಕನ ಬಹು ಸ್ವಾರ ಸ್ಯವಾಗಿ ವಿವರಿಸಿದ್ದಾರೆ. ಇವು ಸ್ವತಂತ್ರ ರಚನೆಗಳು. ಅವರ ಓದು,ಕ್ಷೇತ್ರ ಕಾರ್ಯ,ಅನುಭವಗಳಿಂದ ತುಂಬ ವೈವಿಧ್ಯ ಜಾನಪದ ಕೃತಿಗಳಾಗಿವೆ.
ಖಜೂರಿ ಶ್ರೀ ಕೋರಣೇಶ್ವರ ಕಾವ್ಯ ದರ್ಶನ: ಆಳಂದ ತಾಲೂಕಿನ ಖಜೂರಿಯ ಕೋರಣೇಶ್ವರ ಶ್ರೀಗಳ ಪರಂ ಪರೆ,ಮಠದ ಹಿನ್ನೆಲೆ, ಅವರ ಹುಟ್ಟು, ಬಾಲ್ಯ,ಶಿಕ್ಷಣ, ಅಧ್ಯಯನ, ಮಠದ ಮರಿಯಾಗಿ ಮಾಡಿದ ಘಟ್ಟ,ಮಠ ದ ಪೀಠಾಧಿಪತಿಯಾಗಿ ಮಾಡಿದ ಸಾಧನೆ,ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ದಾಸೋಹ, ಕಾಯಕ ಮುಂತಾದ ವಸ್ತು, ವಿಷಯಕ್ಜೆ ಸಂಬಂದಿಸಿದ ಮಾಹಿತಿಯನ್ನು ತ್ರಿಪ ದು ಮೂಲಕ ರಚನೆ ಮಾಡಿದ್ದು ಇದೊಂದು ಕೇವಲ ಕಾವ್ಯವಲ್ಲ.ಮಹಾಕಾವ್ಯ ವಾಗಿ ಜನಪದ ಮಹಾಕಾವ್ಯ ವಾಗಿದೆ.
ಬೆಳ್ಳಕ್ಕಿ ಬೆದರ್ಯಾವ ಜನಪದ ಕಥಾ ಸಂಕಲನ. ಅಲ್ಲದೇ ಅವರ ರಚನೆಗಳು ಸೃಜನಶೀಲತೆಯಿಂದ ಕೂಡಿವೆ.ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದಾರೆ. ಹತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟಣೆ ಹಂತದಲ್ಲಿವೆ.ಇವರ ಲೇಖನ ಗಳು ಅಭಿನಂದನ ಗ್ರಂಥ, ಸ್ಮರಣ ಸಂಚಿಕೆ,ಸಂಪಾದನೆ ಗ್ರಂಥಗಳಲ್ಲಿ ನೂರಾರು ಲೇಖನ,ಕವನ,ಜಾನಪದ ಲೇಖನ ಪ್ರಕಟಗೊಂಡಿವೆ.ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾಗಿ,ಅನೇಕ ಕನ್ನಡ ಪರ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಸದಾ ಕ್ರಿಯಾಶೀಲ ವ್ಯಕ್ತಿ.ಹಲವು ವಿಚಾರ ಸಂಕಿರಣ, ಕವಿಗೋಷ್ಟಿ,ಸಮ್ಮೇಳನಗಳಲ್ಕಿ ಕವನ ವಾಚನ,ಆಶಯ ನುಡಿ,ಅಧ್ಯಕ್ಷೀಯ ನುಡಿ ಆಡಿದ್ದಾರೆ. ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ಒಂದು ಅಖಿಲ ಕರ್ನಾಟಕ ದಲಿತ ಸಮ್ಮೇಳನ ವನ್ನು ಪ್ರೊ.ಟಿ.ಎಂ.ಭಾ ಸ್ಕರ ಸರ್ವಾಧ್ಯಕ್ಷತೆಯಲ್ಲಿ ಜರುಗಿದೆ.ಆಕಾಶವಾಣಿ, ದೂರದರ್ಶನ ಕಾರ್ಯಕ್ರಮ ನೀಡಿರುವರು.ಇವರ ಸಾಧನೆಯನ್ನು ಗಮನಿಸಿ ಅಫಜಲಪುರ ತಾಲೂಕಾ ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಜಿಲ್ಲಾ ಹದಿನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸವಾಧ್ಯಕ್ಷರಾಗಿ ಮಹತ್ವದ ಭಾಷಣ ಮಾಡಿದ್ದಾರೆ.
ಇವರಿಗೆ ಕರ್ನಾಟಕ ರಾಜ್ಯೋತ್ಸವ ತಾಲೂಕಾ,ಜಿಲ್ಲಾ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ಡಿವಿಜಿ,ಯುವ ರತ್ನ,ಹರಿಶ್ಚಂದ್ರ ದಿಗ್ಸಂಗಿಕರ ಜಾನಪದ ಪ್ರಶಸ್ತಿ ಒಳಗೊಂಡ ಮೂವತ್ತಕ್ಕೂ ಹೆಚ್ಚು ಪ್ರಶಸ್ತಿ ಗೌರವ ಲಭಿಸಿವೆ. ಡಾ.ಹನುಮಂತ ರಾವ ಬಿ ದೊಡ್ಡಮನಿಯವರು ಕವಿಯಾಗಿ,ಕಥೆಗಾರರಾಗಿ,ಜಾನ ಪದ ವಿದ್ವಾಂಸರಾಗಿ,ನಾಟಕಕಾರರಾಗಿ,ಉತ್ತಮ ಉಪನ್ಯಾಸಕರಾಗಿ,ದಲಿತ ಚಳವಳಿ ಹೋರಾಟ ದಲ್ಲಿ ಪಾಲ್ಗೊಂಡ ಹಿರಿಯ ಸಾಹಿತಿ ಅರವತ್ತಾರರಲ್ಲೂ ಕಷ್ಟ ನಷ್ಟ ನೋವು ಅನುಭವಿಸಿದರು.ತಮ್ಮ ಬದ್ದತೆ ಸ್ವಾಭಿ ಮಾನ ಮಾರುಕೊಳ್ಳದ ದಿಟ್ಟ,ನೇರ ನಿಲುವಿನ ಬರಹಗಾರರಾಗಿರುವುದೇ ಸಮಾಜದ ಗೌರವ ಪಡೆದ ಸಮಾಧಾನದ ಸಂಗತಿ.ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ಕಲಬುರಗಿ ಜಿಲ್ಲೆಗೆ ಸಂದ ಗೌರವವಾಗಿದೆ.
ಡಾ.ಗವಿಸಿದ್ಧಪ್ಪ ಎಚ್.ಪಾಟೀಲ
ಸಾಹಿತಿ- ಲೇಖಕ, ಕಲಬುರಗಿ