ಜಾನಪದ ಕೋಗಿಲೆ ಶಂಭುಲಿಂಗ ವಾಲ್ದೊಡ್ಡಿ.

ಜಾನಪದ ಕೋಗಿಲೆ ಶಂಭುಲಿಂಗ ವಾಲ್ದೊಡ್ಡಿ.

ಜಾನಪದ ಕೋಗಿಲೆ ಶಂಭುಲಿಂಗ ವಾಲ್ದೊಡ್ಡಿ.

ತನ್ನ ಇಡೀ ಜೀವನವನ್ನೇ ಜಾನಪದ ಸಾಹಿತ್ಯ, ಸಂಗೀತ, ನಾಟಕ, ಬೀದಿ ನಾಟಕಗಳ ಮೂಲಕ ಜನರಲ್ಲಿನ ಮೂಡನಂಬಿಕೆ ವಿರುದ್ಧ ,ಅನ್ಯಾಯಕ್ಕೋಳಗಾದವರ ಪರ ದ್ವನಿ ಎತ್ತುವ ಕೆಲಸ ಮಾಡಿದ್ದಾರೆ .

 ಕಲ್ಯಾಣ ಕರ್ನಾಟಕದ ಬೀದರ ಜಿಲ್ಲೆಯ ಬಡ ಕಲಾವಿದರಾದ ಶಂಭುಲಿಂಗ ವಾಲ್ದೊಡ್ಡಿ

ಇವರು ವೃತಿಯಲ್ಲಿ ಶಿಕ್ಷಕರಾಗಿ ಜೊತೆಗೆ ಹಳೆ ತತ್ವಪದ, ಜಾನಪದ ಗೀತೆಗಳು, ನಾಟಕ ರಂಗಕಲೆ ಉಳಿಸಿ ಬೆಳೆಸಿಕೊಂಡು ಬಂದವರು.

ಮೂಲತ ಬೀದರ ತಾಲೂಕಿನ ವಾಲ್ದೊಡ್ಡಿ ಗ್ರಾಮದ ತಾಯಿ ಚಂದ್ರಮ್ಮ ಹಾಗೂ ತಂದೆ ನರಸಪ್ಪ ದಂಪತಿಗಳ ಮಗನಾಗಿ 1ನೆ ಆಗಸ್ಟ್ 1957 ರಂದು ಜನಸಿದರು.

ಇವರ ಪ್ರಾಥಮಿಕ ಶಿಕ್ಷಣವನ್ನು ತಲಘಟ ಗ್ರಾಮದಲ್ಲಿ, ಬೀದರನ ರಂಜೆರ ಗಲ್ಲಿಯಲ್ಲಿ ಮಧ್ಯಮಿಕ ಶಿಕ್ಷಣ ಭೋಮರೆಡ್ಡಿ ಕಾಲೇಜನಲ್ಲಿ ಪದವಿ ಹಾಗೂ ಎಲ್. ಎಲ್. ಬಿ. ಪದವಿಯನ್ನು ಪೂರ್ಣಗೊಳಿಸಿ. ಶಿಕ್ಷಕ ವೃತ್ತಿಗೆ ಸೇರಿದರು.

ಇವರು ಶಿಕ್ಷಕ ವೃತಿ ಜೊತೆಗೆ ಜಾನಪದ ಹಾಡುಗಳ ಮೂಲಕ ತಮ್ಮದೇ ಆದ ಗೆಳೆಯರ ಬಳಗವನ್ನು ಕಟ್ಟಿಕೊಂಡು ವಿವಿಧಡೆ ಅನೇಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಗುರುತಿಸಿಕೊಂಡರು. 

ಇವರು 1000 ಹಾಡುಗಳ ಸರದಾರನೆಂದು ಬಿರುದು ಪಡೆದರು .ಶಂಭುಲಿಂಗರವರು 

ಕನ್ನಡ ಸಂಸ್ಕೃತಿ ಇಲಾಖೆಯ ಪ್ರಯಾಜೋಕ್ತವದಲ್ಲಿ ಬೀದಿ ನಾಟಕಗಳ ಮೂಲಕ, ಭ್ರಷ್ಟಾಚಾರ, ಮೂಡನಂಬಿಕೆ, ಸಬಲೀಕರಣ, ಸಮಾನತೆ ಹೀಗೆ ಹತ್ತು ಹಲವಾರು ಕಾರ್ಯಕ್ರಮ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ .

  ಇವರು ಸಂಗೀತದ ಜೊತೆಗೆ ಸುಮಾರು 50 ಕ್ಕಿಂತ ಹೆಚ್ಚು ನಾಟಕಗಳಿಗೆ ರಾಗ ಸಂಯೋಜನೆ ಮಾಡಿರುವರಲ್ಲದೆ ಅನೇಕ ನಾಟಕಗಳಿಗೆ ಸಾಹಿತ್ಯ ರಚನೆ ಮಾಡಿ ತಾವೇ ನಟಿಸಿರುವ ಗರಿಮೆ ಇವರಿಗೆ ಸಲ್ಲುತ್ತದೆ.

ಬೆಳಕಿನೆಡೆಗೆ, ಮಾರಿಶಸ್ಸ ನ ಬಂದರುಗಳು, ಸಿಂಹಾಸನ ಖಾಲಿ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಒಡತಿ ಚೆನ್ನಮ್ಮ, ಮುಂತಾದ ನಾಟಕಗಳನ್ನು ಸಂಯೋಜನೆ ಮಾಡಿ ನಟಿಸಿದ್ದಾರೆ.

ಪ್ರೊ.ಸಿದ್ದಲಿಂಗಯ್ಯ ನವರ ರಚಿತ ಹೊಲೆ ಮಾದಿಗರು, ಹಾಗೂ ಸಾವಿರಾರು ನದಿಗಳು, ಕೆರೆಗೆ ಹಾರ, ಎಳು ಎಚ್ಚರ ವಾಗು, ಸಾಕ್ಷರತಾ ಗೀತೆ, ಅಕ್ಷರ ಗೀತೆಗಳದ್ವನಿ ಸುರುಳಿಗಳು ಬಿಡುಗಡೆ ಮಾಡಿದರು.

ದೆಹಲಿ , ಬೆಂಗಳೂರು ದೂರ ದರ್ಶನದಲ್ಲಿ ಕಿರುಚಿತ್ರ ಪ್ರದರ್ಶನ ಮಾಡಿದ್ದಾರೆ.

 ಎ.ಬ್ಲೇನ್ಡ.ಫೇಲ್ ಮೂಡನಂಬಿಕೆ ಕುರಿತ ಹಿಂದಿ ಸಾಕ್ಷ್ಯ ಚಿತ್ರದಲ್ಲಿ ಕೂಡ ನಟಿಸಿದ್ದಾರೆ .

ಕರ್ನಾಟಕದ ಪ್ರತಿನಿಧಿಯಾಗಿ ಭೂತಾನ್ ಹಾಗೂ ಬಾಂಗ್ಲಾದೇಶದ ಜಾನಪದ ಸಮ್ಮೇಳನದಲ್ಲಿ ಹಾಗೂ ಅಮೇರಿಕ, ಶ್ರೀಲಂಕಾ, ಥೈಲ್ಯಾಂಡ್ ದೇಶಗಳ ಪ್ರವಾಸ ಮಾಡಿ ತಮ್ಮ ಜಾನಪದ ಕಲೆ, ಹಾಡುಗಳ ಮೂಲಕ ಅಲ್ಲಿನ ಕನ್ನಡಿಗರ ಮನ ಗೆದ್ದಿದ್ದಾರೆ .ಎಸ್. ಪಿ. ಬಾಲಸುಬ್ರಮಣ್ಣ್ಯಮ್ಮರವರ ನೇತೃತ್ವದಲ್ಲಿ ಈ. ಟಿ. ವಿ. ಯವರು ನಡೆಸುವ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಎರಡು ಸಲ ಮುಖ್ಯಅತಿಥಿಗಳಾಗಿ ,ನಿರ್ಣಾಯಕರಾಗಿ ಭಾಗವಹಿಸಿದ್ದರು.

ಇವರು ಬೀದರನ ಸಾಕ್ಷರತಾ ಸಮಿತಿಯ ಪದಾಧಿಕಾರಿಗಳಾಗಿ,1990ರಿಂದ ನಾಟಕ ವಿಭಾಗದ ಮುಖ್ಯಸ್ತರಾಗಿ, ನಿರ್ದೇಶಕರಾಗಿ, ಪ್ರೇರಣಾ ಸಮಿತಿಯ ಕಾರ್ಯದರ್ಶಿಗಳಾಗಿ, ಆರು ಸಲ ಸಾಕ್ಷರತಾ ಕಲಾ ಜಾಥಗಳ ಮುಖ್ಯಸ್ಥರಾಗಿ, ಎರಡು ಅವಧಿಗೆ ಜಾನಪದ ಅಕಾಡೆಮಿ ಸದಸ್ಯರಾಗಿ,

ಮೇಘಧೂತ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ,ಶೋಭಾ, ಕಲೆ, ಸಾಹಿತ್ಯ ಹಾಗೂ ಸಾಂಸ್ಕೃರ್ಥಿಕ ಟ್ರಸ್ಟ್ ಅಧ್ಯಕ್ಷರಾಗಿ ,ಕನ್ನಡ ಸಾಹಿತ್ಯ ಪರಿಷತ್,ಧರಿನಾಡು ಕೇಂದ್ರ ಸಮಿತಿ ಬೀದರನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  ಸಾಹಿತಿಗಳಾಗಿ ಗುರುತಿಸಿಕೊಂಡ ಇವರು ಕಾವ್ಯ ಕಾರಂಜಿ, ಕಲ್ಯಾಣ ಕಾವ್ಯ ಸೇರಿದಂತೆ 150ಕ್ಕೂ ಹೆಚ್ಚು ಕವನಗಳನ್ನು ರಚಿಸಿ ಹಾಡಿದರು.

ರಚಿಸಿದ ಕೃತಿಗಳು

ವ್ಯಾಕರಣ ಕುಂಜ,ಜೀವನ ದರ್ಶನ,ಮಹಾತಾಯಿ (ಜೀವನ ಚರಿತ್ರೆ ),ಕನ್ನಡ ಸಾಹಿತ್ಯದ ಹೊಸ ಸಂವೇದನೆ ಹಾಡುಗಳು,ಹೊಸ ದಿಗಂತ ಹಾಯಿಕುಗಳು,ಕರೋನಾ ಕುರಿತು ಜಾಗೃತಿ ಗೀತೆಗಳನ್ನು ರಚಿಸಿರುವರು.

ಪಡೆದ ಪ್ರಶಸ್ತಿಗಳು

ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ,ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ,ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ,ಡಾ. ಬಿ. ಆರ್. ಅಂಬೇಡ್ಕರ್ ಪ್ರಶಸ್ತಿ -ದಲಿತ ಸಾಹಿತ್ಯ ಅಕಾಡೆಮಿ ದೆಹಲಿ,

ಜಿಲ್ಲಾ ಸ್ವಾತಂತ್ರೋತ್ಸವ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ ,ಶತಮಾನೋತ್ಸವ ಪ್ರಶಸ್ತಿ,ರೇವಯ್ಯ ದತ್ತಿ ಪ್ರಶಸ್ತಿ ,(ಮಹಾ ತಾಯಿ ಕೃತಿ ) ಹಾಗೂ ದೇಶಪಾಂಡೆ ಪ್ರಶಸ್ತಿಗಳು ಲಭಿಸಿವೆ.

-ಓಂಕಾರ ಪಾಟೀಲ

(ಕಾರ್ಯದರ್ಶಿ :--ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ)