ಸಾಮಾಜಿಕ ಚಿಂತಕ ಡಾ. ಡಿ. ಶ್ರೀನಿವಾಸ ಮಣಗಳ್ಳಿ

ಸಾಮಾಜಿಕ ಚಿಂತಕ ಡಾ. ಡಿ. ಶ್ರೀನಿವಾಸ ಮಣಗಳ್ಳಿ
ನಮ್ಮ ನಡುವಿನ ಯುವ ಬರಹಗಾರ ಮತ್ತು ಸಮಕಾಲೀನ ಚಿಂತಕ ಡಾ. ಡಿ. ಶ್ರೀನಿವಾಸ ಮಣಗಳ್ಳಿ ಅವರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕು, ಹನೂರು ಹೋಬಳಿಯ, ಮಣಗಳ್ಳಿ ಗ್ರಾಮದವರು. ಬಡ ಕುಟುಂಬದಲ್ಲಿ ಜನಿಸಿದರು ವಿದ್ಯಾರ್ಜನೆಯ ಹಂಬಲ ಇವರು ಬಾಲ್ಯದಿಂದಲೆ ರೂಢಿಸಿಕೊಂಡವರು. ಪ್ರಾಥಮಿಕ ಮತ್ತು ಪದವಿ ಪೂರ್ವ ವಿದ್ಯಾಭ್ಯಾಸದ ನಂತರ ಉನ್ನತ ವ್ಯಾಸಂಗವನ್ನು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ 2010ರಲ್ಲಿ, ಬಿ. ಎ. ಪದವಿಯನ್ನು ಮಾನಸ ಗಂಗೋತ್ರಿಯಲ್ಲಿ, ಸಮಾಜಕಾರ್ಯ ಅಧ್ಯಯನ ವಿಭಾಗದಿಂದ 2012ರಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ನಂತರ ಪಿ.ಜಿ.ಡಿ.ಹೆಚ್.ಆರ್.ಎಂ. ಡಿಪ್ಲೋಮ ಕೋರ್ಸ್ನ್ನು 2013ರಲ್ಲಿ ಮೈಸೂರು ವಿ.ವಿ.ಯಲ್ಲಿ ಪೂರೈಸಿದ ಇವರು 2013 ರಿಂದ 2016ರ ಶೈಕ್ಷಣಿಕ ವರ್ಷದಲ್ಲಿ ಯೋಜನೆಯಡಿ ಪ್ರಾಜೆಕ್ಟ್ ಫೆಲೊ ಆಗಿ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಸಂಶೋಧನಾ ಅನುಭವವನ್ನು ಪಡೆದುಕೊಂಡರು. ಪ್ರೊ. ವೈ. ಎಸ್. ಸಿದ್ದೇಗೌಡ ಅವರ ಮಾರ್ಗದರ್ಶನದಲ್ಲಿ ಪಿ.ಹೆಚ್.ಡಿ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ 2017ರಲ್ಲಿ ಪಡೆದರು. ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದಲ್ಲಿ ಆರು ವರ್ಷಗಳಿಂದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರೀನಿವಾಸ ಮಣಗಳ್ಳಿಯವರು ಸಮಾಜದ ಚಿಂತನೆಯ ಜೊತೆಗೆ ಸಮಕಾಲೀನ ಸಮಸ್ಯೆಗಳ ಕುರಿತು ಬರವಣಿಗೆಯ ರೂಪದಲ್ಲಿ ನಲವತ್ತಕ್ಕೂ ಹೆಚ್ಚು ಮೌಲಿಕ ಲೇಖನಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಇವರು ರಚಿಸಿ ಪ್ರಕಟಿಸಿರುವ ಲೇಖನಗಳು ಜಾಗತಿಕ ತಲ್ಲಣಗಳಿಗೆ, ಸಮಾಜದ ಅಂಕುಡೊAಕುಗಳಿಗೆ ಮುಖಾ ಮುಖಿಯಾಗುವಂತವು. ರಾಜ್ಯದ ವಿವಿಧ ದಿನಪತ್ರಿಕೆಗಳಲ್ಲಿ ಇವರು ರಚಿಸಿರುವ ಅಂಕಣ ಬರಹಗಳು ಪ್ರಕಟಗೊಂಡಿವೆ. ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ವಿಚಾರ ಸಂಕಿರಣಗಳಲ್ಲಿ ಬಹು ಮೌಲಿಕ ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇದಲ್ಲದೆ ನಾಡಿನ ಹೆಸರಾಂತ ಸಾಹಿತ್ಯಿಕ ನಿಯತಕಾಲಿಕೆಗಳಾದ ಸಂವಾದ, ಹೊಸತು ಮತ್ತು ಅರಿವು ನಿಯತಕಾಲಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. ರಾಜ್ಯದ ವಿವಿಧ ದಿನಪತ್ರಿಕೆಗಳಲ್ಲಿ ವಾಸ್ತವಕ್ಕನುಗುಣವಾಗಿ ಲೇಖನಗಳನ್ನು ಬರೆದು ಪ್ರಕಟಿಸುತ್ತಾ ಬರುತ್ತಿರುವುದು ಯುವ ಸಂಶೋಧಕರಿಗೆ ಸ್ಪೂರ್ತಿ ಮತ್ತು ಮಾಗದರ್ಶಿಯಾಗಿದೆ.
ಮಾತೃ ಭಾಷೆಯ ಜೊತೆಗೆ ಆಂಗ್ಲ ಭಾಷೆಯನ್ನು ಕರಗತಮಾಡಿಕೊಂಡ ಇವರು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಹತ್ತು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಸಮಾಜ ಕಾರ್ಯದಲ್ಲಿ ಸಂಶೋಧಕರಾದ ಇವರು ಆ ಕ್ಷೇತ್ರದ ಆಳ ಅಗಲ ಚೆನ್ನಾಗಿ ಅರಿತವರು. ಸಮಾಜ ಕಾರ್ಯದ ವಿವಿಧ ಆಯಾಮಗಳನ್ನು ಮತ್ತು ಈ ಕ್ಷೇತ್ರದ ಅಧ್ಯಯನದಿಂದಾಗುವ ಲಾಭಗಳನ್ನು ತಮ್ಮ ಬರವಣಿಗೆಯ ಮೂಲಕ ಪುಸ್ತಕ ರೂಪದಲ್ಲಿ ಸಮರ್ಪಿಸಿದ್ದಾರೆ. ಸಮುದಾಯ ಸಂಘಟನೆ ಮತ್ತು ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ, ವ್ಯಕ್ತಿಗತ ಸಮಾಜಕಾರ್ಯ, ಸಮಾಜ ಸುಧಾರಕರು, ಸ್ಟೇಕ್‌ಹೋಲ್ರ‍್ಸ್ ಆಫ್ ಚೈಲ್ಡ್ ರೈಟ್ಸ್ ಪ್ರೊಟೆಕ್ಷನ್, ಸಮಾಜಕಾರ್ಯದಲ್ಲಿ ಕ್ಷೇತ್ರಕಾರ್ಯ, ಸಮುದಾಯ ಸಂಘಟನೆಯ ಅಭಿವೃದ್ಧಿ, ಅರಿವೇ ಅಂಬೇಡ್ಕರ್, ಗ್ಯಾರಂಟಿ ಯೋಜನೆಗಳು : ಬಡವರ ಸುರಕ್ಷತೆ ಮತ್ತು ಕಲ್ಯಾಣ ಮತ್ತು ಸಮಾಜಕಾರ್ಯದ ಸವಾಲುಗಳು ಹೀಗೆ ಅನೇಕ ಮೌಲಿಕ ಕೃತಿಗಳನ್ನು ಸಮಾಜಕ್ಕೆ ಹಾಗು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆೆ. ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಡಾ. ಶ್ರೀನಿವಾಸ ಮಣಗಳ್ಳಿ ಅವರು ಸಂಪಾದಿಸಿದ “ಗ್ಯಾರಂಟಿ ಯೋಜನೆಗಳು ಬಡವರ ಸುರಕ್ಷತೆ ಮತ್ತು ಕಲ್ಯಾಣ” ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿದ್ದಾರೆ.
ಇವರು ತಮ್ಮದೆ ಬರಹಗಳ ಮೂಲಕ ಸಮಾಜದ ಹಲವಾರು ವಾಸ್ತವ ಅಂಶಗಳನ್ನು ಅಂಕಿ ಅಂಶಗಳ ಸಹಿತ ಬರೆಯುವುದರ ಮೂಲಕ ಜನರ ಅರಿವಿಗೆ ವಾಸ್ತವತೆಯನ್ನು ತರುವ ಪ್ರಯತ್ನ ಮಾಡುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಹಲವಾರು ಹಳ್ಳಿಗಳಲ್ಲಿ ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸುವದರೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹತ್ವದ ಆಶಯಗಳಲ್ಲಿ ಒಂದಾದ ಪೇ ಬ್ಯಾಕ್ ಟು ಸೋಸೈಟಿ ಪರಿಕಲ್ಪನೆಯನ್ನು ಮೈಗೂಡಿಸಿಕೊಂಡಿರುವ ಇವರು ಆ ದಿಶೆಯಲ್ಲಿ ಜನರು ಸಹ ತೊಡಗುವಂತೆ ಪ್ರೇರಿಪಿಸುತ್ತಾರೆ. ಸರಕಾರಿ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅಭ್ಯಾಸ ಮಾಡಲು ಅವಶ್ಯಕವಿರುವ ಪಾಠೋಪಕರಣಗಳನ್ನು ಒದಗಿಸಿ ಓದುವ ಆಸಕ್ತಿಯನ್ನು ಹೆಚ್ಚಿಸುತ್ತಿದ್ದಾರೆ. ಸಮಾಜ ಸುಧಾರಕರ ಚಿಂತನೆಗಳನ್ನು ಬಿತ್ತುವ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಹಲವಾರು ಸಮಾಜ ಸುಧಾರಕರ ಕುರಿತು ಸಂಶೋಧನಾತ್ಮಕ ಮತ್ತು ವೈಚಾರಿಕ ಬರವಣಿಗೆ ಮಾಡುವುದರ ಮೂಲಕ ಅಂತ:ಕರಣ ಸಮಾಜದ ನಿರ್ಮಾಣ ಮಾಡುವ ಹಂಬಲದ ವ್ಯಕಿ ಇವರು. ಇಂತಹ ಸಾಮಾಜಿಕ ಕಾಳಜಿವುಳ್ಳ ಡಾ. ಡಿ. ಶ್ರೀನಿವಾಸ ಮಣಗಳ್ಳಿ ಅವರು ರಚಿಸಿರುವ ‘ಅರಿವೇ ಅಂಬೇಡ್ಕರ್’ ಪುಸ್ತಕಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯ ಮಟ್ಟದ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿ ಸಂದಿರುವುದು ಸಂತಸ ತಂದಿದೆ.
ಡಾ. ವಿದ್ಯಾಸಾಗರ ದಣ್ಣೂರ
ಕನ್ನಡ ಉಪನ್ಯಾಸಕರು
ಕಲಬುರಗಿ.