ಮಾಲಗತ್ತಿಯಲ್ಲಿ ಉಡಿ ತುಂಬುವ ಕಾರ್ಯಕ್ರಮ 25ಕ್ಕೆ
ಮಾಲಗತ್ತಿಯಲ್ಲಿ ಉಡಿ ತುಂಬುವ ಕಾರ್ಯಕ್ರಮ 25ಕ್ಕೆ
ಶಹಾಬಾದ್: ಮಾಲಗತ್ತಿಯ ಶ್ರೀ ಹಿರೋಡೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವ ನಿಮಿತ್ಯ ಫೆ.25ರಂದು 2501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಶ್ರೀ ಚನ್ನಬಸವ ಶರಣರು ತಿಳಿಸಿದರು.
ಮಾಲಗತ್ತಿಯ ಶ್ರೀ ಹಿರೋಡೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಫೆ.22ರಿಂದ ಸಂಕಲ್ಪ ಸೇವೆ ಪ್ರಾರಂಭವಾಗಲಿದ್ದು. ಫೆ.25 ರಂದು ಹಾರಕೂಡದ ಶ್ರೀ ಡಾ.ಚನ್ನಬಸವ ಶಿವಾಚಾರ್ಯರು, ಮುಗುಳನಾಗಾವಿಯ
ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರಿಂದ ದಾಸೋಹ ಮಹಾಮನೆ ಉದ್ಘಾಟನೆಯಾಗಲಿದೆ. ಉಭಯ ಶ್ರೀಗಳಿಗೆ ತುಲಾಭಾರ, ಸಂಜೆ 2501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪ್ರಮುಖರಾದ ಈಶ್ವರ ಯಾದಗಿರಿ, ಬಾಲಕೃಷ್ಣ ಜೋಶಿ, ಅಣವೀರ ಪಡಶೆಟ್ಟಿ, ಧರ್ಮರಾಜ ಶಣಮೋ, ಶಿವುಣ್ಣಗೌಡ ಪೊಲೀಸ್ ಪಾಟೀಲ್, ಕಾಶಿನಾಥ ಸಣಮೋ, ರಮೇಶ ಭಟ್ಟ, ಈಶ್ವರ ಮುಗಳನಾಗಾವ್, ದೇವೆಂದ್ರ ಪಡಶೆಟ್ಟಿ, ದೇವಪ್ಪ ಸಣಮೋ, ಹರಿ ಕಟ್ಟಿ, ಗುಂಡು ಕಟ್ಟಿ, ಸುದರ್ಶನ, ವಾಸು ಅಲಿಪುರ ಇತರರಿದ್ದರು.
ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ