ಕಮಲನಗರದಲ್ಲಿ ಸಂಚಾರಿ ನ್ಯಾಯಲಯ ಉದ್ಘಾಟನೆ ಸಮಾರಂಭ, ಗಡಿಭಾಗದ ಕಕ್ಷಿದಾರರಿಗೆ ಅನುಕೂಲವಾಗಲಿದೆ ಸಂಚಾರಿ ನ್ಯಾಯಾಲಯ : ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ
ಕಮಲನಗರದಲ್ಲಿ ಸಂಚಾರಿ ನ್ಯಾಯಲಯ ಉದ್ಘಾಟನೆ ಸಮಾರಂಭ,
ಗಡಿಭಾಗದ ಕಕ್ಷಿದಾರರಿಗೆ ಅನುಕೂಲವಾಗಲಿದೆ ಸಂಚಾರಿ ನ್ಯಾಯಾಲಯ : ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ
ಕಮಲನಗರ : ಸಂಚಾರಿ ನ್ಯಾಯಾಲಯದ ಆರಂಭದಿಂದ ಕಮಲನಗರ ಈ ಗಡಿಭಾಗದ ಕಕ್ಷಿದಾರರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಕರ್ನಾಟಕ ಉಚ್ಛನ್ಯಾಯಾಲಯ ನ್ಯಾಯಮೂರ್ತಿಗಳು ಮತ್ತು ಬೀದರ್ ಆಡಳಿತಾತ್ಮಕ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ ಹೇಳಿದರು.
ಪಟ್ಟಣದ ವಿಶ್ವಾಸನಗರದ ಬಿಸಿಎಂ ಹಾಸ್ಟೇಲ್‍ನಲ್ಲಿ ಜಿಲ್ಲಾ ನ್ಯಾಯಾಂಗ, ಬೀದರ ಲೋಕೋಪಯೋಗಿ ಇಲಾಖೆ ಹಾಗೂ ಔರಾದ್ ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕಮಲನಗರದಲ್ಲಿ ಹಮ್ಮಿಕೊಂಡಿದ್ದ ದಿವಾಣಿ ನ್ಯಾಯದೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯ ಮತ್ತು ಸಂಚಾರಿ ನ್ಯಾಯಾಲಯ ಉದ್ಘಾಟನೆ ಸಮಾರಂಭದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಔರಾದ್‍ಗೆ ಹೋಲಿಸಿದರೆ ಕಮಲನಗರದಲ್ಲಿ ಹೆಚ್ಚು ಸಿವಿಲ್ ಮತ್ತು ಕ್ರೀಮಿನಲ್ ಪ್ರಕರಣಗಳಿಗೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ಇಲ್ಲಿ ಸಂಚಾರಿ ನ್ಯಾಯಾಲಯದ ಆರಂಭಕ್ಕೆ ಪ್ರಸ್ತಾಪ ಮತ್ತು ಪ್ರಯತ್ನ ನಡೆಯುತ್ತಲೇ ಇತ್ತು. ಇದೀಗ ನ್ಯಾಯಾಲಯ ಉದ್ಘಾಟನೆಯಾಗಿದೆ. ಈ ಭಾಗದ ಕಕ್ಷಿದಾರರಿಗೆ ಅನುಕೂಲವಾಗಲಿದೆ ಎಂದರು.
ಜಿಲ್ಲೆಯಲ್ಲಿಯೇ ಕಮಲನಗರ ತಾಲ್ಲೂಕು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದೆ. ಶುಕ್ರವಾರ ಮತ್ತು ಶನಿವಾರ ಕ್ರೀಮಿನಲ್ ಮತ್ತು ವ್ಯಾಜ್ಯ ಪ್ರಕರಣಗಳ ವಿಚಾರಣೆ ನಡೆಯಲಿವೆ. ಲೋಕ ಅದಾಲತ್‍ನಲ್ಲಿ ಹೆಚ್ಚಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಅರಣ್ಯ ಸಚಿವರು, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ.ಬಿ.ಖಂಡ್ರೆ ಅವರು ಮಾತನಾಡಿ, ಈ ಹಿಂದೆ ಕಮಲನಗರದ ಬಹುತೇಕ ಜಮೀನು ವಿವಾದಗಳ ವ್ಯಾಜ್ಯ ವಿಚಾರಣೆ ಪ್ರಕರಣಗಳನ್ನು ಔರಾದ್, ಬೀದರ್ ನ್ಯಾಯಾಲಯಕ್ಕೆ ಹೋಗಿ ಬಗೆಹರಿಸಿಕೊಳ್ಳಬೇಕಾಗಿತ್ತು. ಈದೀಗ ಕಮಲನಗರದಲ್ಲಿಯೇ ಇಂದು ಸಂಚಾರಿ ನ್ಯಾಯಾಲಯ ಆರಂಭವಾಯಿತು. ಇದೀಗ ತಾತ್ಮಲೀಕವಾಗಿ ಹಾಸ್ಟೇಲ್‍ನಲ್ಲಿ ಸಂಚಾರಿ ನ್ಯಾಯಾಲಯ ಆರಂಭವಾಗಿರುವುದಕ್ಕೆ ಸಂತೋಷವಾಗುತ್ತಿದೆ. ಆದಷ್ಟು ಬೇಗ ಈ ನ್ಯಾಯಾಲಯ ಖಾಯಂ ಆಗಲಿ ಎಂದರು.
ಕಮಲನಗರ ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ನ್ಯಾಯಮೂರ್ತಿಗಳು ಹಂಚಾಟೆ ಅವರು ಸ್ಪಂದಿಸಿದ್ದಾರೆ. ಶೀಘ್ರವೇ ಅವರ ಕಾಲಾವಧಿಯಲ್ಲಿಯೇ ಖಾಯಂ ನ್ಯಾಯಾಲಯ ಆಗಲು ಸ್ಥಳ ಗುರುತಿಸಿ, ಪ್ರಸ್ತಾವನೆ ಮನವಿ ಸಲ್ಲಿಸಿ ನೂತನ ಖಾಯಂ ನ್ಯಾಯಾಲಯ ಮಂದಿರ ಕಟ್ಟಡವೂ ನಿರ್ಮಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದರು.
ಬೀದರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸೈಯದ್ ಬಲೀಗುರ್ ರೆಹಮಾನ ಪ್ರಾಸ್ತವಿಕವಾಗಿ ಮಾತನಾಡಿದರು.
ಔರಾದ್‍ನ ದಿವಾಣಿ ನ್ಯಾಯಧೀಶರು ಮತ್ತು ಪ್ರಥಮ ದಂಡಾಧಿಕಾರಿಗಳು ವಿನಾಯಕ ವಾನಖಂಡೆ, ಔರಾದ್ ಸೀನಿಯರ್ ಸಿವಿಲ್ ಜಡ್ಜ್ ಹಾಜಿಹುಸೇನ್, ಔರಾದ್ ವಕೀಲ ಸಂಘ ಅಧ್ಯಕ್ಷ ಬಾಲಾಜಿ ಕಂಬಾರ, ಉಪಾಧ್ಯಕ್ಷ ರವಿ ನೌಬಾದೆ, ಪ್ರಧಾನ ಕಾರ್ಯದರ್ಶಿ ಬಾಲಾಜಿ ಉಪಾಸೆ, ಬೀದರ್ ಲೋಕೋಪಯೋಗಿ ಕಾರ್ಯನಿರ್ವಾಹಕ ಎಂಜೀನಿಯರ್ ಶಿವಶಂಕರ ಕಾಮಶೇಟ್ಟಿ, ತಹಶೀಲ್ದಾರ್ ಅಮೀತಕುಮಾರ ಕುಲಕರ್ಣಿ, ತಾಪಂ ಇಒ ಹಣಮಂತರಾಯ ಕೌಟಗೆ, ಡಿವೈಎಸ್‍ಪಿ ಶಿವಾನಂದ ಪವಾಡ್ ಶೆಟ್ಟಿ. ಸಿಪಿಐ ಶ್ರೀಕಾಂತ ಅಲ್ಲೇಪುರೆ, ಪಿಎಸ್‍ಐ ಆಶಾ ರಾಠೋಡ್, ವಕೀಲರಾದ ಧನರಾಜ ಮುಸ್ತಾಪುರೆ, ಸಂಜೀವ ಸಜ್ಜನ, ನಾಗರಾಜ ಬಿರಾದಾರ, ಮೀನಾಕ್ಷಿ, ಸಚೀನ ಶೇಗೆದಾರ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ವಕೀಲ ಸಂಘ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.
ವಕೀಲ ರಾಜಕುಮಾರ ಮೀತ್ರ ಸ್ವಾಗತಗೀತೆ ಹಾಡಿದರು. ಶಿಕ್ಷಕ ಮಾದೇವ ಮಡಿವಾಳ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ಮೀನಾಕ್ಷಿ ವಂದಿಸಿದರು.
ಇಲ್ಲಿಯವರೆಗೂ ಯೋಜನೆಗಳು ಬೆಂಗಳೂರು, ದೆಹಲಿ ಮಟ್ಟದಲ್ಲಿ ಸಿದ್ಧವಾಗುತ್ತಿದ್ದವು. ಆದರೆ ಇನ್ನು ಮುಂದೆ ಜನರ ಭಾವನೆಗಳಿಗೆ ಅನುಗುಣವಾಗಿ ತಳಮಟ್ಟದಿಂದಲೇ ಯೋಜನೆಗಳು ರೂಪಿತವಾಗಬೇಕು ಎಂಬ ಆಶಯದಿಂದ ಸಿಎಂ ಸಿದ್ಧರಾಮಯ್ಯನವರು ಪೂರಕ ಅವಕಾಶ ನಿಡಿದ್ದಾರೆ.
ಈಶ್ವರ ಬಿ. ಖಂಡ್ರೆ, ಬೀದರ್ ಜಿಲ್ಲಾ ಉಸ್ತುವಾರಿ, ಸಚಿವರು.
