ವಾಡಿ ಬಿಜೆಪಿ ಕಛೇರಿಯಲ್ಲಿ ಅಟಲ್ ಜಿ ಅವರ ಆರನೇ ಪುಣ್ಯಸ್ಮರಣೆ

ವಾಡಿ ಬಿಜೆಪಿ ಕಛೇರಿಯಲ್ಲಿ ಅಟಲ್ ಜಿ ಅವರ ಆರನೇ ಪುಣ್ಯಸ್ಮರಣೆ

ವಾಡಿ ಬಿಜೆಪಿ ಕಛೇರಿಯಲ್ಲಿ ಅಟಲ್ ಜಿ ಅವರ ಆರನೇ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಆರನೇ ಪುಣ್ಯಸ್ಮರಣೆ ಅಂಗವಾಗಿ ಅಟಲ್ ಜಿ ಭಾವಚಿತ್ರಕ್ಕೆ ಬಿಜೆಪಿ ಮುಖಂಡರು ಪುಷ್ಪನಮನ ಸಲ್ಲಿಸಿದರು.

ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ

ನಮ್ಮ ಅಟಲ್ ಜೀ ಅವರು ಜನಸಂಘದ ಸ್ಥಾಪಕ ಸದಸ್ಯರಾಗಿ,ನಂತರ ಭಾರತೀಯ ಜನತಾಪಾರ್ಟಿಯ ಸಂಸ್ಥಾಪಕ ಅಧ್ಯಕ್ಷರಾಗಿ ಬಿಜೆಪಿ ಪಕ್ಷವನ್ನು ಪ್ರಬಲವಾಗಿ ಕಟ್ಟಿಬೆಳೆಸಿದ ಮಹಾನ ನಾಯಕರು ಎಂದರು.

1998 ರಿಂದ 2004ರವರೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪ್ರಧಾನ ಮಂತ್ರಿಯಾಗಿ ಪೂರ್ಣ ಅವಧಿಯವರೆಗೆ ಆಡಳಿತ ನಡೆಸಿ ದೇಶದ ಎಲ್ಲಾ ಕ್ಷೇತ್ರದಲ್ಲಿನ ಅಭಿವೃದ್ಧಿಗೆ ಶ್ರಮಿಸಿದರು.

ಮಗ್ಗಲು ಮುಳ್ಳಾಗಿದ್ದ ಪಾಕಿಸ್ತಾನದ ಜತೆ ಶಾಂತಿ, ಸೌಹಾರ್ದ ಬೆಸೆಯಲು ಸಾಕಷ್ಟು ಪ್ರಯತ್ನಿಸಿದರು.ಅದು ಕೇಳದೆ ಇದ್ದಾಗ ಕಾರ್ಗಿಲ್‌ ಯುದ್ಧದಲ್ಲಿ ತಕ್ಕ ಉತ್ತರ ನೀಡುವ ಮೂಲಕ ಸ್ನೇಹಕ್ಕೂ ಬದ್ಧ, ಯುದ್ಧಕ್ಕೂ ಸಿದ್ಧಎಂದು ತೋರಿಸಿಕೊಟ್ಟರು.

ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರ ಜೈ ಜವಾನ್‌ ಜೈ ಕಿಸಾನ್‌ ಘೋಷಣೆಗೆ ಜೈ ವಿಜ್ಞಾನ್‌ ಪದವನ್ನು ಸೇರಿಸಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಗೆ ಪೂರ್ವಕವಾದ ಯೋಜನೆಗಳನ್ನು ಕೈಗೊಂಡರು.

ಪೋಖ್ರಣ್‌ ಅಣ್ವಸ್ತ್ರ ಪರೀಕ್ಷೆ ಕೈಗೊಳ್ಳುವ ಮೂಲಕ ನಮ್ಮ ತಾಕತ್ತು ಜಗತ್ತಿಗೆ ತೋರಿಸಿದರು.

ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರು 

ಅನಾರೋಗ್ಯದಿಂದಾಗಿ 2018ರ ಆಗಸ್ಟ್ 16ರಂದು ನಮ್ಮನ್ನಗಲಿದ್ದರು.ಆದರೆ ಅವರ ಅಟಲ ಚಿಂತನೆಗಳು ಅಜರಾಮರ ನಮಗೆ ದಾರಿದೀಪ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿದ್ದಣ್ಣ ಕಲ್ಲಶೆಟ್ಟಿ, ರಾಮಚಂದ್ರ ರಡ್ಡಿ, 

ವಿಠಲ ವಾಲ್ಮೀಕ ನಾಯಕ,

ಪ್ರಮೋದ್ ಚೊಪಡೆ,ಹರಿ ಗಲಾಂಡೆ, ಶರಣಗೌಡ ಚಾಮನೂರ,ಅಶೋಕ ಪವಾರ,

ಚನ್ನಯ್ಯ ಸ್ವಾಮಿ ಇಂಗಳಗಿ,ಅಯ್ಯಣ್ಣ ದಂಡೋತಿ, ಮಲ್ಲಿಕಾರ್ಜುನ ಸಾತಖೇಡ, ಲಕ್ಷ್ಮಣ ಮೆಂಗಜಿ, ಪ್ರಕಾಶ ಚವ್ಹಾಣ, ಆನಂದ ಶಿರವಾಳ,

ಶಂಕರ ಸೇರಿದಂತೆ ಇತರರು ಇದ್ದರು.