ಡೋಹರ ಕಕ್ಕಯ್ಯನವರ 33ನೇ ಜಾತ್ರಾ ಮಹೋತ್ಸವ ಜರುಗಿತು

ಡೋಹರ ಕಕ್ಕಯ್ಯನವರ 33ನೇ ಜಾತ್ರಾ ಮಹೋತ್ಸವ ಜರುಗಿತು
ಕಲಬುರಗಿ: ನಗರದ ಜಗತ್ ಬಡಾವಣೆಯಲ್ಲಿ ಮಹಾಶಿವರಾತ್ರಿ ನಿಮಿತ್ಯ ಶರಣ ಡೋಹರ ಕಕ್ಕಯ್ಯ ದೇವಸ್ಥಾನ ಟ್ರಸ್ಟ್ ವತಿಯಿಂದ ಕುಲಗುರು ಆರಾಧ್ಯದೈವ ಶರಣ ಡೋಹರ ಕಕ್ಕಯ್ಯ ಅಜ್ಜನವರ 33ನೇ ಜಾತ್ರಾ ಮಹೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವ ಭವ್ಯ ಮೆರವಣಿಗೆ ಹಾಗೂ ಧರ್ಮಸಭೆ ಕಾರ್ಯಕ್ರಮವನ್ನು ಶಾಸಕ ಅಲ್ಲಮಪ್ರಭು ಪಾಟೀಲ ಪಾಟೀಲ ಉದ್ಘಾಟಿಸಿದರು. ಪೂಜ್ಯಮಾತೋಶ್ರೀ ಪ್ರಭು ಶ್ರೀತಾಯಿ ಅಕ್ಕಮಹಾದೇವಿ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಟ್ರಸ್ಟ್ನ್ ಅಧ್ಯಕ್ಷ ಸಾಯಬಣ್ಣ ಮಸಾಜಿ ಹೊಳ್ಳರ, ಹಿರಿಯ ಪರ್ತಕರ್ತ ಶಂಕರ ಕೊಡ್ಲಾ, ರಾಹುಲ ವಿಠಲ ಹೊಟ್ಕರ್, ಖಂಡಪ್ಪ ಸೋನಾವಣೆ, ಕ್ಷೇಮಲಿಂಗ ಜಗದೆ, ಸತೀಶ ಇಂಗಳೆ, ರಾಮಚಂದ್ರ ಬಾಬುರಾವ ಕಟಕೆ, ಗಣಪತಿ ತುಕಾರಾಮ ಕಾವಳೆ, ಗಣಪತಿ ಧರ್ಮಣ್ಣ ಜೋಗಧನಕರ, ಸುಭಾಶ ಗಾಯಧನಕರ, ಲಿಂಗೋಜಿ ಗಾಜರೆ, ಮೋತಿಲಾಲ ಕಟಕೆ, ಡಾ. ತುಳಜಾರಾಮ ಗಾಯಧನಕರ್ ಸೇರಿದಂತೆ ಟ್ರಸ್ಟ್ನ್ ಸದಸ್ಯರು, ಬಡಾವಣೆ ಮುಖಂಡರು. ಮಹಿಳೆಯರು ಇದ್ದರು. ನಂತರ ಪಲ್ಲಕ್ಕಿ ಉತ್ಸವ ಮೇರವಣಿಗೆ ನಡೆಯಿತು.