ಮಹಾದ್ವಾರ ಕಾಮಗಾರಿ ತಡೆದು, ಅದನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿ

ಮಹಾದ್ವಾರ ಕಾಮಗಾರಿ ತಡೆದು, ಅದನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿ

ಮಹಾದ್ವಾರ ಕಾಮಗಾರಿ ತಡೆದು, ಅದನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿ

ಕಲಬುರಗಿ: ನಗರದ ಗಾಜೀಪುರ ಸಿದ್ಧೇಶ್ವರ ಬಡಾವಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಬಡಾವಣೆಯ ಸಮೀಪದ ಮುಖ್ಯ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ಮಹಾದ್ವಾರ ಕಾಮಗಾರಿ ತಡೆದು, ಅದನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಬೇಕು ಎಂದು ಸಿದ್ದೇಶ್ವರ ಬಡಾವಣೆಯ ನಿವಾಸಿಗಳಾದ ಸಂಗಣ್ಣ ಬಿರಾದಾರ, ಅಣ್ಣಾರಾವ ಹಾಬಾಳಕರ್ ಮತ್ತು ಸಿದ್ದರಾಜ ಬಿರಾದಾರ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಈ ಈಗಾಗಲೇ ಬಡಾವಣೆಗೆ ಹೊಂದಿಕೊಂಡಂತೆ ಕಿರಿದಾದ ಚರಂಡಿ ಇದ್ದು, ಪದೇಪದೇ ಬ್ಲ್ಯಾಕ್ ಆಗುತ್ತಿದೆ. ಇದರಿಂದ ಹಲವಾರು ವಾಹನಗಳು ಅಪಘಾತಗಳು ಉಂಟಾಗುತ್ತಿವೆ. ಮಹಾದ್ವಾರ ನಿರ್ಮಾಣವಾಗುತ್ತಿರುವ ರಸ್ತೆ ಹುಮನಾಬಾದ್ ರಿಂಗ್ ರಸ್ತೆ ಹಾಗೂ ಬಂದಾನವಾಜ್ ದರ್ಗಾ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಈಗಾಗಲೇ ಹೆಚ್ಚಿನ ಟ್ರಾಫಿಕ್ ಉಂಟಾಗುತ್ತಿದೆ. ಅದೇ ಮುಖ್ಯ ರಸ್ತೆಯಲ್ಲಿ ಮಹಾದ್ವಾರ ನಿರ್ಮಾಣ ಮಾಡುತ್ತಿರುವುರಿಂದ ಇನ್ನಷ್ಟು ಸಮಸ್ಯೆಯಾಗುತ್ತಿದೆ ದಿನನಿತ್ಯ ವಾಹನ ಸಂಚಾರಕ್ಕೆ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಕಾಮಗಾರಿ ಮಾಡುವ ಮಹಾ ನಗರ ಪಾಲಿಕೆ ಆಯುಕ್ತರ ಗಮನಕ್ಕೆ ತಂದರೆ ಅವರು ಕ್ಯಾರೆ ಅನ್ನುತ್ತಿಲ್ಲ. ಈ ಕುರಿತು ಎಲ್ಲಾ ಅಧಿಕಾರಿಗಳ ಗಮನಕ್ಕೂ ತಂದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಜನರ ಹಿತದೃಷ್ಟಿಯಿಂದ ಅದನ್ನು ತೆರವು ಮಾಡಿ ರಸ್ತೆ ಸರಿ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.