ಎಂ ಎಸ್ ಇರಾಣಿ ಕಾಲೇಜಿನಲ್ಲಿ ರಕ್ತದಾನ ಶಿಬಿರ
![ಎಂ ಎಸ್ ಇರಾಣಿ ಕಾಲೇಜಿನಲ್ಲಿ ರಕ್ತದಾನ ಶಿಬಿರ](https://kalyanakahale.com/uploads/images/202502/image_870x_67a4a4e74bdab.jpg)
ಎಂ ಎಸ್ ಇರಾಣಿ ಕಾಲೇಜಿನಲ್ಲಿ ರಕ್ತದಾನ ಶಿಬಿರ
ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ, ಸಂಸ್ಥಾಪಕ ಅಧ್ಯಕ್ಷರಾದ ಲಿಂ. ಮಹಾದೇವಪ್ಪ ರಾಂಪೂರೆ ಯವರ ೫೨ ನೇಯ ಪುಣ್ಯಸ್ಮರಣೆ ದಿನದ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ, ಯುಥ್ ರೆಡ್ ಕ್ರಾಸ್ ಘಟಕ ಮತ್ತು ರೆಡ್ ರಿಬ್ಬನ ಕ್ಲಬ್ ಸಹಯೋಗದೊಂದಿಗೆ, “ರಕ್ತದಾನ ಶಿಬಿರ”ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ. ನಾಗಣ್ಣ ಎಸ್. ಘಂಟಿ, ಹೈ.ಕ.ಶಿ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಮತ್ತು ಪದವಿ ಮಹಾವಿದ್ಯಾಲಯಗಳ ಸಂಚಾಲಕರು ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಕ್ತದಾನದ ಮಹತ್ವವನ್ನು ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾದ ಶ್ರೀ. ಅನಿಲಕುಮಾರ ಮರಗೋಳ, ಹೈ.ಕ.ಶಿ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಇವರು ರಕ್ತದಾನ ಮಾಡುವುದರಿಂದ ಆರೋಗ್ಯದಲ್ಲಿ ಆಗುವ ಲಾಭಗಳನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರೊ. ರೋಹಿಣಿಕುಮಾರ ಎಸ್. ಹಿಳ್ಳಿ ಸರ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಪ್ರತಿ ವರ್ಷ ನಮ್ಮ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುತ್ತೇವೆ. ಶಿಬಿರದಲ್ಲಿ ವಿದ್ಯಾರ್ಥಿಗಳು, ಹಿತೈಸಿಗಳು ಮತ್ತು ಮಹಾವಿದ್ಯಾಲಯದ ಸಿಬ್ಬಂದ್ದಿ ವರ್ಗದವರು ಶಿಬಿರದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಲು ಸಹಕಾರಿಯಾಗುತ್ತಾರೆ. ರಕ್ತದಾನ ಮಾಡುವುದು ಒಂದು ಒಳ್ಳೆಯ ಸಮಾಜಸೇವೆ ಮತ್ತು ಇಂತಹ ಸೇವೆಗಳಲ್ಲಿ ಭಾಗವಹಿಸುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಆರೋಗ್ಯವನ್ನು ಚೆನ್ನಾಗಿ ಇಟ್ಟಿಕೊಳ್ಳಲು ನಾವು ದಿನಾಲು ಹಸಿ ತರಕಾರಿಗಳು, ಮೊಟ್ಟೆ, ಹಣ್ಣುಗಳು, ಬೆಲ್ಲ, ಖಜೂರು, ಒಣದ್ರಾಕ್ಷಿ, ಮುಂತಾದವುಗಳು ಸೇವನೆ ಮಾಡುವುದರಿಂದ ಸದೃಢ ಆರೋಗ್ಯದ ಜೊತೆಗೆ ರಕ್ತ ಹೀನತೆಯ ಸಮಸ್ಯಯನ್ನು ತಡೆಗಟ್ಟಲು ಸಾಧ್ಯವೆಂದು ಹೇಳಿದರು.
ಡಾ. ಅಕ್ಷತಾ, ಬಸವೇಶ್ವರ ಆಸ್ಪತ್ರೆ, ಕಲಬುರಗಿ ಇವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತವನ್ನು ಡಾ. ಪ್ರಾಣೇಶ ಶಾಂತಾರಾಮ, ರಾ.ಸೇ.ಯೋ. ಅಧಿಕಾರಿ ನೆರವೇರಿಸಿದರು ಹಾಗೂ ವಂದನಾರ್ಪಣೆ ಡಾ. ಶಂಕ್ರಪ್ಪ ಕೆ, ರಾ.ಸೇ.ಯೋ. ಅಧಿಕಾರಿಗಳು ನೆರವೇರಿಸಿದರು.