ಜೆಡಿಎಸ್ ಕಚೇರಿಯಲ್ಲಿ ಸಂಭ್ರಮಾಚರಣೆ
ಜೆಡಿಎಸ್ ಕಚೇರಿಯಲ್ಲಿ ಸಂಭ್ರಮಾಚರಣೆ
ಕಲಬುರಗಿ : ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಾಲರಾಜ್ ಅಶೋಕ ಗುತ್ತೇದಾರ ಅವರು ಜೆಡಿಎಸ್ ಜಿಲ್ಲಾ ಅಧ್ಯಕ್ಷರಾಗಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ ಅಂಗವಾಗಿ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಹಿರಿಯ ಮುಖಂಡರು, ಕಾರ್ಯಕರ್ತರು ಸೇರಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಬಸವರಾಜ್ ಬೀರಬಿಟ್ಟಿ, ಕಾರ್ಯಧ್ಯಕ್ಷ ಸೈಯ್ಯದ್ ಜಾಫರ್ ಹುಸೇನ್, ಮುಖಂಡರಾದ ಶಾಮರಾವ್ ಸೂರನ್, ರಾಮಚಂದ್ರ ಅಟ್ಟೂರ್, ಹಿರಿಯ ಮುಖಂಡರಾದ, ಮಲ್ಲಿಕಾರ್ಜುನ ಸಂಗಣಿ, ವಿಠ್ಠಲ್ ಜಾದವ್, ಹೋಬಸಿಂಗ್ ಚವಾಣ್, ಯುವ ಘಟಕದ ಅಧ್ಯಕ್ಷ ಪ್ರವೀಣ್ ಜಾದವ್, ಕಾರ್ಮಿಕ ಘಟಕದ ಅಧ್ಯಕ್ಷ ರಾಜೆ ಪಟೇಲ್, ಮಾಣಿಕ್ ಶಾಪುರ್ಕರ್, ಸುನಿಲ್ ಗಾಜರೆ, ಸಂಜು ಕುಡಕಿ, ಯೇಸುನಾಥ್, ಗಂಗಾಧರ್ ಪಾಂಚಾಳ್, ಸುನಿಲ್ ಪೂಜಾರಿ,ಶ್ರೀನಿವಾಸ್ ಜಮಾದಾರ್, ಅನ್ವರ್ ಪಟೇಲ್, ನಾಗಯ್ಯ ಸ್ವಾಮಿ, ನಾಗಣ್ಣ ವಾರದ ಸೇರಿದಂತೆ ಇತರರು ಉಪಸ್ಥಿತರಿದ್ದರು.