ಸಂಸದ ಖಂಡ್ರೆ, ರಾಧಾಕೃಷ್ಣ ಎಂಎಲ್‌ಸಿ ಪಾಟೀಲಗೆ ಸನ್ಮಾನ ಜಲ ಸಂರಕ್ಷಣೆ ಯೋಜನೆಗಳ ತರಲು ಶ್ರಮಿಸುವೆ: ಸಾಗರ ಖಂಡ್ರೆ
ಸಂಸದ ಖಂಡ್ರೆ, ರಾಧಾಕೃಷ್ಣ ಎಂಎಲ್‌ಸಿ ಪಾಟೀಲಗೆ ಸನ್ಮಾನ
ಜಲ ಸಂರಕ್ಷಣೆ ಯೋಜನೆಗಳ ತರಲು ಶ್ರಮಿಸುವೆ: ಸಾಗರ ಖಂಡ್ರೆ
ಆಳಂದ: ಲೋಕಸಭೆಯಲ್ಲೇ ಅತಿ ಕಿರಿಯ ಸಂಸದನಾಗಲು ಶ್ರಮಿಸಿದ ಕ್ಷೇತ್ರದ ಮತದಾರರ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ ಜಲ ಸಂರಕ್ಷಣೆ ಯೋಜನೆ ಹಾಗೂ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ತರಲು ಪ್ರಯತ್ನಿಸಲಾಗುವುದು ಎಂದು ಬೀದರ್ ಲೋಕಸಭಾ ನೂತನ ಸಂಸದ ಸಾಗರ ಈಶ್ವರ ಖಂಡ್ರೆ ಅವರು ಇಂದಿಲ್ಲಿ ಹೇಳಿದರು.
ಪಟ್ಟಣದ ವೀರಶೈವ ಲಿಂಗಾಯತ ಭವನದಲ್ಲಿ ಮಾದನಹಿಪ್ಪರಗಾ ಮತ್ತು ಆಳಂದ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಾರ್ಯಕರ್ತರ ಶ್ರಮದಿಂದಾಗಿ ಚಿಕ್ಕವಯಸ್ಸಿನವನಾದ ನನಗೇ ಚುನಾವಣೆಯಲ್ಲಿ ಗೆಲುವು ತಂದುಕೊಟ್ಟಿದ್ದು ಮರೆಯಲಾಗದು. ಮತದಾರರ ನಿರೀಕ್ಷಿಗೆ ತಕ್ಕಂತೆ ಕೆಲಸ ನಿರ್ವಹಿಸುತ್ತೇವೆ ಅಪರೋಕ್ಷ ಪರೋಕ್ಷವಾಗಿ ಸಂಪರ್ಕಿಸಿ, ನಿಮ್ಮ ಧ್ವನಿಯಾಗಿ ಕೇಂದ್ರದಿAದ ಯೋಜನೆಗಳನ್ನು ಸಂಬAಧಿಸಿದ ಸಚಿವರಿಗೆ ಅಧಿಕಾರಿಗಳಿಗೆ ಭೇಟಿ ಮಾಡಿ ಯೋಜನೆ ಮತ್ತು ಅನುದಾನ ತರಲಾಗುವುದು ಸಲಹೆ ಮಾರ್ಗದರ್ಶನ ನೀಡಬೇಕು. ಬಿ.ಆರ್. ಪಾಟೀಲ ಮತ್ತು ಆರ್.ಕೆ.ಪಾಟೀಲ ಅವರೊಂದಿಗೆ ಸಂಪರ್ಕ ಸಾಧಿಸಿ ಕೆಲಸ ಮಾಡುವೆ ಎಂದು ಹೇಳಿದರು. ಕೇಂದ್ರದಲ್ಲಿ ವಾಟರ್ ರಿಸೋರ್ಸ್ ಕಮೀಟಿ ಸದಸ್ಯನಾಗಿದ್ದು, ಆಳಂದ ಕ್ಷೇತ್ರಕ್ಕೆ ಜಲ ಸಂರಕ್ಷಣೆ ಯೋಜನೆ ತರಲಾಗುವುದು ಎಂದು ಹೇಳಿದರು.
ಕಲಬುರಗಿ ಸಂಸದ ಡಾ. ರಾದಾಕೃಷ್ಣ ದೊಡ್ಡಮನಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಎಂದೂ ಎಂಪಿ ಆಗಬೇಕೆಂದು ಬಯಸಿರಲಿಲ್ಲ. ಇದಕ್ಕೆ ಶಾಸಕ ಬಿ.ಆರ್. ಪಾಟೀಲರು ನನ್ನ ಹೆಸರು ಪ್ರಸ್ತಾಪಿಸಿ ಈ ಸ್ಥಾನಕ್ಕೆ ಬರಲು ಕಾರಣರಾಗಿದ್ದಾರೆ. ಬೀದರ, ಕಲಬುರಗಿ ಸಂಸದರು ಒಟ್ಟುಗೂಡಿ ಅಭಿವೃದ್ಧಿ ಕೆಸಲಗಳನ್ನು ಮಾಡುತ್ತೇವೆ ಎಂದರು.
ವಿಧಾನಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ ಅವರು ಮಾತನಾಡಿ, ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಮತದಾರರು ಮತನೀಡಿದ್ದರಿಂದ ಗೆಲುವು ಸಾಧ್ಯವಾಗಿದೆ. ಕಾಂಗ್ರೆಸ್ ವರಿಷ್ಠ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ೩೭೧ ಕಲಂ ಜಾರಿಗೊಳಿಸಿದ್ದಾರೆ. ಮತದಾರರ ಒಗ್ಗಟ್ಟಿನಿಂದ ಗೆಲವು ತಂದುಕೊಟ್ಟಿದ್ದಕ್ಕೆ ಸದಾ ಸೇವೆ ಒದಗಿಸಲು ಬದ್ಧನಾಗಿದ್ದೇನೆ ಎಂದು ಹೇಳಿದರು.
ಡಿಎಸ್‌ಎಸ್ ರಾಜ್ಯ ಸಂಚಾಲಕ ಡಿ.ಜಿ. ಸಾಗರ ಅವರು ಮಾತನಾಡಿ, ದೇಶದಲ್ಲಿ ಪರಿಸ್ಥಿತಿ ಬಲು ನಾಜೂಕಿನಿಂದ ಕೂಡಿದೆ. ಕಳೆದ ೧೦ ವರ್ಷಗಳಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಸಂಚುಕಲ್ಪಿಸುವ ಹುನ್ನಾರ ನಡೆದಿದೆ. ಸಂವಿಧಾನ ಉಳಿವಿಗೆ ಶ್ರಮಿಸಬೇಕಿದೆ. ಡಾ.ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಸಿಎಂ ದಿ. ಎನ್. ಧರ್ಮಸಿಂಗ್ ಅವರ ಶ್ರಮದಿಂದ ಜಾರಿಗೆ ಬಂದ ೩೭೧ ಜೆ. ಸಮರ್ಪಕ ಅನುಷ್ಠಾನಗೊಳ್ಳಬೇಕು. ಈ ಭಾಗದ ಸಾಮಾನ್ಯ ಜನರಿಗ ಉದ್ಯೋಗ ಕಲ್ಪಿಸಲು ಕಾರ್ಖಾನೆ ಸ್ಥಾಪನೆ ಮಾಡಲು ಸಂಸದರು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಕೇವಲ ಮಾತ್ತಿನಲ್ಲಿ ಸಮಾನತೆ ಸಾಲದು ಎಲ್ಲರಿಗೂ ಸಮನಾಗಿ ಬದುಕು ಕಟ್ಟಿಕೊಳ್ಳಲು ಅವಕಾಶ ಕೊಟ್ಟರೆ ಸಂವಿಧಾನದ ಆಶಯ ಇಡೇರುತ್ತದೆ. ಇಡಿ ಸಿಬಿಐಯಂತ ಸಂಸ್ಥೆಗಳು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡು ವಿಪಕ್ಷದ ಸಿಎಂ ಸಚಿವರನ್ನು ಜೈಲಿಗೆ ಹಾಕಿ ಬಿಜೆಪಿ ಹೆಸಿಗೆ ಕೆಲಸ ಮಾಡುತ್ತಿದೆ ಎಂದು ಹರಿಹಾಯ್ದರು.
ಅಧ್ಯಕ್ಷತೆ ವಹಿಸಿದ್ದ ಸಿಎಂ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಅವರು ಮಾತನಾಡಿ, ಬೀದರ ಸಂಸದರು ಕ್ಷೇತ್ರದಲ್ಲಿ ಆಪ್ತ ಸಹಾಯಕರನ್ನಿಟ್ಟು ಜನರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ಇಲ್ಲಿ ನೀರಿನ ಸಮಸ್ಯೆ ಸಾಕಷ್ಟು ಇದೇ. ಕೇಂದ್ರದ ಅನುದಾನ ಒದಗಿಸಲು ಪ್ರತ್ನಿಸಬೇಕು. ಹೆಚ್ಚಿನ ಅಭಿವೃದ್ಧಿ ಕಾರ್ಯಕ್ಕೆ ಸ್ಥಳೀಯ ಸಂಸ್ಥೆಗಳಲ್ಲೂ ಪಕ್ಷ ಅಧಿಕಾರಕ್ಕೆ ತರಲು ಮುಂಬರುವ ಜಿಪಂ ತಾಪಂ ಚುನಾವಣೆ ಎದುರಿಸಲು ಸಜ್ಜಾಗಬೇಕು ಎಂದು ಹೇಳಿದರು.
ಸಿಂಡಿಕೇಟ್ ಸದಸ್ಯ ಎಸ್.ಪಿ.ಸುಳ್ಳದ ಸೇರಿ ಇನ್ನಿತರರನ್ನು ಗೌರವಿಸಲಾಯಿತು. ತಾಪಂ ಮಾಜಿ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ, ಮಜರ ಹುಸೇನ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪಾ ಪಾಟೀಲ ಧಂಗಾಪೂರ, ಗುರುಶರಣ ಪಾಟೀಲ ಕೊರಳ್ಳಿ, ಆನಂದಪ್ಪ ಶ್ಯಾಮನೂರ, ಕನಿರಾಮ ರಾಠೋಡ, ಕೆಪಿಸಿಸಿ ಸದಸ್ಯ ರಾಜಶೇಖರ ಪಾಟೀಲ ಚಿತಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಗೌಡ ಪಾಟೀಲ, ಮಲ್ಲಯ್ಯಾ ಸ್ವಾಮಿ ಮಾದನಹಿಪ್ಪರಗಾ, ಕೆಎಂಎಫ್ ಅಧ್ಯಕ್ಷ ಆರ್‌ಕೆ ಪಾಟೀಲ, ಬಸವರಾಜ ಉಪ್ಪಿನ, ಶ್ರೀಮಂತ ವಾಗ್ದರಿ, ಪ್ರಕಾಶ ಫುಲಾರೆ, ಪುರಸಭೆ ಸದಸ್ಯ ವೀರಣ್ಣಾ ಹತ್ತರಕಿ, ಪಾಶಾ ಗುತ್ತೇದಾರ ಉಪಸ್ಥಿತರಿದ್ದರು.
ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ ಪ್ರಾಸ್ತಾವಿಕ ಮಾತನಾಡಿದರು. ರಾಜಶೇಖರ ಪಾಟೀಲ ಹೆಬಳಿ ಸ್ವಾಗತಿಸಿದರು. ಗುರು ಪಾಟೀಲನಿರೂಪಿಸಿದರು.