ಲೋಕ ಜನಶಕ್ತಿ ಪಾರ್ಟಿ ಮಜದೂರ ಸೆಲ್ ನ ನೂತನ ಕಲಬುರಗಿ ಜಿಲ್ಲಾ ಅಧ್ಯಕ್ಷರನ್ನಾಗಿ ವಿಷ್ಣು ಎನ್ ಸ್ವಾಮಿ ಆಯ್ಕೆ
![ಲೋಕ ಜನಶಕ್ತಿ ಪಾರ್ಟಿ ಮಜದೂರ ಸೆಲ್ ನ ನೂತನ ಕಲಬುರಗಿ ಜಿಲ್ಲಾ ಅಧ್ಯಕ್ಷರನ್ನಾಗಿ ವಿಷ್ಣು ಎನ್ ಸ್ವಾಮಿ ಆಯ್ಕೆ](https://kalyanakahale.com/uploads/images/202502/image_870x_67a38bbe185f0.jpg)
ಲೋಕ ಜನಶಕ್ತಿ ಪಾರ್ಟಿ ಮಜದೂರ ಸೆಲ್ ನ ನೂತನ ಕಲಬುರಗಿ ಜಿಲ್ಲಾ ಅಧ್ಯಕ್ಷರನ್ನಾಗಿ ವಿಷ್ಣು ಎನ್ ಸ್ವಾಮಿ ಆಯ್ಕೆ
ಕಲಬುರಗಿ: ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿ ಮಜದೂರ ಸೆಲ್ ರಾಷ್ಟ್ರೀಯ ಅಧ್ಯಕ್ಷ ಸುಭಾಷ್ ಬಿಹಾರಿ ಮಾರ್ಗದರ್ಶನದಲ್ಲಿ ರಾಜ್ಯಾಧ್ಯಕ್ಷ ರಾಜು ಎಸ್ ಲೇಂಗಟಿ ಅವರ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷರನ್ನಾಗಿ ವಿಷ್ಣು ಎನ್ ಸ್ವಾಮಿ ಅವರನ್ನು ಆಯ್ಕೆ ಮಾಡಿ ಆದೇಶ ಪತ್ರವನ್ನು ನೀಡಿದರು.
ನಗರದ ಖಾಸಗಿ ಸಭಾಗಂಣದಲ್ಲಿ ಆದೇಶ ಪತ್ರ ಸ್ವಿಕರಿಸಿದ ವಿಷ್ಣು ಎನ್ ಸ್ವಾಮಿ ಅವರು ಮಾತನಾಡಿ ರಾಷ್ಟ್ರೀಯ ನಾಯಕರ ಹಾಗೂ ರಾಜ್ಯ ನಾಯಕರ ಮಾರ್ಗದರ್ಶನದಲ್ಲಿ ಸ್ಥಳಿಯ ಮಟ್ಟದಲ್ಲಿ ಪಕ್ಷ ಸಂಘಟಿಸಿ ಬೆಳೆಸುವ ಮೂಲಕ ಪಕ್ಷದ ನಾಯಕರು ನನ್ನ ಮೇಲೆ ನಂಬಿಕೆ ಇಟ್ಟು ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಪುತ್ರ ಲೇಗಂಟಿ, ವರುಣ ಸಜ್ಜನ್, ನೆತೇಂದ್ರ ಕುಮಸಿ, ವಿಶಾಲ ಕಟ್ಟಿ, ಭೀಮಶಂಕರ್ ತೆಗನೂರ, ಮಹೇಶ್ ತೆಗನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.