ಸಿಎಂ ಪತ್ನಿ ಮೂಡಾ ಸೈಟ್ ವಾಪಸ್ ಸರ್ಕಾರಕ್ಕೆ ನೀಡುತ್ತಿರುವುದು ಮೇಲ್ನೋಟಕ್ಕೆ ತಪ್ಪು ಒಪ್ಪಿಕೊಂಡಂತೆ : ಡಾ.ಸುಧಾ ಆರ್ ಹಾಲಕಾಯಿ

ಸಿಎಂ ಪತ್ನಿ ಮೂಡಾ ಸೈಟ್ ವಾಪಸ್ ಸರ್ಕಾರಕ್ಕೆ ನೀಡುತ್ತಿರುವುದು ಮೇಲ್ನೋಟಕ್ಕೆ ತಪ್ಪು ಒಪ್ಪಿಕೊಂಡಂತೆ : ಡಾ.ಸುಧಾ ಆರ್ ಹಾಲಕಾಯಿ

ಸಿಎಂ ಪತ್ನಿ ಮೂಡಾ ಸೈಟ್ ವಾಪಸ್ ಸರ್ಕಾರಕ್ಕೆ ನೀಡುತ್ತಿರುವುದು ಮೇಲ್ನೋಟಕ್ಕೆ ತಪ್ಪು ಒಪ್ಪಿಕೊಂಡಂತೆ : ಡಾ.ಸುಧಾ ಆರ್ ಹಾಲಕಾಯಿ

ಕಲಬುರಗಿ: ಮೈಸೂರು ಮೂಡಾ ಸೈಟ್ ಹಗರಣಕ್ಕೆ ಸಂಬಂಧಿಸಿದಂತೆ ಶ್ರೀಮತಿ ಪಾರ್ವತಮ್ಮ ಸಿದ್ದರಾಮಯ್ಯನವರು ಕಾನೂನುಬಾಹಿರವಾಗಿ ಪಡೆದುಕೊಂಡು 14 ನಿವೇಶನಗಳನ್ನು ಸರಕಾರಕ್ಕೆ ವಾಪಸ್ ಕೊಡುತ್ತೇವೆ ಎಂದು ಪತ್ರ ಬರೆಯುವ ಮೂಲಕ, ಸಿದ್ದರಾಮಯ್ಯನವರು ತಮ್ಮ ಅಧಿಕಾರದ ದುರುಪಯೋಗ ಮಾಡಿಕೊಂಡಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಎಂದು ಭಾರತೀಯ ಜನತಾ ಪಕ್ಷ ವೈದ್ಯಕೀಯ ಪ್ರಕೋಷ್ಠ ಬಿಜೆಪಿ ರಾಜ್ಯ ಮಾಧ್ಯಮ ವಕ್ತಾರ ಡಾ. ಸುಧಾ ಆರ್ ಹಾಲಕಾಯಿ ಹೇಳಿದರು. 

ಕಳೆದ ಹಲವು ತಿಂಗಳುಗಳಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಸಿದ್ದರಾಮಯ್ಯನವರು ನಾನು ಏನೂ ತಪ್ಪೇ ಮಾಡಿಲ್ಲ, ಕಾನೂನುಬಾಹಿರ ಕೆಲಸ ಮಾಡಿಲ್ಲ ಅನ್ನುವ ಹೇಳಿಕೆ ಕೊಡುತ್ತಾ ಬಂದಿದ್ದರು, ಅದು ಈಗ ಸುಳ್ಳು ಎಂಬುದು ಮತ್ತೊಮ್ಮೆ ಋಜುವಾತಾಗಿದೆ. ಘನತೆವೆತ್ತ ರಾಜ್ಯಪಾಲರು ಹಾಗೂ ಘನತೆವೆತ್ತ ನ್ಯಾಯಾಧೀಶರು ಕೂಡ ತಮ್ಮ ಆದೇಶದಲ್ಲಿ ಮತ್ತು ನಿರ್ದೇಶನದಲ್ಲಿ- ಈ ಪ್ರಕರಣದಲ್ಲಿ ಒಂದಷ್ಟು ಕಾನೂನುಬಾಹಿರ ಚಟುವಟಿಕೆಗಳು ನಡೆದಿವೆ ಹಾಗೂ ಅಧಿಕಾರದ ದುರುಪಯೋಗ ನಡೆದಿದೆ ಎನ್ನುವ ಸ್ಪಷ್ಟವಾದ ಮಾತುಗಳನ್ನು ಉಲ್ಲೇಖ ಮಾಡಿದ್ದಾರೆ.

ಆದರೆ ಸಿದ್ದರಾಮಯ್ಯನವರು ಕಳೆದ ನಾಲ್ಕು ದಶಕಗಳಲ್ಲಿ ನಾನು ರಾಜಕೀಯದಲ್ಲಿ ಸ್ವಚ್ಛವಾಗಿ ನಡೆದುಕೊಂಡು ಬಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಈಗ ಅವರ ಇನ್ನೊಂದು ಗೋಮುಖ ವ್ಯಾಘ್ರತನವನ್ನು ಜನರಿಗೆ ತೋರಿಸುವ ಮೂಲಕ ಅವರ ನೈಜ ಬಣ್ಣ ಇಂದು ಕರ್ನಾಟಕದ ಜನತೆಯ ಮುಂದೆ ಅನಾವರಣಗೊಂಡಿದೆ.

ಸಮಾಜವಾದಿ ಹೆಸರಿನ ಸಿದ್ದರಾಮಯ್ಯನವರು ಮಜಾವಾದಿಯಾಗಿ ಬದಲಾಗಿದ್ದಾರೆ ಮತ್ತು ಹಿಂದೆ ಅನೇಕ ಸಲ ಕಾನೂನಿನ ಹಾದಿ ತಪ್ಪಿಸವ ಕೆಲಸ ಮಾಡಿದ್ದಾರೆ. 

ಅರ್ಕಾವತಿ ಬಡಾವಣೆ ಹಗರಣ, ಕೆಂಪಣ್ಣ ವರದಿ, ಲೋಕಾಯುಕ್ತವನ್ನು ವಜಾ ಮಾಡಿ ಎಸಿಬಿ ರಚನೆ ಮಾಡಿರುವುದು, ಈ ಎಲ್ಲ ನಡವಳಿಕೆಗಳ ಮೂಲಕ ತಮಗೆ ತಾವೇ ಕ್ಲೀನ್‌ಚಿಟ್ ಪಡೆದುಕೊಂಡಿರುವುದು ಎಲ್ಲ ರಾಜ್ಯದ ಜನತೆಗೆ ಗೊತ್ತಾಗಿದೆ.

ಆದರೆ ಮೂಡಾ ಸೈಟ್ ಹಗರಣ ವಿಚಾರದಲ್ಲಿ ಮಾತ್ರ ಸಿದ್ದರಾಮಯ್ಯನವರು 40 ವರ್ಷಗಳ ರಾಜಕೀಯ ಜೀವನದ ಖ್ಯಾತಿ ಮಣ್ಣುಪಾಲಾಗಿದೆ. ಈ ವಿಚಾರಗಳನ್ನು ರಾಜ್ಯದ ಜನೆತೆಗ ತಿಳಿಸುವಲ್ಲಿ ಭಾರತೀಯ ಜನತಾ ಪಕ್ಷ ಯಶಸ್ವಿಯಾಗಿದೆ.

ಸಿದ್ದರಾಮಯ್ಯನವರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ಕಾಂಗ್ರೆಸ್ ಕೂಡ ಇಂದು ಜನತೆಯ ಕ್ಷಮೆ ಯಾಚಿಸಬೇಕು. ಕಾಂಗ್ರೆಸ್‌ನ ಡಿಎನ್‌ಎ ಯಲ್ಲಿಯೇ ಭ್ರಷ್ಟಾಚಾರ ಇದೆ ಎಂಬ ಆರೋಪಗಳಿದ್ದವೋ, ಈ ಪ್ರಕರಣದಲ್ಲಿ ಕೂಡ ಕಾಂಗ್ರೆಸ್‌ನ ನೈಜ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.