ದಾಸವಾಣಿ ಕರ್ನಾಟಕದಿಂದ ಪುರಂದರ ನಮನ
ದಾಸವಾಣಿ ಕರ್ನಾಟಕದಿಂದ ಪುರಂದರ ನಮನ
ಸಾಧಕೋತ್ತಮರಿಗೆ ಹಲವು ಪ್ರಶಸ್ತಿ ಪ್ರದಾನ
ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ
ದಾಸವಾಣಿ ಕರ್ನಾಟಕ ವಾರ್ಷಿಕೋತ್ಸವದ ಅಂಗವಾಗಿ ಪುರಂದರ ನಮನ ಕಾರ್ಯಕ್ರಮವನ್ನು ಬೆಂಗಳೂರು ಬಸವನಗುಡಿ ಗೋವರ್ಧನ ಕ್ಷೇತ್ರ ಪುತ್ತಿಗೆ ಮಠದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಖ್ಯಾತ ಹರಿದಾಸ ಸಾಹಿತ್ಯ ವಿದ್ವಾಂಸ ಡಾ ಹ.ರಾ.ನಾಗರಾಜ ಆಚಾರ್ಯ, ಗಾಯಕ ಹುಸೇನ್ ಸಾಬ್ ಕನಕಗಿರಿ, ನಂದಿ ವಾಹಿನಿ ಸಂಸ್ಥಾಪಕ ಜೀರಿಗೆ ಲೋಕೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು..
2025 ನೇ ಸಾಲಿನ ವಾರ್ಷಿಕ ದಾಸ ಪುರಂದರ ಪ್ರಶಸ್ತಿಯನ್ನು ದಾಸ ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿರುವ ಡಾ. ಶೀಲಾ ದಾಸ್, ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ , ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ವಿದುಷಿ ಅಪರ್ಣ ಆನಂದ್, ಅಂತಯೇ ಮಂಗಳಾಂಗ ಹರಿವಿಠ್ಠಲ ಪ್ರಶಸ್ತಿಯನ್ನು ದಾಸ ಸಾಹಿತ್ಯ ಕ್ಷೇತ್ರದಲ್ಲಿ ಡಾ ವಾರುಣಿ ಜಯತೀರ್ಥ, ಡಾ ಶಾಂತಾ ರಘೋತ್ತಮಾಚಾರ್,ಸಂಗೀತ ಕ್ಷೇತ್ರದಲ್ಲಿ ವಿದುಷಿ ಸುಮಲತ ಮಂಜುನಾಥ, ನಿರಂತರ ಹರಿದಾಸ ಗಾಯನ ಸೇವಾ ಪುರಸ್ಕಾರ, ಜಿ . ಎಸ್. ಕೃಷ್ಣಮೂರ್ತಿ, ಮೋಹನ್ ಕುಮಾರ್, ರವರಗಳಿಗೆ ಮತ್ತು ಮಹಾ ಪೋಷಕ ರತ್ನ ಪ್ರಶಸ್ತಿಯನ್ನು ಮಹನೀಯರು ಗಳಿಗೆ ನೀಡಿ ಗೌರವಿಸಲಾಯಿತು ಎಂದು ಕಾರ್ಯಕ್ರಮದ ಆಯೋಜಕರಾದ ದಾಸವಾಣಿ ಕರ್ನಾಟಕ ಸಂಸ್ಥಾಪಕ ಜಯರಾಜ್ ಕುಲಕರ್ಣಿ ಮತ್ತು ವಿದುಷಿ ಮಾನಸ ಕುಲಕರ್ಣಿ ತಿಳಿಸಿರುತ್ತಾರೆ.ಶ್ರೀ ವಿ.ರಾಮಮೂರ್ತಿ, ಶ್ರೀಮತಿ ಚಂದ್ರಿಕಾ ಶ್ರೀಹರಿ, ಶ್ರೀಮತಿ ಅನಿತಾ ಗದಗಕರ್, ಯೋಗಾಚಾರ್ಯ ಶ್ರೀ. ಪಿ ಸಿ. ಮುಕುಂದ ರಾವ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕ ನುಡಿಗಳನಾಡಿದ ದಾಸವಾಣಿ ಕರ್ನಾಟಕದ ಸಂಸ್ಥಾಪಕ ಜಯರಾಜ್ ಕುಲಕರ್ಣಿ ದಾಸವಾಣಿ ಕರ್ನಾಟಕವು ಸುಮಾರು ಏಳು ವರ್ಷದಿಂದ ಫೇಸ್ಬುಕ್ ಸಮವಾದ ಮುಖಾಂತರ ಹರಿದಾಸ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ದಾಸವಾಣಿ ಕರ್ನಾಟಕ ಸಮೂಹದಲ್ಲಿ ಸುಮಾರು 40,000 ಜನ ಗಾಯಕರು ಗಾಯಕ ಗಾಯಕಿಯರಿದ್ದು ಆಕಾಶವಾಣಿ ಮತ್ತು ಟಿಟಿಡಿ ಗ್ರೇಡ್ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಪ್ರತಿಯೊಬ್ಬ ಹರಿದಾಸರ ಕೃತಿಗಳನ್ನು ಪರಿಚಯಿಸಿ ಕೃತಿಗಳನ್ನು ಕೊಟ್ಟು ಅವುಗಳಿಗೆ ರಾಗವನ್ನು ಹಾಕಿಸಿ ಕಲಾವಿದರಿಗೆ ವೇದಿಕೆ ಮೇಲೆ ಹಾಡಲು ಅವಕಾಶ ಮಾಡಿಕೊಡುತ್ತಾರೆ ಹಾಗೂ ಪ್ರತಿ ವರ್ಷ ದಾಸವಾಣಿ ಕರ್ನಾಟಕವು ವಾರ್ಷಿಕೋತ್ಸವ ಮತ್ತು ಪುರಂದರ ನಮನ ಕಾರ್ಯಕ್ರಮವನ್ನು ಹಾಗೂ ಶ್ರೀ ವಿಜಯದಾಸರ ಆರಾಧನೆಯನ್ನು ಮಾಡಿ ವಿಶ್ವದಾದ್ಯಂತ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಹರಿದಾಸ ಕೃತಿಗಳ ಗಾಯನ ಸ್ಪರ್ಧೆಯನ್ನು ಏರ್ಪಡಿಸಿ ಪ್ರತಿಯೊಬ್ಬರಿಗೂ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹ ನೀಡಿ, ವಿಶೇಷವಾಗಿ ಮಕ್ಕಳಿಗೆ ಪ್ರೋತ್ಸಾಹ, ದಾಸ ಸಾಹಿತ್ಯದಲ್ಲಿ ಪಿಎಚ್ಡಿಯನ್ನು ಮಾಡಿ ಸಾಧನೆ ಮಾಡಿದವರಿಗೆ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ದಾಸ ಪುರಂದರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.ದಾಸವಾಣಿ ಕರ್ನಾಟಕದಲ್ಲಿ ಭಾಗವಹಿಸಿ ದಾಸರ ಕೃತಿಗಳನ್ನು ಹಾಡುವ ಅನೇಕ ಗಾಯಕ ಗಾಯಕಿಯರಿಗೆ ನಂದಿ ವಾಹಿನಿ ಸ್ಟುಡಿಯೋದಲ್ಲಿ ಚಿತ್ರೀಕರಣವನ್ನು ಮಾಡಿ ನಂದಿ ವಾಹಿನಿ ಎಂಟರ್ಟೈನ್ಮೆಂಟ್ ಪ್ರಸಾರ ಮಾಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು.