ಕಲಬುರಗಿ ಜಿಲ್ಲೆಯ ಶಾಲೆಗಳಿಗೆ 27 ಮತ್ತು 28 ಸೆಪ್ಟೆಂಬರ್ ರಜೆ ಘೋಷಣೆ
ಕಲಬುರಗಿ ಜಿಲ್ಲೆಯ ಶಾಲೆಗಳಿಗೆ 27 ಮತ್ತು 28 ಸೆಪ್ಟೆಂಬರ್ ರಜೆ ಘೋಷಣೆ
ಕಲಬುರಗಿ: ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹವಾಮಾನ ಇಲಾಖೆ ಮುಂದಿನ 48 ಗಂಟೆಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ, ಮಕ್ಕಳ ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ಜಿಲ್ಲೆಯ ಶಾಲೆಗಳಿಗೆ ಸೆಪ್ಟೆಂಬರ್ 27 ಮತ್ತು 28ರಂದು ಎರಡು ದಿನಗಳ ರಜೆ ಘೋಷಿಸಲಾಗಿದೆ.
ಈ ಬಗ್ಗೆ ಜಿಲ್ಲಾ ಆಡಳಿತದಿಂದ ಪ್ರಕಟಿಸಲಾದ ಆದೇಶದ ಪ್ರಕಾರ, ಈಗಾಗಲೇ ದಸರಾ ರಜೆ ಇದ್ದರೂ, ಜಿಲ್ಲೆಯ ಕೆಲವು ಶಾಲಾ ಆಡಳಿತ ಮಂಡಳಿಗಳು ವಿನಾಯಿತಿ ಪಡೆದು ಪಾಠ ಬೋಧನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಸದರಿ ಶಾಲೆಗಳಿಗೂ ರಜೆ ಅನ್ವಯವಾಗಲಿದೆ.
ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಈ ಬಗ್ಗೆ ಸೂಚನೆ ನೀಡಿದ್ದಾರೆ. ರಜೆ ಘೋಷಣೆಯಿಂದ ಬಾಧಿತವಾದ ಪಾಠ ಬೋಧನೆಯನ್ನು ಮುಂದಿನ ರಜಾದಿನಗಳಲ್ಲಿ ಸರಿದೂಗಿಸಲು ಆದೇಶಿಸಲಾಗಿದೆ.
ಕಲ್ಯಾಣ ಕಹಳೆ ಪತ್ರಿಕೆ ನಿನ್ನೆ ರಾತ್ರಿ ವರದಿಮಾಡಿದಕ್ಕೆ ಸ್ಪಂದಿಸಿ ಪ್ರತಿಕ್ರಿಯಿಸಿ ತಕ್ಷಣ ಕ್ರಮ ಕೈಗೊಂಡಿರುವ ಜಿಲ್ಲಾ ಆಡಳಿತಕ್ಕೆ ‘ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಾರ್ವಜನಿಕರಿಂದ ಹಾಗೂ ಪತ್ರಿಕೆ ಯಿಂದ ಧನ್ಯವಾದಗಳು