ನಾಲವಾರ ಶ್ರೀ ಮತ್ತು ಹಾರಕೂಡ ಶ್ರೀಗಳ ಮುಡಿಗೇರಿದ ರಾಜ್ಯ ಮಟ್ಟದ "ಕಲ್ಯಾಣ ಕರ್ನಾಟಕ ರತ್ನ" ಪ್ರಶಸ್ತಿ

ನಾಲವಾರ ಶ್ರೀ ಮತ್ತು ಹಾರಕೂಡ ಶ್ರೀಗಳ ಮುಡಿಗೇರಿದ ರಾಜ್ಯ ಮಟ್ಟದ "ಕಲ್ಯಾಣ ಕರ್ನಾಟಕ ರತ್ನ" ಪ್ರಶಸ್ತಿ

ನಾಲವಾರ ಶ್ರೀ ಮತ್ತು ಹಾರಕೂಡ ಶ್ರೀಗಳ ಮುಡಿಗೇರಿದ ರಾಜ್ಯ ಮಟ್ಟದ "ಕಲ್ಯಾಣ ಕರ್ನಾಟಕ ರತ್ನ" ಪ್ರಶಸ್ತಿ 

ಕಲಬುರಗಿ : ನಗರದ ಶಹಾಬಜಾರ ಬಡಾವಣೆಯ ಸುಲಫಲ ಸಂಸ್ಥಾನ ಮಠದಲ್ಲಿ ದಿನಾಂಕ 21-9-2024 ರಂದು ಬೆಳಿಗ್ಗೆ 11 ಗಂಟೆಗೆ 

ಲಿಂ. ಪೂಜ್ಯ ಚನ್ನವೀರ ಶಿವಯೋಗಿಗಳ 70 ನೇ, ಪುಣ್ಯ ಸ್ಮರಣೆ ಹಾಗೂ ಶ್ರೀಶೈಲಂ ಸಾರಂಗಧರ ಮಠದ ಜಗದ್ಗುರು ಪೂಜ್ಯ ಶ್ರೀ ಡಾ. ಸಾರಂಗಧರ ದೇಶಿಕೇಂದ್ರ ಮಹಾ ಸ್ವಾಮಿಗಳ ಪಟ್ಟಾಧಿಕಾರದ ದಶಮಾನೋತ್ಸವ ಮತ್ತು ಪೂಜ್ಯ ಶ್ರೀಗಳ ಜನ್ಮದಿನದ ಪ್ರಯುಕ್ತ ಪ್ರಶಸ್ತಿ ಪ್ರದಾನ ಹಾಗೂ ಶ್ರೀಮಠದ ಮಹದ್ವಾರ ಉದ್ಘಾಟನೆ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀಮಠದ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ರತ್ನ" ಪ್ರಶಸ್ತಿ,ಯನ್ನು ನಿಸ್ವಾರ್ಥಿ ಸೇವೆಗೈಯುತ್ತಿರುವ ಸಹಕಾರ ಮೂರ್ತಿ ಕಾಯಕಯೋಗಿ ನಾಡಿನ ಹಿರಿಯ ಸಂತ ಪೂಜ್ಯ ಶ್ರೀ ಡಾ.ಸಿದ್ದತೋಟೇಂದ್ರ ಮಹಾಸ್ವಾಮಿಗಳು ನಾಲವಾರ , ಹಾಗೂ ಪುಜ್ಯ .ಷ.ಬ್ರ.ಡಾ. ಚೆನ್ನವೀರ ಶಿವಾಚಾರ್ಯರು, ಸಂಸ್ಥಾನ ಹಿರೇಮಠ ಹಾರಕೂಡ ಉಭಯ ಶ್ರೀಗಳಿಗೆ "ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ" ನೀಡಲಾಗುವುದು ಎಂದು ಶ್ರೀ ಮಠದ ಕಾರ್ಯದರ್ಶಿಗಳು ತಿಳಿಸಿದರು.

ನೀಡುಮಾಮಿಡಿ ಜಗದ್ಗುರುಗಳು ಸಾನಿಧ್ಯ ವಹಿಸಲಿದ್ದು, ಭಾಲ್ಕಿ ಶ್ರೀ ಗಳು, ನೇತೃತ್ವ ವಹಿಸುವರು, ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಣಿ ಎಸ್ ಅಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಸೋನ್ನ ಶ್ರೀಗಳು ಮತ್ತು ಯಡ್ರಾಮಿಯ ಶ್ರೀಗಳು ಸಮ್ಮುಖ ವಹಿಸುವರು ,

ಸಚಿವರುಗಳಾದ ಪ್ರಿಯಾಂಕ್ ಖರ್ಗೆ, ಡಾ,ಶರಣಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪುರ, ಮತ್ತು ನಗರ ಪೊಲೀಸ್ ಆಯುಕ್ತರಾದ ಶರಣಬಸಪ್ಪ ಎಸ್ ಡಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 

ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ದೇವೇಂದ್ರಪ್ಪ ಗೌಡಗೇರಿ, ಪತ್ರಕರ್ತ ಶರಣಗೌಡ ಪಾಟೀಲ್ ಪಾಳಾ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

 ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಗುವುದು ಶ್ರೀ ಮಠದ ಪ್ರಕಟಣೆ ಎಂದು ತಿಳಿಸಿದೆ.