ಮಲ್ಲಿಕಾರ್ಜುನ ಮುತ್ಯಾ ವಿರುದ್ದ ಪೋಕೋ ಪ್ರಕರಣ ಖಂಡನೀಯ

ಮಲ್ಲಿಕಾರ್ಜುನ ಮುತ್ಯಾ ವಿರುದ್ದ ಪೋಕೋ ಪ್ರಕರಣ ಖಂಡನೀಯ

ಮಲ್ಲಿಕಾರ್ಜುನ ಮುತ್ಯಾ ವಿರುದ್ದ ಪೋಕೋ ಪ್ರಕರಣ ಖಂಡನೀಯ

ನಾಗರಾಜ್ ದಂಡಾವತಿ ವರದಿ ಶಹಾಬಾದ: ಶಹಾಪುರ ತಾಲೂಕಿನ ಮಹಲರೋಜಾದ ಮಲ್ಲಿಕಾರ್ಜುನ ಮುತ್ಯಾ ಬಹಳ ಅಮಾಯಕ ವ್ಯಕ್ತಿ ಇವರ ವಿರುದ್ದ ಪೋಕೋ ಪ್ರಕರಣ ದಾಖಲಾಗಿರುವದು ಖಂಡನೀಯ ಎಂದು ತೋನಸನಹಳ್ಳಿ(ಎಸ) ಅಲ್ಲಮ ಪ್ರಭು ಸಂಸ್ಥಾನದ ಪೂಜ್ಯರಾದ ಡಾ.ಮಲ್ಲಣ್ಣಪ್ಪ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಪೂಜ್ಯರು ಮಾದ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಇತ್ತಿಚೆಗೆ ಬಹಳ ಪ್ರವರ್ಧಮಾನಕ್ಕೆ ಬರುತಿರುವ ಸ್ವಾಮಿಜಿ ಗಳು, ಹಾಗಾಗಿ ಅವರ ಏಳಿಗೆ ಸಹಿಸದೆ ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಉದ್ದೇಶ ಪೂರಕವಾಗಿ ಸದಾ ಚಿಕ್ಕ ಮಕ್ಕಳ ಜೊತೆ ಆಟವಾಡುತ್ತಾ, ಹಿತವಚನಗಳು ಹಾಗೂ ಆಶೀವಾರ್ದ ನೀಡುತ್ತಿದ್ದರು ಆದರೆ ಒಂದು ಚಿಕ್ಕ ಮಗುವಿನೊಂದಿಗೆ ಆಟವಾಡಿದ್ದೆ ವಿಕೃತ ಸುದ್ದಿಮಾಡಿ ತೆಜೋವಧೆ ಮಾಡುತ್ತಿವೆ ಮತ್ತು ಅವರನ್ನು ಪೋಕೋ ಕಾಯ್ದೆ ಯ ಕಾನೂನಿ ಅಡಿ ಬಂಧಿಸಿ ಅವಮಾನಿಸುವ ಕೆಲಸ ನಡೆಯುತ್ತಿದ್ದು ಇದು ಸರ್ವ ಸಮ್ಮತವಲ್ಲದ ಮಾತಾಗಿದೆ ಎಂದಿದ್ದಾರೆ.

ಆದರೆ, ಈಗ ಸ್ವತಃ ಆ ಸಂತ್ರಸ್ತ ಬಾಲಕಿಯ ತಂದೆ-ತಾಯಿಗಳೆ ಮುತ್ಯಾ ಅವರದ್ದು ಯಾವುದೇತಪ್ಪಿಲ್ಲ, ಕಿಡಿಗೇಡಿಗಳು ವಿಡಿಯೋವನ್ನು ತಿರುಚಿ ವೈರಲ್ ಮಾಡಿದ್ದಾರೆ ಎಂದು ಪೋಷಕರು ಹೇಳಿಕೆ ನೀಡಿದ್ದರು ಕೂಡ ಸರಕಾರ ಬಂದಿಸುವ ಕೆಲಸಕ್ಕೆ ಪ್ರಯತ್ನಿಸುತ್ತಿದೆ, ಸಮಾಜದಲ್ಲಿ ಪವಾಡ ಪುರುಷರಾಗಿ ಬೆಳೆಯುತ್ತಿರುವ ಹಿನ್ನಲೆಯಲ್ಲಿ ಮಲ್ಲಿಕಾರ್ಜುನ ಮುತ್ಯಾ ಅವರಿಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಲಾಗಿದೆ, ವಿಡಿಯೋವನ್ನು ತಿರುಚಿ ವೈರಲ್ ಮಾಡಿದವರ ವಿರುದ್ದ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವದರ ಜೊತೆಗೆ ಸರ್ಕಾರವು ಎಚ್ಚೆತ್ತು ಕೊಂಡು ಅವರ ಮೇಲಿನ ಆರೋಪವನ್ನು ವಜಾಗೊಳಿಸಿ, ಅಪಪ್ರಚಾರ ಮಾಡುವವರನ್ನು ಗುರುತಿಸಿ ಶಿಕ್ಷಿಸುವ ಕೆಲಸ ಮಾಡಬೇಕಾಗಿದೆ ಎಂದು ಡಾ.ಮಲ್ಲಣಪ್ಪ ಮಹಾಸ್ವಾಮಿಗಳು ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.