ಚಂದ್ರಕಾಂತ ಧಶರಥ ತಳವಾರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ

ಚಂದ್ರಕಾಂತ ಧಶರಥ ತಳವಾರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ
ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮಕ್ಕೆ ಆಗಮಿಸಿದ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ತಳವಾರ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಕಾಂತ ಧಶರಥ ತಳವಾರ ಅವರ ನೇತೃತ್ವದಲ್ಲಿ ನಗರದ ಡಿ.ಎ.ಆರ್ ಪೋಲಿಸ ಪರೇಡ ಮೈದಾನ ದಲ್ಲಿ ಬೇಟಿಯಾಗಿ ಅಸಂವಿಧಾನದ ಸುತ್ತೋಲೆಯನ್ನು (Uಟಿಛಿoಟಿsಣiಣuಣioಟಿಚಿಟ ಅiಡಿಛಿuಣಚಿಡಿ) SಖಿW/Sಇಅಃ/SಖಿP/315/2024 ದಿನಾಂಕ: 07/02/2025 ಹಿಂಪಡೆಯುವಂತೆ ಹಾಗೂ ತಳವಾರ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರಗಳು ಮತ್ತು ನೌಕರರಿಗೆ ಸಿಂಧುತ್ವ ಪ್ರಮಾಣ ಪತ್ರಗಳು ನಿಡುವದು ನಿಲ್ಲಿಸಿರುವದರಿಂದ ಮುಂದುವರೆಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.
ನಿನ್ನೆ ರಾತ್ರಿ ಕಲಬುರಗಿ ಉಸ್ತುವಾರಿ ಸಚಿವರು ಹಾಗೂ ಶಾಸಕರು ಮತ್ತು ಅಧಿಕಾರಿಗಳ ಜೋತೆ ಚರ್ಚಿಸಲಾಗಿರುತ್ತದೆ ಒಂದು ವಾರದಲ್ಲಿ ಅಸಂವಿಧಾನಿಕ ಆದೇಶಗಳು ಹಿಂಪಡೆದು ತಳವಾರ ಸಮಾಜದ ಸಮಸ್ಯೆಗಳು ಬಗೆ ಹರಿಸಿ ತಳವಾರ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರಗಳು ಹಾಗೂ ನೌಕರರಿಗೆ ಸಿಂಧುತ್ವ ಪ್ರಮಾಣ ಪತ್ರಗಳು ನಿಡುವದು ಮುಂದುವರೆಸಲಾಗುವದು ಎಂದು ಮಾನ್ಯ ಮುಖ್ಯಮಂತ್ರಿಗಳು ನಮಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಳವಾರ ಸಮಾಜದ ಮುಖಂಡು ಹಾಗೂ ಹೋರಾಟಗಾರರಾದ ಸುನಿತಾ ತಳವಾರ, ತಳವಾರ ಮಹಾಸಭಾ ಜೇವರ್ಗಿ ತಾಲೂಕ ಅಧ್ಯಕ್ಷರಾದ ಗೀರಿಶ ತುಂಬಗಿ, ಯಡ್ರಾಮಿ ತಾಲೂಕ ಅಧ್ಯಕ್ಷರಾದ ರಾಚಣ್ಣ ತಳವಾರ, ಅಫಜಲಪೂರ ತಾಲೂಕಿನ ಅಧ್ಯಕ್ಷರಾದ ಗುರುನಾಥ ಕೋರಬಾ ಹಾವನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.