"ಅಸಮಾನತೆ ಜತೆಗೆ ಜ್ಞಾನ ವಿಸ್ತರಣೆಗೆ ನೀಡಿದ ಕೊಡುಗೆ ಅಪಾರ" : ಮನೋಜಕುಮಾರ ಹಿರೇಮಠ

"ಅಸಮಾನತೆ ಜತೆಗೆ ಜ್ಞಾನ ವಿಸ್ತರಣೆಗೆ ನೀಡಿದ ಕೊಡುಗೆ ಅಪಾರ" : ಮನೋಜಕುಮಾರ ಹಿರೇಮಠ

ಕಮಲನಗರ: ಭಾಗಿರಥಿ ಶಾಲೆಯಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ,

"ಅಸಮಾನತೆ ಜತೆಗೆ ಜ್ಞಾನ ವಿಸ್ತರಣೆಗೆ ನೀಡಿದ ಕೊಡುಗೆ ಅಪಾರ" : ಮನೋಜಕುಮಾರ ಹಿರೇಮಠ

ಕಮಲನಗರ: ಶಿವಶರಣರು, ವಚನಕಾರರು ಸಮಾಜದ ಶಾಶ್ವತ ಆಸ್ತಿ . ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಜತೆಗೆ ಜ್ಞಾನ ವಿಸ್ತರಣೆಗೆ ಅವರು ನೀಡಿದ ಕೊಡುಗೆ ಮಹತ್ತರವಾದುದು ಎಂದು ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಹೇಳಿದರು.

ಇಲ್ಲಿನ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ವಿಶಾಲ ಮನೋಧರ್ಮ ಮಡಿವಾಳ ಸಮುದಾಯದ ಜನರಲ್ಲಿದೆ. ಶಿವಶರಣ ಮಾಚಿದೇವರ ಮಾರ್ಗದರ್ಶನದಿಂದ ಮುನ್ನಡೆಯುತ್ತಿರುವುದೇ ಇದಕ್ಕೆ ಕಾರಣ. ಮಾಚಿದೇವ ಸಮಾಜದ ಕೊಳಕು ತೊಳೆದು ಹಾಕಿದವರು. ಕಾಯಕದ ಆಧಾರದಲ್ಲಿ ವಿಭಜನೆ ಆಗುತ್ತಿರುವ ಸಮಾಜಕ್ಕೆಮಾಚಿದೇವರ ಸಂದೇಶ ಆದರ್ಶವಾಗಬೇಕಾದ ಅಗತ್ಯವಿದೆ ಎಂದರು.

ಶಿಕ್ಷಕ ಶೇಖ ಇಜಾಜ್ ಅವರು ಮಾತನಾಡಿ, ಮೌಢ್ಯಗಳಿಂದ ದೀನರ ಶೋಷಣೆ ನಡೆಯುತಿದ್ದ ಮಾಚಿದೇವ ಜಾಗೃತಿಯ ಮೂಲಕ ಶೋಷಣೆ ತಡೆಗಟ್ಟಿದ್ದರು. ಕಷ್ಟಗಳನ್ನು ಸಹಿಸಿಯೂ ಬಡ ಜನರ ಉದ್ಧಾರಕ್ಕೆ ಮಾರ್ಗದರ್ಶಕರಾದರು ಎಂದರು.

ಪಾಲಕ ಪ್ರತಿನಿಧಿ ಶಿವಲಿಂಗ ಬೆಂಬುಳಗೆ, ರಾಜಕುಮಾರ ಸಿರಗಿರೆ, ಭೀಮರಾವ ಬಚ್ಚಣ್ಣಾ, ಶಿಕ್ಷಕಿ ಸಿಬ್ಬಂದಿ ಶ್ರೀದೇವಿ, ದೀಪಮಾಲಾ, ರಾಜಶ್ರೀ, ಉಷಾ, ಶೀತಲ, ಪಂಚಫುಲಾ, ಅಶ್ವೀನಿ ಸೇರಿದಂತೆ ಶಾಲೆ ಮಕ್ಕಳು ಇದ್ದರು.