ವಿವಿಧ ಕೊಳಚೆ ಪ್ರದೇಶಗಳ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಸಮಾಲೋಚನ ಸಭೆ

ವಿವಿಧ ಕೊಳಚೆ ಪ್ರದೇಶಗಳ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಸಮಾಲೋಚನ ಸಭೆ

ವಿವಿಧ ಕೊಳಚೆ ಪ್ರದೇಶಗಳ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಸಮಾಲೋಚನ ಸಭೆ

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಸ್ಲಂ ಜನರ ಸಂಘಟನೆ- ಕರ್ನಾಟಕ ಕಲಬುರ್ಗಿ ಜಿಲ್ಲಾ ಸಮಿತಿ ವತಿಯಿಂದ ನಗರದ ವಿವಿಧ ಕೊಳಚೆ ಪ್ರದೇಶಗಳ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಸಮಾಲೋಚನ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. 

ಈ ಸಮಾಲೋಚನ ಸಭೆಯನ್ನು ಸ್ಲಂ ಜನರ ಸಂಘಟನೆಯ- ಕರ್ನಾಟಕ ರಾಜ್ಯ ಅಧ್ಯಕ್ಷರಾದ ಐಸಾಕ್ ಅಮೃತ್ ರಾಜ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಅಲ್ಲಮಪ್ರಭು ನಿಂಬರ್ಗಾ, ಗುಂಡಮ್ಮದೊಡ್ಮನಿ, ಯಮನಪ್ಪ ಪ್ರಸಾದ್, ಅನಿಲಕುಮಾರ್ ಚಕ್ರ, ಯೇಸುರಾಜ್, ಅನಿತಾ ಕೂರಬಾ, ಗಣೇಶ್ ಕಾಂಬಳೆ, ಬ್ರಹ್ಮಾನಂದ ಮಿಂಚಾ, ಕವಿತಾ ಇನಾಮದಾರ, ಕರುಣಕುಮಾರ ಬಂದರವಾಡ, ಶಿವಕುಮಾರ ಚಿಂಚೋಳಿ, ಸೋನುಬಾಯಿ ಶೃಂಗೇರಿ, ಮಲ್ಲಿಕಾರ್ಜುನ್ ಜಾನೆ ಸೇರಿದಂತೆ ಕಲಬುರಗಿ ನಗರದ ವಿವಿಧ ಕೊಳಚೆ ಪ್ರದೇಶದ ಮುಖಂಡರು ಮಹಿಳೆಯರು ಭಾಗವಹಿಸಿದ್ದರು.