ವಾಡಿ ಬಿಜೆಪಿ ಕಛೇರಿಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರಿಗೆ ಪುಷ್ಪ ನಮನ

ವಾಡಿ ಬಿಜೆಪಿ ಕಛೇರಿಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರಿಗೆ ಪುಷ್ಪ ನಮನ

ವಾಡಿ ಬಿಜೆಪಿ ಕಛೇರಿಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರಿಗೆ ಪುಷ್ಪ ನಮನ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತದ ಎರಡನೇ ರಾಷ್ಟ್ರಪತಿ ಹಾಗೂ ಮೊದಲ ಉಪ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ,

ಶಿಕ್ಷಣತಜ್ಞರಾಗಿದ್ದ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ರಾಧಾಕೃಷ್ಣನ್ ಅವರ ಅದ್ಭುತ ಗುಣಗಳು, ವರ್ಚಸ್ಸಿನಿಂದ ವಿದ್ಯಾರ್ಥಿಗಳು ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. 

ಡಾ. ರಾಧಾಕೃಷ್ಣನ್ ಅವರು 1962 ರಿಂದ 1967 ರವರೆಗೆ ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದಾಗ, ಅವರ ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಸೆಪ್ಟೆಂಬರ್ 5 ರಂದು ಅವರ ಜನ್ಮದಿನವನ್ನು ಆಚರಿಸಲು ಅವಕಾಶ ನೀಡುವಂತೆ ಕೇಳಿಕೊಂಡರು. ಅವರು ಆಡಂಬರದ ಆಚರಣೆಗೆ ಒಪ್ಪಲಿಲ್ಲ,ಆದರೆ ಆ ದಿನದಂದು ದೇಶದ ಭವಿಷ್ಯ ರೂಪಿಸಲು ಶ್ರಮಿಸುತ್ತಿರುವ ಶಿಕ್ಷಕರಿಗಾಗಿರಲಿ ಎಂದರು. ಅದಕ್ಕಾಗಿ ಅವರ ಜನ್ಮದಿನವನ್ನು ನಾವು

ಶಿಕ್ಷಕರ ದಿನವನ್ನಾಗಿ ಆಚರಿಸುತ್ತೇವೆ.

ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ ತುಂಬಾ ಮುಖ್ಯವಾಗಿದೆ,ನಮಗೆ ಸಮಾಜದ ಜವಾಬ್ದಾರಿಯ ಅರಿವಿನ ಜೊತೆಗೆ ಶಿಕ್ಷಣವನ್ನು ನೀಡಿದ ಶಿಕ್ಷಕ ವೃಂದಕ್ಕೆ ಕೃತಜ್ಞತೆ ಸಲ್ಲಿಸುವುದಕ್ಕೆ ಈ ದಿನ‌ ಪ್ರಮುಖವಾಗಿದೆ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ,ಹೀರಾ ನಾಯಕ, ಕಾಶಿನಾಥ ಶೆಟಗಾರ, ಸಿದ್ದು ಪುಜಾರಿ,ವಿಶ್ವನಾಥ ಮಾಡಗಿ,ವಿಜಯ ಚವ್ಹಾಣ, ಲಕ್ಷ್ಮಣ ಕಟ್ಟಿಮನಿ,ಈಶು ರಾಠೋಡ,ನಶ್ರುದ್ದಿನ ಬಳವಡಗಿ ಸೇರಿದಂತೆ ಇತರರು ಇದ್ದರು.