ಶಹಾಬಾದ್ - ವಾಡಿ ರೈಲ್ವೆ ಕಾಮಗಾರಿ ಅಭಿವೃದ್ಧಿ ಬಗ್ಗೆ ರೈಲ್ವೆ ಅಧಿಕಾರಿಗಳ ಜೊತೆ ಡಾ. ಉಮೇಶ್ ಜಾಧವ್ ಚರ್ಚೆ

ಶಹಾಬಾದ್ - ವಾಡಿ ರೈಲ್ವೆ ಕಾಮಗಾರಿ ಅಭಿವೃದ್ಧಿ ಬಗ್ಗೆ ರೈಲ್ವೆ ಅಧಿಕಾರಿಗಳ ಜೊತೆ ಡಾ. ಉಮೇಶ್ ಜಾಧವ್ ಚರ್ಚೆ

ಶಹಾಬಾದ್ - ವಾಡಿ ರೈಲ್ವೆ ಕಾಮಗಾರಿ ಅಭಿವೃದ್ಧಿ ಬಗ್ಗೆ ರೈಲ್ವೆ ಅಧಿಕಾರಿಗಳ ಜೊತೆ ಡಾ. ಉಮೇಶ್ ಜಾಧವ್ ಚರ್ಚೆ

ಕಲಬುರಗಿ : ಸೊಲ್ಲಾಪುರ ವಿಭಾಗೀಯ ವ್ಯಾಪ್ತಿಯಲ್ಲಿ ಬರುವ ಶಹಬಾದ್, ವಾಡಿ ಹಾಗೂ ಕಲಬುರಗಿ ರೈಲ್ವೇ ಅಭಿವೃದ್ಧಿ ಕಾಮಗಾರಿಗಳ ಕುರಿತು ಸೊಲ್ಲಾಪುರ ವಿಭಾಗೀಯ ವ್ಯವಸ್ಥಾಪಕರ ಜೊತೆ ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ಸುದೀರ್ಘ ಚರ್ಚೆ ನಡೆಸಿ ಪ್ರಗತಿಯನ್ನು ಪರಿಶೀಲಿಸಿದರು. 

    ಸೋಲಾಪುರ ವಿಭಾಗಿಯ ಕಚೇರಿಯಲ್ಲಿ ಮಾರ್ಚ್17ರಂದು ಸೋಮವಾರದಂದು ರೈಲ್ವೆ ವಿಭಾಗೀಯ ವ್ಯವಸ್ಥಾಪಕರಾದ ಸುಜಿತ್ ಮಿಶ್ರಾ ಜೊತೆ ವಿಸ್ತೃತ ಚರ್ಚೆ ನಡೆಸಿದರು. 

 ಶಹಬಾದ್ ರೈಲ್ವೆ ನಿಲ್ದಾಣದ ಎರಡು ಕಡೆಗಳಲ್ಲಿ ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣ ಕಾಮಗಾರಿಯ ಪ್ರಗತಿಯ ಮಾಹಿತಿ ಪಡೆದು ಪ್ರಸ್ತಾವಕ್ಕೆ ಇದೀಗ ಟೆಂಡರ್ ಆಹ್ವಾನಕ್ಕೆ ಒಪ್ಪಿಗೆ ಲಭಿಸಿರುವುದು ಸಂತಸ ಕರ ಸಂಗತಿ ಎಂದು ಹೇಳಿದರು. ಈ ಹಿಂದೆ ಲೋಕಸಭಾ ಸದಸ್ಯನಾಗಿದ್ದಾಗ ಸಲ್ಲಿಸಿದ ಈ ಪ್ರಸ್ತಾಪವನ್ನು ರೈಲ್ವೆ ಇಲಾಖೆ ಪರಿಗಣಿಸಿ ಟೆಂಡರ್ ಕರೆದಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ವಾಡಿ ಬೈಪಾಸ್ ಗೆ ಸಂಪರ್ಕ ಕಲ್ಪಿಸಲು ರೈಲ್ವೇ ಓವರ್ ಬ್ರಿಡ್ಜ್ ನಿರ್ಮಾಣವನ್ನು ತ್ವರಿತವಾಗಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಸಲಹೆ ನೀಡಿದರು. 

  ಕಲಬುರಗಿಯ ಹೊರವಲಯದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಡೆಗೆ ಕಲಬುರಗಿ ರೈಲ್ವೆ ನಿಲ್ದಾಣದ ಎಡಭಾಗದಿಂದ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೂ ಶೀಘ್ರ ಕ್ರಮ ಕೈಗೊಳ್ಳುವಂತೆ ರೈಲ್ವೆ ಇಲಾಖೆಯನ್ನು ಒತ್ತಾಯಿಸಿದರಲ್ಲದೆ ಈ ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸೌಲಭ್ಯವನ್ನು ಒದಗಿಸಬೇಕು. ಈ ಬಗ್ಗೆ ಕೇಂದ್ರ ರೇಲ್ವೆ ಇಲಾಖೆಯಿಂದ ಯಾವುದೇ ರೀತಿಯ ಸಹಕಾರವನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಸಾರ್ವಜನಿಕರಿಗೆ ರೈಲ್ವೆ ಸೇವೆಯನ್ನು ಅತ್ಯಂತ ಸುಗಮವಾಗಿ ಮತ್ತು ನಿಲ್ದಾಣಗಳಲ್ಲಿ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸಲು ಇಲಾಖೆ ಗಮನಕೊಡಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಶಹಾಬಾದ್ ವಾಡಿ ಕಲಬುರಗಿ ಮತ್ತು ಸ್ಟೇಷನ್ ಗಾಣಗಾಪುರ ರೈಲ್ವೆ ನಿಲ್ದಾಣಗಳಲ್ಲಿ ಅಮೃತ ಭಾರತ್ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಈಗಾಗಲೇ ಹಲವಾರು ಪ್ರಗತಿ ಕಾರ್ಯಗಳು ನಡೆಯುತ್ತಿದ್ದು ರೈಲ್ವೆ ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ಡಾ. ಜಾಧವ್ ಈ ಸಂದರ್ಭದಲ್ಲಿ ಅಭಿನಂದಿಸಿದರು. 

   ಈ ಸಂದರ್ಭದಲ್ಲಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕರ ಜೊತೆ ಹಿರಿಯ ಅಧಿಕಾರಿ ಅತುಲ್ ಲೋಕರೆ ಉಪಸ್ಥಿತರಿದ್ದರು.