ಎಲ್ಲಾ ವರ್ಗದ ಹಿತಕಾಯುವ ಅತ್ಯುತ್ತಮ ಕೇಂದ್ರ ಬಜೆಟ್
ಎಲ್ಲಾ ವರ್ಗದ ಹಿತಕಾಯುವ ಅತ್ಯುತ್ತಮ ಕೇಂದ್ರ ಬಜೆಟ್
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಧೈಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ 2025-26ನೇ ಸಾಲಿನ ಬಜೆಟನ್ನ ಹಣಕಾಸು ಮಂತ್ರಿ ನಿರ್ಮಲಾಸೀತಾರಾಮನ ಪ್ರಸ್ತುತಪಡಿಸಿದ್ದು ಇದು ಸಾರ್ವಕಾಲಿಕ ಬಜೆಟ್ ಆಗಿದೆ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸಣ್ಣ ರೈತರಿಗೆ 3-5ಲಕ್ಷ ರೂವರೆಗು ಕ್ರೆಡಿಟ್ ಮೂಲಕ ಸಾಲದ ವ್ಯವಸ್ಥೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 2ಕೋಟಿ ಉದ್ಯಮ ಸ್ಥಾಪಿಸಲು ಸಾಲ ಸೌಲಭ್ಯ ಗ್ರಾಮೀಣ ಭಾಗದಲ್ಲಿ 1.5 ಲಕ್ಷ ನೂತನ ಪೋಸ್ಟಾಫಿಸ್ ಸ್ಥಾಪನೆ 7.5ಕೋಟಿ ಉದ್ಯೋಗ ಸೃಷ್ಟಿಗೆ ವಿವಿಧ ಕೈಗಾರಿಕಾ ಉದ್ಯಮ ಸ್ಥಾಪನೆಗೆ ಅನುವು ಸರಕಾರಿ ಶಾಲೆಗಳಿಗೆ ಅಟಲ ಟಿಂಕರಿಂಗ ಲ್ಯಾಬ ಸ್ಥಾಪನೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇಂಟರನೆಟ ವ್ಯವಸ್ಥೆ ಸರಕಾರಿ ಶಾಲೆ ಅಭಿವೃದ್ಧಿ ಅಂಗನವಾಡಿ ಮೂಲಕ ಮಕ್ಕಳಿಗೆ ನವಜಾತ ಶಿಶುಗಳು ತಾಯಂದಿರಿಗೆ ಪೌಷ್ಟಿಕ ಆಹಾರ ಇನ್ನಿತರ ಸೌಲಭ್ಯ ನೀಡುವದರ ಮೂಲಕ ಸಕ್ಷಮ ಅಂಗನವಾಡಿ 2.0 ಘೋಷಿಸಿದ ನರೇಂದ್ರ ಮೋದಿ ಸರ್ಕಾರಕ್ಕೆ ಅಭಿನಂದನೆಗಳು ಎಂದಿದ್ದಾರೆ.