ಸಾಹಸದ ಸಂಕೇತ ರಾಣಿ ಚೆನ್ನಮ್ಮ: ನಮೋಶಿ

ಸಾಹಸದ ಸಂಕೇತ ರಾಣಿ ಚೆನ್ನಮ್ಮ: ನಮೋಶಿ

ಸಾಹಸದ ಸಂಕೇತ ರಾಣಿ ಚೆನ್ನಮ್ಮ: ಶಶೀಲ್ ಜಿ ನಮೋಶಿ

ವಾಡಿ:ಬಿಜೆಪಿ ಕಛೇರಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸಲಾಯಿತು.

ಈ ವೇಳೆ ವಿಧಾನ ಪರಿಷತ್ ಸದಸ್ಯರು ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ ನಮೋಶಿ ಅವರು

ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ,ಕಿತ್ತೂರು ರಾಣಿ ಚೆನ್ನಮ್ಮ ಭಾರತದ ಇತಿಹಾಸದಲ್ಲಿ ನಮ್ಮ ವೀರತ್ವದ ಸಂಕೇತ ಎಂದರು.

ಕಿತ್ತೂರು ಚೆನ್ನಮ್ಮ ತನ್ನ 15ನೇ ವಯಸ್ಸಿನಲ್ಲೇ ರಾಜಾ ಮಲ್ಲಸರ್ಜ ಎಂಬ ದೇಸಾಯಿ ಮನೆತನದವರನ್ನು ವಿವಾಹವಾದರು. ನಂತರ ಕಿತ್ತೂರು ರಾಣಿ ಚನ್ನಮ್ಮ ಎಂಬ ಕರೆಯಲ್ಪಟ್ಟರು, ಅವರು ಬ್ರಿಟಿಷರ ವಿರುದ್ಧ ದಂಗೆಯೆದ್ದ ಮೊದಲ ಮಹಿಳಾ ಆಡಳಿತಗಾರರಲ್ಲಿ ಒಬ್ಬರೆಂದು ಪ್ರಶಂಸಿಸಲ್ಪಟ್ಟಿರುವ ಚನ್ನಮ್ಮಾಜಿ ಅವರ ಶೌರ್ಯ ಪರಾಕ್ರಮಗಳ ಬಗ್ಗೆ ಇಂದಿನ ಯುವ ಪೀಳಿಗೆ ಅರಿಯುವುದು ಅತ್ಯವಶ್ಯಕವಾಗಿದೆ.

ಚೆನ್ನಮ್ಮ ನಮ್ಮಲ್ಲಿನ ಒಳಸಂಚಿನಿಂದ ಬ್ರಿಟಿಷರ ಕೈ ವಶವಾದಳು.ಅವರನ್ನು ಸೆರೆವಾಸದಿಂದ ಬಿಡಿಸಲು ಸಾಕಷ್ಟು ವೀರಯೋಧರು ಪಣತೊಟ್ಟರು. ಬಹುತೇಕ ವೀರರು ತಮ್ಮ ಪ್ರಾಣವನ್ನೇ ಬಲಿದಾನ ಮಾಡುವುದರ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಅಂತಹ ಮಹಾನ್ ಪುರುಷರ ಸಾಲಿನಲ್ಲಿ ನಮ್ಮ ವೀರರಾಣಿ ಕಿತ್ತೂರಿನ ಚನ್ನಮ್ಮ ಕೂಡಾ ಒಬ್ಬರು. ಅವರ ಹೋರಾಟದ ಫಲವಾಗಿ ಇಂದು ದೇಶ ಸ್ವಾತಂತ್ರ್ಯವಾಗಿದೆ ಎಂದು ಹೇಳಿದರು.

ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಇತಿಹಾಸ ನೋಡಿದಾಗ ಅವರು

ಕೊನೆಯ ಯುದ್ಧದಲ್ಲಿ ಸೋತರೂ ಆ ತಾಯಿಯ ಧೈರ್ಯ, ಶೌರ್ಯವನ್ನು ಈ ದೇಶ ಎಂದಿಗೂ ಮರೆಯಲ್ಲ. ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಸೇನೆಯೇ ಕಿತ್ತೂರು ರಾಣಿ ಚೆನ್ನಮ್ಮರ ಸೇನೆಯಾಗಿತ್ತು. ಆ ತಾಯಿಯ ನಾಡಭಕ್ತಿಯ ಪರಂಪರೆ, ಜಯ, ಶೌರ್ಯವನ್ನು ಈ ಮಣ್ಣಿನ ಜನ ಎಂದು ಮರೆಯದಂತದ್ದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ,ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ, ಮುಖಂಡರಾದ ಶರಣಗೌಡ ಚಾಮನೂರ, ಹರಿ ಗಲಾಂಡೆ, ಶಿವಶಂಕರ ಕಾಶೆಟ್ಟಿ, ಶಿವರಾಮ ಜಾಧವ,ರಾಜಶೇಖರ ದೂಪದ,ಮಲ್ಲಿಕಾರ್ಜುನ ಸಾತಖೇಡ, ಅಯ್ಯಣ್ಣ ದಂಡೋತಿ, ಪ್ರೇಮ ರಾಠೋಡ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ,ಉಮಾಭಾಯಿ ಗೌಳಿ ಸೇರಿದಂತೆ ಇತರರು ಇದ್ದರು.