ವಾಡಿ ಯಲ್ಲಿ ಬಿಹಾರ ಗೆಲುವಿನ ಸಂಭ್ರಮ
ವಾಡಿ ಯಲ್ಲಿ ಬಿಹಾರ ಗೆಲುವಿನ ಸಂಭ್ರಮ
ವಾಡಿ: ಪಟ್ಟಣದ ಆಝಾದ್ ವೃತ್ತದಲ್ಲಿ ಬಿಜೆಪಿ ಮುಖಂಡರು
ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದ ದಿಗ್ವಿಜಯಕ್ಕೆ ಹರ್ಷ ವ್ಯಕ್ತಪಡಿಸಿ,ಸಿಹಿ ಹಂಚಿ,ಪಟಾಕಿಸಿಡಿಸಿ ಸಂಭ್ರಮಿಸಿದರು.
ಈ ವೇಳೆ ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಎನ್‌ಡಿಎ ಅಭ್ಯರ್ಥಿಗಳಿಗೆ ಹಾಗೂ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಪಕ್ಷದ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಮತ್ತು ಮತದಾರ ಬಂಧುಗಳಿಗೆ ಧನ್ಯವಾದಗಳು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಅವರು ಮಾತನಾಡಿ
ಬಿಜೆಪಿ ಮತಗಳ್ಳತನ ಮಾಡಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಬಿಹಾರಿನ ಪ್ರಜ್ಞಾವಂತ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ನಾವು ಗೆದ್ದಾಗ ವಿರೋಧ ಪಕ್ಷದ ಮತಯಂತ್ರ,ಮತ ಕಳುವಿನ ನಾಟಕ ಚಾಲು ಆಗುತ್ತದೆ.
ಜನರ ಮನಸ್ಸು ಗೆದ್ದಿಯುವ,ದೇಶದ ಅಭಿವೃದ್ಧಿಗೆ ಶ್ರಮಿಸದವರಿಂದ ಇದು ಸಾಮಾನ್ಯ ಅದಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಪುರಸಭೆ ವಿರೋಧ ಪಕ್ಷದ ಮಾಜಿ ನಾಯಕ ಭೀಮಶಾ ಜಿರೋಳ್ಳಿ ಮಾತನಾಡಿ
ದೇಶದಲ್ಲಿ ಮೋದಿಜಿ ಅವರ ಜನಪ್ರಿಯತೆಗೆ ಈ ಒಂದು ಫಲಿತಾಂಶ ಸಾಕ್ಷಿಯಾಗಿದೆ ಇನ್ನಾದರೂ ವಿರೋಧ ಪಕ್ಷದವರು ದೇಶವನ್ನು ದೇಶದ ಸಂವಿಧಾನವನ್ನು ದೇಶದ ಜನರನ್ನು ಗೌರವಿಸುವುದನ್ನು ಕಲಿಯಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್ ಸಿ ಮೋರ್ಚಾ ಅಧ್ಯಕ್ಷ ದೌಲತರಾವ, ಚಿತ್ತಾಪುರಕರ, ಮುಖಂಡರಾದ. ಕಿಶನ ಜಾಧವ, ಅಂಬದಾಸ ಜಾಧವ, ಶಿವಶಂಕರ ಕಾಶೆಟ್ಟಿ,ರಾಮು ರಾಠೋಡ,
ವಿಶ್ವರಾಧ್ಯ ತಳವಾರ,ಈರಣ್ಣಗೌಡ ಕಡಬೂರ,ಬಾಳು ಪವಾರ,
ಸಿದ್ದಾರ್ಥ ವಾಡಿ, ಮಲ್ಲಿಕಾರ್ಜುನ ಹೇರೊರ ಸೇರಿದಂತೆ ಇತರರು ಪಾಲ್ಗೊಂಡು ಬಿಜೆಪಿ ಜಯಘೋಷ ಮೊಳಗಿಸಿದರು..
