ಕಲಬುರ್ಗಿಯಲ್ಲಿ ನಾಳೆ 19 ನೇ ರಾಜ್ಯ ಸಚಿವ ಸಂಪುಟ ಸಭೆ: ನಿಷೇದಾಜ್ಞೆ ಜಾರಿ

ಕಲಬುರ್ಗಿಯಲ್ಲಿ ನಾಳೆ 19 ನೇ  ರಾಜ್ಯ ಸಚಿವ ಸಂಪುಟ ಸಭೆ: ನಿಷೇದಾಜ್ಞೆ ಜಾರಿ

ಕಲಬುರ್ಗಿಯಲ್ಲಿ ನಾಳೆ 19 ನೇ ರಾಜ್ಯ ಸಚಿವ ಸಂಪುಟ ಸಭೆ: ನಿಷೇದಾಜ್ಞೆ ಜಾರಿ

ಕಲಬುರಗಿ : 16ನೇ ಸೆಪ್ಟೆಂಬರ್, ,ಕಲಬುರಗಿಯಲ್ಲಿ ನಡೆಯಲಿರುವ 19ನೇ ರಾಜ್ಯ ಸಚಿವ ಸಂಪುಟದ ಸಭೆ ಹಿನ್ನೆಲೆಯಲ್ಲಿ ಮಿನಿ ವಿಧಾನ ಸೌಧ ಜಿಲ್ಲಾಧಿಕಾರಿಗಳ ಕಚೇರಿ ವ್ಯಾಪ್ತಿಯ ಸುತ್ತ ಮುತ್ತ 200 ಮೀಟರೆಗೆ ನಗರದ ಉಪ ಪೊಲೀಸ್ ಆಯುಕ್ತರು, (ಕಾ & ಸು) ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾಗಿರುವ ಐಪಿಎಸ್ ಕನ್ನಿಕಾ ಸಿಕ್ರಿವಾಲ ಅವರು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುವ ಸಚಿವ ಸಂಪುಟ ಸಭೆಯ ವೇಳೆ ಸಂಘಟನೆಗಳು, ಪ್ರತಿಭಟನೆ ಮತ್ತು ಮುಷ್ಕರ ಮಾಡುವ ಸಾಧ್ಯತೆ ಇರುವುದರಿಂದ ಕಾನೂನು ಸುವ್ಯವಸ್ಥೆಯ ಹಿತದೃಷ್ಠಿಯಿಂದ ಸುಗಮ ಸಚಿವ ಸಂಪುಟ ಸಭೆ ನಡೆಸಲು ಆಯುಕ್ತರು ದಂಡ ಪ್ರಕ್ರಿಯಾ ಸಂಹಿತೆಯ ಕಲಂ 163 ನೇ ಪ್ರಕರಣದ ಅನ್ವಯ ಪ್ರದತ್ತವಾದ ಅಧಿಕಾರವನ್ನು ಉಪಯೋಗಿಸಿ ಸಚಿವ ಸಂಪುಟ ಸಭೆ ನಡೆಯುವ ಸ್ಥಳದಿಂದ 200 ಮೀಟರ ಬಿ.ಎನ್.ಎಸ್.ಎಸ್ ಕಾಯ್ದೆ ಪ್ರಕ್ರಿಯಾ ಸಂಹಿತೆ ಕಾಯ್ದೆ 1973 ರ ಕಲಂ: 163 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಮಂಗಳವಾರ 10 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಈ ಪ್ರದೇಶದಲ್ಲಿ ನಿಷೇಧಾಜ್ಞೆ ಹೊರಡಿಸಿರುವ ಅವರು ಮೆರವಣಿಗೆ, ಪ್ರತಿಭಟನೆ, ಸಭೆ, 5 ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದು, ಶಸ್ತ್ರಗಳನ್ನು, ದೊಣ್ಣೆಗಳನ್ನು, ಕತ್ತಿಗಳು, ಈಟಿಗಳು, ಗದೆಗಳು, ಕಲ್ಲು, ಇಟ್ಟಿಗೆ, ಚಾಕು ಇನ್ನೂ ಮುಂತಾದ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದು, ಯಾವುದೇ ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲುಗಳನ್ನು, ಕ್ಷಿಪಣಿಗಳನ್ನು ಎಸೆಯುವ ಸಾಧನಗಳ ಅಥವಾ ಉಪಕರಣಗಳ ಒಯ್ಯುವಿಕೆಯನ್ನು ಮತ್ತು ಶೇಖರಿಸುವುದು, ವ್ಯಕ್ತಿಗಳ ಅಥವಾ ಅವರ ಶವಗಳ ಪ್ರತಿಕೃತಿಗಳ ಪ್ರದರ್ಶನ ಮಾಡುವುದನ್ನು, ಪ್ರಚೋದಿಸಬಹುದಾದ ಬಹಿರಂಗ ಘೋಷಣೆಗಳನ್ನು ಕೂಗುವುದು, ಸಂಜ್ಞೆ ಮಾಡುವುದು,ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.