ಪ್ರಯತ್ನದಿಂದ ಜಯ, ಯಶಸ್ಸು ಸದಾ ಸಿದ್ವ--ಡಾ.ಬಂಧು.ಸಿದ್ದೇಶ್ವರ.
ಪ್ರಯತ್ನದಿಂದ ಜಯ, ಯಶಸ್ಸು ಸದಾ ಸಿದ್ವ--ಡಾ.ಬಂಧು.ಸಿದ್ದೇಶ್ವರ.
ಕಲಬುರಗಿ ;-- ಒಂದು ಪೆನ್ನ ನಿಂದ ರಚಿತವಾದ ಕಾನೂನು ಪುಸ್ತಕ ವೂ, ಮಾನವ ಜನಾಂಗ ಗುಲಾಮಗಿರಿಗೆ ತಳ್ಳಿದರೇ. ಮತ್ತೊಂದು ಪೆನ್ನು ಬರೆದ ಸಂವಿಧಾನ ಪುಸ್ತಕ ವೂ ಶತಮಾನದ ಗುಲಾಮಗಿರಿ ಕಡಿದು ಸರ್ವರಿಗೂ ಸಮಾನ ಅವಕಾಶ .ಸ್ವಾತಂತ್ರ್ಯ. ಸಮಾನತೆ, ಸಹೋದರತೇ ಮಾನವೀಯ ಮೌಲ್ಯ ನೀಡಿದು,ಇಂದಿನ ವಿದ್ಯಾರ್ಥಿಗಳು ಪೆನ್ನ,ಪುಸ್ತಕ ಮಹತ್ವ ತಿಳಿದು ಕೊಂಡು. ಸತತ ಕ್ರಿಯಾಶೀಲರಾಗಿ ,ಪ್ರಯತ್ನ ಶಾಲಿಗೆ ಜಯ,ಯಶಸ್ಸು ಸದಾ ಖಚಿತವೆಂದು ನಿವೃತ್ತ ಉಪನ್ಯಾಸಕರಾದ ಡಾ.ಕೆ.ಎಸ ಬಂಧು.ಸಿದ್ದೇಶ್ವರ ರವರು ಮಕ್ಕಳಿಗೆ ಕರೆನೀಡಿದರು ಶಹಾಬಾದ ತಾಲ್ಲೂಕ ಮಟ್ಟದ " ನಮ್ಮ ನಡಿಗೆ --- ಶಾಲೆಯ ಕಡೆಗೆ " ಶಿಕ್ಷಣ ವೇ ಮಕ್ಕಳ ಹಕ್ಕು ಕಾರ್ಯಕ್ರಮ ಉದ್ಘಾಟನಾ ಮುಖ್ಯ ಭಾಷಣ ಕಾರರಾಗಿ .ಮಾತನಾಡುತ,ವಿದ್ಯಾರ್ಥಿಗಳು 25 ವರ್ಷ ಕಷ್ಟ ಪಟ್ಟು ಜ್ಞಾನ ಭಂಡಾರ ಸಂಪಾದಿಸಿದರೇ, ಜೀವನದಲ್ಲಿ 75 ವರ್ಷ ಸುಖವಾಗಿರಬಹುದು. ಡಾ.ಅಂಬೇಡಕರ ರಂತೆ ಘನವಾದ ಶಿಕ್ಷಣ ಗಳಿಸಿ.ಜಗತ್ತಿಗೆ ಹೆಸರುವಾಸಿ ಆಗಲು.ಡಾ.ಬಂಧು. ಸಲಹೆ ನೀಡಿದರು. ಕಲಬುರಗಿ ಗ್ರಾಮೀಣ ಶಾಸಕ ರಾದ ಬಸವರಾಜ ಮತ್ತಿಮೂಡ ಅವರು ಜ್ಯೋತಿ ಬೆಳಗಿಸಿ ಇಂದಿನ ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯ ಗಳಿದ್ದು. ಸದುಪಯೋಗಪಡಿಸಿಕೊಂಡು ಉತ್ತಮ ಫಲಿತಾಂಶದಿಂದ ಜಯಶೀಲರಾಗಿರೆಂದು.ಶಿಕ್ಷಣ ಮತ್ತು ಆರೋಗ್ಯ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಶಿಧರ ಬೀರಾದಾರ ಇವರು ಕಾರ್ಯಕ್ರಮದ ಉದ್ದೇಶಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ, ವಿದ್ಯಾರ್ಥಿಗಳು ಈ ವರ್ಷ ಫಲಿತಾಂಶ ದಿಂದ ತಾಲ್ಲೂಕಿನ ಕೀರ್ತಿಯ ಹೆಚ್ಚಿಸುವ ಮೂಲಕ ಶಿಕ್ಷಕರು ,ವಿದ್ಯಾರ್ಥಿಗಳು ಶ್ರಮವಹಿಸಬೇಕಂದರು. ಮರೆಪ್ಪ ಹಳ್ಳಿ ಶಿಕ್ಷಣ. ಸಂಘಟನೆ.ಹೋರಾಟದ ಮಹತ್ವ ಮತ್ತು ಶಿಕ್ಷಣ ದಿಂದ ಎಲವೂ ಸುಧಾರಿಸಲು ಸಾಧ್ಯ ವೆಂದರು. ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾದ ನಾಗಪ್ಪ ಬೆಳಮಗಿ ಯೋಜನೆಯ ಧ್ಯೇಯ ಧೋರಣೆ ವಿವರಿಸಿದರು ಕಾರ್ಯಕ್ರಮ ದಲ್ಲಿ ಗಂಗಾಧರ,ನಿರ್ಮಲ ಶೆಟ್ಟಿ.ಪ್ರಭಾವತಿ.ಯೆಮನ್ ರಾಠೋಡ. ಎನ್.ಸಿ.ವಾರದ. ಶರಣಗೌಡ ಸತ್ಯ ನಾರಾಯಣ.. ಬಸವರಾಜ ನಂದಿಧ್ವಜ.ಶಿವರಾಜ ಕೋರೆ. ವಿವಿಧ ಶಾಲೆಯ ಮುಖ್ಯ ಗುರುಗಳು.ವಿದ್ಯಾರ್ಥಿಗಳು ಸೇರಿದರು. ಆಗ್ರಾ ಸುಲ್ತಾನ ನಿರೂಪಣೆ ಮಾಡಿದರೇ.ರವೀಂದ್ರ ಬೆಳಮಗಿ ವಂದನಾರಪಣೆ ಗೈದರು