ಅನಿಲ ವಿಠ್ಠಲರಾವ ಮೊರೆ ಅವರ ನಿಧನಕ್ಕೆ ಮರಾಠಾ ಸಮಾಜದ ಮುಖಂಡರು ಕಂಬನಿ
ಅನಿಲ ವಿಠ್ಠಲರಾವ ಮೊರೆ ಅವರ ನಿಧನಕ್ಕೆ ಮರಾಠಾ ಸಮಾಜದ ಮುಖಂಡರು ಕಂಬನಿ
ಕಲಬುರಗಿ : ಮರಾಠಾ ಸಮಾಜದ ಹಿರಿಯ ಮುಖಂಡರಾದ ಅನಿಲ ವಿಠ್ಠಲರಾವ ಮೊರೆ ಅವರ ನಿಧನಕ್ಕೆ ಮರಾಠಾ ಸಮಾಜದ ಮುಖಂಡರು ಕಂಬನಿ ಮಿಡಿದ್ದಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅನಿಲ ಮೊರೆ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದು.ಅಗಲಿದ ನಾಯಕನ ನಿಧಕ್ಕೆ ಕಲಬುರಗಿ ಮರಾಠ ಸಮಾಜ ಛತ್ರಪತಿ ಶಿವಾಜಿ ಮಹಾರಾಜ ಅವರ ಪಾರ್ಕ್ ನಲ್ಲಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದ್ದರು.
ಈ ಕುರಿತು ಮಾತನಾಡಿದ ಬ್ರಹ್ಮಪುರ ಬಡವಣೆಯ ಮರಾಠಾ ಸಮಾಜದ ಅಧ್ಯಕ್ಷ ಜ್ಯೊತಿಭಾ ಜಾಧವ್ ಅವರು, ಅನಿಲ್ ವಿಠ್ಠಲರಾವ ಅವರು ಮರಾಠಾ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ಕಲಬುರಗಿ ಮರಾಠ ಸಮಾಜಕ್ಕೆ ತುಂಬಲಾರದಷ್ಟು ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದ್ದರು.
ಇನ್ನು ಮೃತ ಅನಿಲ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಅನಿಲ ಅವರು ಹಡಗು ನಿರ್ಮಾಣ ಕಂಪನಿಯಲ್ಲಿ ಪ್ರೋಡಕ್ಷನ್ ಡಿಪಾರ್ಟ್ಮೆಂಟ್'ನಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ನಂತರ ಮರಾಠಾ ಸಮಾಜ ಏಳಿಗೆಗಾಗಿ ಹಗಲಿರುಳು ಶ್ರಮಿಸಿ, ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮರಾಠಾ ಸಮಾಜದ ಅಧ್ಯಕ್ಷ ಜ್ಯೊತಿಭಾ ಜಾದವ್ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮರಾಠಾ ಸಮಾಜದ ಮುಖಂಡರು ಹಾಗೂ ಅನೇಕ ಜನರು ಉಪಸ್ಥಿತರಿದ್ದರು.