ಶಿಕ್ಷಕ ನಾಗನಾಥ ಜುಲ್ಫೆ ಅವರ ಸೇವಾ ನಿವೃತಿ ಬಿಳ್ಕೋಡಗೆ ಸಮಾರಂಭ:

ಶಿಕ್ಷಕ  ನಾಗನಾಥ ಜುಲ್ಫೆ ಅವರ ಸೇವಾ ನಿವೃತಿ ಬಿಳ್ಕೋಡಗೆ ಸಮಾರಂಭ:

ಶಿಕ್ಷಕ ನಾಗನಾಥ ಜುಲ್ಫೆ ಅವರ ಸೇವಾ ನಿವೃತಿ ಬಿಳ್ಕೋಡಗೆ ಸಮಾರಂಭ:

   ಕಮಲನಗರ :ತಾಲೂಕಿನ ಹೊಳೆಸಮುದ್ರ ವಲಯದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ನಾಗನಾಥ ಜುಲ್ಫೆ ಅವರ ಸೇವಾ ನಿವೃತ್ತಿ ಬಿಳ್ಕೋಡಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.  

ಈ ಕಾರ್ಯಕ್ರಮವು ಸಾವಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಾಯಿತು.

ಶಿಕ್ಷಕ ವೃತ್ತಿಯು ಎಲ್ಲಾ ವೃತ್ತಿಗಳಲ್ಲಿಯೇ ಅತಿ ಪವಿತ್ರವಾದ ವೃತ್ತಿಯಾಗಿದ್ದು ಇಂತಹ ಪವಿತ್ರ ವೃತ್ತಿಗೆ ಧಕೆ ಬಾರದಂತೆ ನಡೆದುಕೊಳ್ಳುವುದು ಅವಶ್ಯಕವಾಗಿದೆ.

    ಶಿಕ್ಷಣ ಇಲಾಖೆಯಲ್ಲಿ 30 ವರ್ಷಗಳ ಸುದೀರ್ಘ ಸೇವೆಯಲ್ಲಿ 5 ಶಾಲೆಗಳಲ್ಲಿ ಸೇವೆ ಸಲ್ಲಸಿದ ನಾಗನಾಥ ಜುಲ್ಫೆ ಅವರ ಸೇವೆ ಉತ್ತಮವಾಗಿದ್ದು, ಅವರು ಎಲ್ಲರೊಂದಿಗೆ ಪ್ರೀತಿಯ ಪಾತ್ರರಾಗಿದ್ದಾರೆ. ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದಾರೆ.ಸ್ನೇಹಮಯಿಯಾಗಿದ ನಾಗನಾಥ ಜುಲ್ಫೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಆತ್ಮೀಯರಾಗಿ ಬೆರೆಯುತ್ತಿರುವುದೆಂದು ನೆನಪಿಸಿಕೊಳ್ಳುತ್ತಾ ಸಮೂಹ ಸಂಪನ್ಮೂಲ ವ್ಯಕ್ತಿ ಮಾಧಪ್ಪಾ ಮಡಿವಾಳ ಶುಭ ಹಾರೈಸಿದರು.

  ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಮಲನಗರ ಘಟಕದ ಅಧ್ಯಕ್ಷರಾದ ಬಸವರಾಜ ಪಾಟೀಲ ಅವರು ನಾಗನಾಥ ಜುಲ್ಫೆ ಅವರ ಸೇವಾ ಅವಧಿಯಲ್ಲಿ ಸೇವೆಗೆ ಯಾವುದೇ ರೀತಿಯಲ್ಲಿ ಧಕ್ಕೆ ಬಾರದಂತೆ, ಸಮಯ ಪರಿಪಾಲನೆ ಮಾಡುವುದರೊಂದಿಗೆ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ಮಾಡಿರುವುದನ್ನು ಸ್ಮರಿಸಿಕೊಂಡರು.

ಅದೇ ರೀತಿ ಸಂಘ ಜೀವಿಯಾಗಿದ ಜುಲ್ಫೆ ಅವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ನಿರ್ದೇಶಕರಾಗಿ ಶಿಕ್ಛಕರ ಸಮಸ್ಯೆಗಳ ಪರಿಹಾರಕ್ಕೆ ‌ಶ್ರಮಿಸಿದನ್ನು ನೆನಪಿಸಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಬ್ರಾಹಿಂ ಬಾಗವಾನರವರು ವಹಿಸಿದರು

 ಬಸವರಾಜ ಜಾಗಾವೆ,ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಲಾಜಿ ಬಿರಾದಾರ,ಪಂಢರಿನಾಥ ಢಗೆ, ಶಿವಾನಂದ ಬಿರಾಜದಾರ,ಮೆಹಬೂಬ್ ಪಟೇಲ್,ಜೈಯಶ್ರಿ ಲದ್ದೆ,ಕುಶಾಬಾಯಿ ಮೇತ್ರೆ,ಹೊಳಸಮುದ್ರ ವಲಯದಲ್ಲಿನ ವಿವಿಧ ಶಾಲೆಗಳ ಮುಖ್ಯ ಗುರುಗಳು ಹಾಗೂ ಜುಲ್ಫೆ ಪರಿವಾರದ ಸದಸ್ಯರು, ಬಂಧು ಮಿತ್ರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮುಂಚೆಸಾವಳಿ ಶಾಲೆಯ ಮಕ್ಕಳು ಸ್ವಾಗತ ಗೀತೆಯೊಂದಿಗೆ ಅತಿಧಿಗಳಿಗೆ ಸ್ವಾಗತಿಸಿದರು.ಮಡ್ಕೆ ಶ್ರೀಮಂತ ನಿರೂಪಿಸಿದರು.ರವೀಂದ್ರ ಪಾಟೀಲ ವಂದಿಸಿದರು.