ದೇವರ ದಾಸಿಮಯ್ಯರ ವಚನಗಳು ಸರ್ವಕಾಲಕ್ಕೂ ಶ್ರೇಷ್ಠ.

ದೇವರ ದಾಸಿಮಯ್ಯರ ವಚನಗಳು ಸರ್ವಕಾಲಕ್ಕೂ ಶ್ರೇಷ್ಠ.
ಶಹಾಪುರ : 11ನೇ ಶತಮಾನದ ಪ್ರಥಮ ವಚನಕಾರ, ಅಂದಿನ ಸಮಾಜದ ವ್ಯವಸ್ಥೆಯಲ್ಲಿರುವ ಕಂದಾಚಾರ, ಮೌಡ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ತಮ್ಮ ವಚನಗಳ ಮೂಲಕ ಅರಿವು ಮೂಡಿಸಿದ ಶ್ರೇಷ್ಠ ವಚನಕಾರ ದೇವರ ದಾಸಿಮಯ್ಯ ಎಂದು ನಿವೃತ್ತ ಶಿಕ್ಷಕ ಬೂದೆಪ್ಪ ಉಳ್ಳಿ ಹೇಳಿದರು.
ಶಹಾಪುರ ತಾಲೂಕಿನ ಸಗರ ಗ್ರಾಮದ ಹೋಳಿಕಟ್ಟೆ ಹತ್ತಿರದ ಬನಶಂಕರಿ ದೇವಸ್ಥಾನದಲ್ಲಿ ದೇವಾಂಗ ಸಮಾಜದ ವತಿಯಿಂದ ಏರ್ಪಡಿಸಿದ ದೇವರ ದಾಸಿಮಯ್ಯ ಜಯಂತಿಯನ್ನು ಸರಳವಾಗಿ ಆಚರಿಸಿ ಮಾತನಾಡಿದರು.
ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವುದರ ಅದರ ಜೊತೆಗೆ ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರವಾಗಿದೆ ಮತ್ತು ಕಾಯಕ ದಾಸೋಹದ ಪರಿಕಲ್ಪನೆ ಇವರದಾಗಿತ್ತು ಎಂದು ಹೇಳಿದರು.
ಬನಶಂಕರಿ ದೇವಸ್ಥಾನದ ಅರ್ಚಕರಾದ ಸಿದ್ದಯ್ಯಸ್ವಾಮಿ ಗಣಾಚಾರಿಮಠ ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು, ಈ ಸಂದರ್ಭದಲ್ಲಿ ಸುರೇಶ್ ಆದಿ, ಚಂದ್ರಶೇಖರ್ ಅರಳಗುಂಡಗಿ, ಶಿವಕುಮಾರ ಗಂವಾರ,ಶರಣಪ್ಪ ಪೂಜಾರಿ,ಬಸವರಾಜ ಯಾದಗಿರಿ, ಮಲ್ಕಪ್ಪ ವೆಂಕಟಪುರ,ಜೊತೆಗೆ ಇತರರು ಉಪಸ್ಥಿತರಿದ್ದರು.