ಮದುವೆಗೆ ಮುನ್ನ
ಮದುವೆಗೆ ಮುನ್ನ
ಮದುವೆಗೆ ಮುನ್ನ
ಕಂಡೆ ನಾ ಚಲುವ ಚಿನ್ನ
ಆ ಮನ್ಮಥ ಹೂಡಿದ ಸಂಚು
ಬಿಟ್ಟ ತನುಮನದಿ ಕಾಮನ ಕೋಲ್ಮಿಂಚು
ನನ್ನ ಹೃದಯ ಕದ್ದಿರುವೆ
ಯಾವ ಠಾಣೆಯಲಿ ಕೊಡಲಿ ದಾವೆ
ನೀ ಕದ್ದು ಗೆದ್ದಿರುವೆ ನನ್ನ ಮನವೆ
ನೀ ನನ್ನ ಚಿತ್ತಚೋರ
ಒಲವಿನೂರಲಿ ಮಾಡೋಣ ವಿಹಾರ
ನೀನೆ ನನ್ನ ಪ್ರೇಮದ ಪರಮಧಾಮ
ನೀನೊಬ್ಬನೇ ದುಂಬಿ ನಾನೊಬ್ಬಳೇ ನಿನ್ನ ಸುಮ
ನನ್ನೊಡನೆ ನೀನಿರಲು ಏ ಕಾಂತ
ನಾ ಬಯಸುವೆ ಸದಾ ಏಕಾಂತ
ಸುಧಾಕಾಂತೆ
ಭವ್ಯಸುಧಾಕರ ಜಗಮನೆ