ಭಾಗಿರಥಿ ಶಾಲೆಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ
ಭಾಗಿರಥಿ ಶಾಲೆಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ
ಕಮಲನಗರ: ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಾರಿದ ಶರಣರಾಗಿದ್ದಾರೆ ಎಂದು ಶಾಸ್ತ್ರೀ ಶಿಕ್ಷಣ ಸÀಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ. ಅಜಿತಕುಮಾರ ಶಾಸ್ತ್ರೀ ಹೇಳಿದರು.
ಪಟ್ಟಣದ ಶಾಸ್ತ್ರಿ ಶಿಕ್ಷಣ ಸಂಸ್ಥೆ ಸಹಯೋಗ ದಲ್ಲಿ ನಡೆಯಲಿರುವ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಅಂಬಿಗರ ಚೌಡಯ್ಯ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಚೌಡೇಶನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಇದೀಗ ಮೂಢನಂಬಿಕೆ ವಿರೋಧಿ ಕಾನೂನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಿದೆ. ಆದರೆ, ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ 12ನೇ ಶತಮಾನದಲ್ಲಿಯೇ ಮೂಢ ನಂಬಿಕೆ ಬಗ್ಗೆ ಜನಜಾಗೃತಿ ಮೂಡಿಸಿದ್ದರು ಎಂದರು.
ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಮಾತನಾಡಿ, ಚೌಡಯ್ಯನವರ ವಚನಗಳನ್ನು ಅಧ್ಯಯನ ಮಾಡಿದ್ದಲ್ಲಿ ಮೂಡನಂಬಿಕೆ ತಾನಾಗಿಯೇ ನಿವಾರಣೆ ಆಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಚೌಡಯ್ಯ ನವರ ಕಾಯಕ ನಿಷ್ಠೆ ಎಲ್ಲರಿಗೂ ಮಾದರಿ ಆಗಿದೆ ಎಂದರು.
ಶಿಕ್ಷಕ ಶೇಖ್ ಇಜಾಜ್ ಅಹಮದ್, ಶ್ರೀದೇವಿ ಸೋನಕಾಂಬಳೆ, ರಾಜಶ್ರೀ ಸಿರಗಿರೆ, ಶೀತಲ ನಂದು ಹಂಗರಗೆ, ಉಷಾ ವಿದ್ಯಾಸಾಗರ, ಅನುರಾಧಾ ಸಿದ್ರಾಮ, ದೀಪಮಾಲಾ, ಅಂಜಲಿ, ಪಂಚಫುಲಾ, ಅಶ್ವೀನಿ ಹಾಗೂ ಮಕ್ಕಳು ಇದ್ದರು.