ಉಚಿತ ನೇತ್ರ ತಪಾಸಣೆ ಶಿಬಿರ

ಉಚಿತ ನೇತ್ರ ತಪಾಸಣೆ ಶಿಬಿರ

ನಗರದಲ್ಲಿ19ರಂದು ಬೆಳಿಗ್ಗೆ ಡಾ.ಸಂತೋಷ ಪಾಟೀಲ ಹೆಬ್ಬಾಳ ಅವರಿಂದ ಉಚಿತ ನೇತ್ರ ತಪಾಸಣೆ ಶಿಬಿರ      

ಕಲಬುರಗಿ: ಸರ್ವೋದಯ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ ವತಿಯಿಂದ ಇದೆ ಜನೆವರಿ 19 ರಂದು ಬೆಳಿಗ್ಗೆ 10.45ಕ್ಕೆ ಶಿವಸಾಯಿ ನಗರದ ನೆಮ್ಮದಿ ಹಿರಿಯರ ಮನೆ (ವೃದ್ಧಾಶ್ರಮ)ದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ ಸಂಗೀತಾ ಸೈದಾಪೂರ ಹೇಳಿದರು.

 ಹೆಬ್ಬಾಳ ಕಣ್ಣಿನ ಆಸ್ಪತ್ರೆಯ ಖ್ಯಾತ ನೇತ್ರ ತಜ್ಞರಾದ ಡಾ.ಸಂತೋಷ ಪಾಟೀಲ್ ಹೆಬ್ಬಾಳ ಕಾರ್ಯಕ್ರಮವನ್ನು ಉದ್ಘಾಟಿಸುವರು. ಈ ಶಿಬಿರದಲ್ಲಿ ಚಾರ್ಟರ್ಡ ಅಕೌಟೆಂಟ್ ಮತ್ತು ಬಿಜಾಸ್ಪುರ ಗ್ರೂಪ್‌ನ ನಿರ್ದೇಶಕರಾದ ಶ್ರೀ ಪ್ರಶಾಂತ ಬಿಜಾಸ್ಪುರ, ಎಸ್.ಬಿ.ಐ. ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕರಾದ ಅಶೋಕ ಕಾಳೆ, ಪಾಳಾದ ಶ್ರೀ ಶುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಶರಣಗೌಡ ಪಾಟೀಲ್ ಪಾಳಾ, ಜೇವರ್ಗಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತçದ ಉಪನ್ಯಾಸಕರಾದ ಎಚ್.ಬಿ.ಪಾಟೀಲ್, ಡಾ. ಬಿ.ಆರ್. ಅಂಬೇಡ್ಕರ್ ಇಂಟಿಗ್ರಿಟೇಡ್ ರಿಸರ್ಚ ಇನ್ಸಿಟಿಟ್ಯೂಟ್ ಅಧ್ಯಕ್ಷರಾದ ಡಾ.ಸುನೀಲಕುಮಾರ ವಂಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅದೇ ರೀತಿಯಾಗಿ ಸಣ್ಣೂರ ಗ್ರಾಮ ಪಂಚಾಯತ ಅಧ್ಯಕ್ಷರಾದ ಲಿಂಗರಾಜ ಹಂಗರಗಿ, ಮಾರ್ಗದರ್ಶಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಯಶೋಧಾ ಎಂ ಆನಂದರಾವ, ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ.ಶರಣಪ್ಪ ಸೈದಾಪೂರ, ವೃದ್ಧಾಶ್ರಮದ ಮೇಲ್ವಿಚಾರಕಿಯಾದ ಶ್ರೀಮತಿ ಬಸಮ್ಮ ಸ್ವಾಮಿ, ಟ್ರಸ್ಟನ ಕಾರ್ಯದರ್ಶಿಯಾದ ರಾಜು ದೋಟಿಕೊಳ ಉಪಸ್ಥಿತರಿವರು. ಸರ್ವೋದಯ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ ಅಧ್ಯಕ್ಷರಾದ ಡಾ.ಸಂಗೀತಾ ಸೈದಾಪೂರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.