ಡಾ ಬಾಬಾಸಾಹೇಬ್ ಅಂಬೇಡ್ಕರ ಅವರ ಆರವತ್ತೆಂಟನೇ ಮಹಾ ಪರಿನಿರ್ವಾಣ ದಿನಾಚರಣೆ
ಡಾ ಬಾಬಾಸಾಹೇಬ್ ಅಂಬೇಡ್ಕರ ಅವರ ಆರವತ್ತೆಂಟನೇ ಮಹಾ ಪರಿನಿರ್ವಾಣ ದಿನಾಚರಣೆ
ಕಮಲನಗರ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ! ಬಾಬಾ ಸಾಹೇಬ ಭೀಮರಾವ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನಾಚರಣೆ ಪ್ರಯುಕ್ತ ತಾಲೂಕು ದಂಡಾಧಿಕಾರಿ ಅಮೀತಕುಮಾರ ಕುಲಕರ್ಣಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ದಿನದಲಿತರ ಸಮಾಜದ ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದು ಸಮಾಜ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಯುವ ಜನತೆಗೆ ಸಲಹೆ ನೀಡಿದರು.
ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬದುಕಿರುವ ಬಾಬಾ ಸಾಹೇಬರು ಮಹಿಳೆಯರ ಹಕ್ಕುಗಳು, ಸಮಾನತೆ ಹಾಗೂ ಶೋಷಿತ ವರ್ಗಗಳ ಹಕ್ಕಿಗಾಗಿ ಹೋರಾಡಿದ ಸಮಾಜದ ಮಾಹಾನ ಸುಧಾರಕರು. ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ, ಅವರ ಆದರ್ಶತತ್ವಗಳು ಯುವ ಪೀಳಿಗೆಗೆ ದಾರಿದೀಪವಾಗಿದೆ.ಅದಕ್ಕಾಗಿ
ಅವರ ಚರಿತ್ರೆ ಅಧ್ಯಯನ ಮಾಡಿ ತಿಳಿದು ಕೊಂಡು ಬದುಕಿ ಎಂದು ನುಡಿದರು.
ಈ ವೇಳೆ ಗ್ರೇಡ್_೨ ತಹಸಿಲ್ದಾರ ರಮೇಶ್ ಪದ್ದೆ, ಶ್ರೀಕಾಂತ್, ಝೆರೆಪ್ಪಾ, ಮಾಣಿಕ್ ನವಾಡೆ, ವಿಕ್ರಮ್, ಏಕನಾಥ್, ಸುಭಾಷ್, ಸೇರಿದಂತೆ ಇತರರಿದ್ದರು.