ಇಂದು ಚಂದ್ರಂಪಳ್ಳಿ ಗ್ರಾಮದಲ್ಲಿ 1955, 1989 ರ ನಾಗರಿಕ ಹಕ್ಕು ಅಧಿನಿಯಮ ಕಾಯ್ದೆಗಳ ವಿಚಾರಗೋಷ್ಠಿ ಕಾರ್ಯಕ್ರಮ ಜರುಗಲಿದೆ
ಇಂದು ಚಂದ್ರಂಪಳ್ಳಿ ಗ್ರಾಮದಲ್ಲಿ 1955, 1989 ರ ನಾಗರಿಕ ಹಕ್ಕು ಅಧಿನಿಯಮ ಕಾಯ್ದೆಗಳ ವಿಚಾರಗೋಷ್ಠಿ ಕಾರ್ಯಕ್ರಮ ಜರುಗಲಿದೆ
ಚಿಂಚೋಳಿ : ತಾಲೂಕಿನ ಚಂದ್ರಂಪಳ್ಳಿ ಗ್ರಾಮದಲ್ಲಿ ಚಿಂಚೋಳಿ ಭಾಗ್ಯಯೋದಯ ವಿದ್ಯಾವರ್ಧಕ ಸಂಘ ಮತ್ತು ತಾಲೂಕ ಸಮಾಜ ಕಲ್ಯಾಣ ಇಲಾಖೆ ಚಿಂಚೋಳಿ ಇವರ ಸಂಯುಕ್ತ ಆಶ್ರಯದಲ್ಲಿ 2024-25 ನೇ ಸಾಲಿನಲ್ಲಿ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ 1955 ಹಾಗೂ ಪರಿಶಿಷ್ಟ ಜಾತಿ ವರ್ಗಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮ 1989 ರ ಕುರಿತು ವಿಚಾರಗೋಷ್ಠಿ ಕಾರ್ಯಗಾರ ಮತ್ತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘ ತಿಳಿಸಿದೆ.
ಇದರ ಉದ್ಘಾಟಕರಾಗಿ ಚಿಂಚೋಳಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರು ಆಗಮಲಿಸಲಿದ್ದಾರೆ.
ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ, ಸಿಪಿಐ ಕಪಿಲ್ ದೇವ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭುಲಿಂಗ್ ಬುಳ್ಳ, ಪಿಎಸ್ ಐ ಗಂಗಮ್ಮಾ ಅವರು ಮುಖ್ಯ ಅತಿಥಿಗಳಾಗಿ, ಐನೋಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀದೇವಿ ಮೇತ್ರಿ, ಸದಸ್ಯ ರಾಜರೆಡ್ಡಿ, ಜಯಮ್ಮ ಮಲ್ಕಾಪೂರ, ಹಣಮಂತ ದೊಡ್ಡಮನಿ ಅವರು ಅತಿಥಿಗಳಾಗಿ ಆಗಮಲಿಸಲಿದ್ದಾರೆ.
ಚಿಂಚೋಳಿ ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ ಅವರು ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಮೇಶ ಯಾಕಾಪೂರ ಅವರು ವಹಿಸಿಕೊಳಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಸಂಜೀವನ ಯಾಕಾಪೂರ ಉಪಸ್ಥಿತರಿರುವರು ಎಂದು ತಿಳಿಸಿದೆ.
ಇಂದುಜ 18 ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಚಂದ್ರಪಳ್ಳಿ ಗ್ರಾಮದಲ್ಲಿ ನಡೆಯಲಿದೆ. ರೇವನಸಿದ್ದಪ್ಪ ಕಲಬುರಗಿ ಅವರು ಕಾರ್ಯಕ್ರಮ ಸಂಯೋಜಕರಾಗಿದ್ದಾರೆ.