ಕಲ್ಯಾಣ ಕರ್ನಾಟಕ ಈಡಿಗರ ವಿಶೇಷ ಚರ್ಚಾ ಸಭೆ ಜ. 19ರಂದು
ಕಲ್ಯಾಣಕ ರ್ನಾಟಕ ಈಡಿಗರ ವಿಶೇಷ ಚರ್ಚಾ ಸಭೆ ಜ. 19ರಂದು
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಹಾಗು ತಾಲೂಕಿನ ಜಿಲ್ಲಾ ಆರ್ಯ ಈಡಿಗರ ಸಮಿತಿಯ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರ ಮಹತ್ವದ ಸಭೆಯನ್ನು ಈಡಿಗ ಸಮಾಜದ ಗುರುಗಳು ಹಾಗೂ ಚಿತ್ತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರುಪೀಠದ ಪೂಜ್ಯರಾದ ಡಾ. ಪ್ರಣವಾನಂದ ಶ್ರೀಗಳ ಸಮ್ಮುಖದಲ್ಲಿ ಜ 19ರಂದು ಬೆಳಗ್ಗೆ10.30 ಕ್ಕೆ ಕಲಬುರಗಿಯಲ್ಲಿ ಕರೆಯಲಾಗಿದೆ.
ರಾಜ್ಯ ಸರಕಾರವು ಮಂಡಿಸಲಿರುವ ಬಜೆಟ್ ನಲ್ಲಿ ಸಮುದಾಯದ ಬೇಡಿಕೆಗಳನ್ನು ಒತ್ತಾಯಿಸಲು ಹಾಗು ಸಮುದಾಯದ ಕಲ್ಯಾಣಕ್ಕಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತಾಗಿ ಕಲಬುರಗಿ ನಗರದ ಜಗತ್ ವೃತ್ತದಲ್ಲಿರುವ ಆಮಂತ್ರಣ ಹೋಟೆಲ್ ನ ಸಭಾಂಗಣದಲ್ಲಿ ಈ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಈಡಿಗ ಸಮಾಜದ ಹಿರಿಯರು, ಪ್ರಮುಖರು, ವಿವಿಧ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರುವ ನಾಯಕರುಗಳು, ಸಮಾಜದ ಜಿಲ್ಲಾ ತಾಲೂಕು ಅಧ್ಯಕ್ಷರುಗಳು ಭಾಗವಹಿಸಿ ಸಮುದಾಯದ ಮತ್ತು ಈ ಭಾಗದಲ್ಲಿ ಅಗತ್ಯವಾಗಿ ಆಗಬೇಕಾದ ಬೇಡಿಕೆಗಳನ್ನು ಸಮಗ್ರವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು
ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಕಾರ್ಯದರ್ಶಿ ವೆಂಕಟೇಶ್ ಗುಂಡಾನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.