ಪತ್ರಕರ್ತ ರಾಮಕೃಷ್ಣ ಬಡಶೇಷಿ ಜೊತೆ ದೂರದರ್ಶನ ಸಂದರ್ಶನ
ಪತ್ರಕರ್ತ ರಾಮಕೃಷ್ಣ ಬಡಶೇಷಿ ಜೊತೆ ದೂರದರ್ಶನ ಸಂದರ್ಶನ
ಕಲಬುರಗಿ: ಹಿರಿಯ ಪತ್ರಕರ್ತರೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಾಮಕೃಷ್ಣ ಬಡಶೇಷಿ ಅವರೊಡನೆ ನಡೆಸಿದ ಸಂದರ್ಶನವನ್ನು ದೂರದರ್ಶನ ಚಂದನ ವಾಹಿನಿಯಲ್ಲಿ ಜ. 18ರಂದು ಮಧ್ಯಾಹ್ನ 2: 30 ಕ್ಕೆ ಪ್ರಸಾರವಾಗಲಿದೆ.
ಕಲಬುರಗಿಯಲ್ಲಿ ದ ನ್ಯೂ.ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಮುಖ್ಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ರಾಮಕೃಷ್ಣ ಬಡಶೇಷಿ ಯವರಿಗೆ ಈ ಬಾರಿ ರಾಜ್ಯ ಸರ್ಕಾರವು ಅವರ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಇವರನ್ನು ಡಾ. ಸದಾನಂದ ಪೆರ್ಲ ಸಂದರ್ಶನ ನಡೆಸಿದ್ದು ಅಭಿವೃದ್ಧಿ ಪತ್ರಿಕೋದ್ಯಮದ ಹಾಗೂ ಪತ್ರಿಕೋದ್ಯಮ ಯಾನದ ಬಗ್ಗೆ ಅವರು ಮಾಹಿತಿಯನ್ನು ನೀಡಿದ್ದಾರೆ. ಸಂಗಮೇಶ್ , ಮಲ್ಲಿಕಾರ್ಜುನ್ ಮತ್ತು ಸಿದ್ದರಾಮ ಇವರ ತಂಡವು ಕಾರ್ಯಕ್ರಮವನ್ನು ಸಿದ್ಧಪಡಿಸಿದೆ
ಎಂದು ಕಲಬುರಗಿ ದೂರದರ್ಶನ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ಸೋಮಶೇಖರ ಎಸ್ ರುಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.