ರೇಣುಕಾ ಯಲ್ಲಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ|
|ರೇಣುಕಾ ಯಲ್ಲಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ|
ಭವ್ಯ ಉದ್ಘಾಟನೆಗೆ ಸಿದ್ಧಗೊಂಡಿರುವ ಶಹಾಬಾದ ನಗರ :..
ಶಹಾಬಾದ : - ನಗರದ ಇಂಜನ್ ಪೈಲ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಅ. 27 ರಿಂದ 29 ವರಗೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಕನಕಪ್ಪ ದಂಡಗುಲಕರ ತಿಳಿಸಿದ್ದಾರೆ.
ಅವರು ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮಾಜಿ ಸಚಿವ ಅರಂವಿಂದ ಲಿಂಬಾವಳಿ ಅವರು ಕೊತ್ಲಾಪೂರ ಯಲ್ಲಮ್ಮ ದೇವಸ್ಥಾನ, ಕೊಂಚೂರು ಹನುಮಾನ ದೇವಸ್ಥಾನದಲ್ಲಿ ದಾಸೋಹ ಕೋಣೆ ನಿರ್ಮಿಸಿದ್ದು, ಈಗ ಇಂಜನ್ ಫೈಲ್ ಬಡಾವಣೆಯಲ್ಲಿ ತಮ್ಮ ಕುಲದೇವಿ ಶ್ರೀಯಲ್ಲಮ್ಮ ದೇವಿಯ ಮಂದಿರ ನಿರ್ಮಿಸಿದ್ದಾರೆ.
ಈ ದೇವಸ್ಥಾನಕ್ಕಾಗಿ ಕೇರಳದ ತ್ರಿಶೂರಿನ ಉನ್ನಿಕೃಷ್ಣನ್ ಅವರು ಕೃಷ್ಣಶಿಲೆಯಲ್ಲಿ ಮೂರ್ತಿ ಕೆತ್ತಿದ್ದು, 11 ತಿಂಗಳಲ್ಲಿ ಉದ್ದಂಡರಾಜು ತಂಡ ದೊಡ್ಡಬಳ್ಳಾಪುರದ ಸಾದರಹಳ್ಳಿಯ ಗ್ರಾನೈಟ್ ಕಲ್ಲುಗಳನ್ನು ಬಳಸಿ ದೇವಸ್ಥಾನ ನಿರ್ಮಿಸಲಾಗಿದೆ. ಕೇರಳದ ತ್ರಿಶೂರಿನ ರಾಮದಾಸ ನಂಬೂದರಿ ಅವರ ವೈದಿಕರ ತಂಡ ಮೂರ್ತಿಸ್ಥಾಪನೆ ಜೊತೆ ಪ್ರಾಣ ಪ್ರತಿಷ್ಠಾಪನೆ ವಿಧಾನ ನೇರವೇರಿಸುವರು.
ಅ 27 ರಂದು ಬೆಳಗ್ಗೆ ಗಂಟೆಗೆ ಜಗಂಬಾ ಮಂದಿರದಿಂದ ನಗರದ ಪ್ರಮುಖ ಬೀದಿಗಳಲ್ಲಿ ದೇವಿಮೂರ್ತಿ ಭವ್ಯ ಮೆರವಣಿಗೆ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರು ಭಾಗವಸಿಲಿದ್ದಾರೆ, ಮೆರವಣಿಗೆಯ ನಂತರ ಮೂರ್ತಿಯ ಜಲಾಧಿವಾಸ, ಧಾನ್ಯಾಧಿವಾಸ, ನಡೆಯಲಿದೆ.
ಅ 28 ರಂದು ನವಗ್ರಹ, ಗಣಪತಿ, ಚಂಡಿ, ಮೃತ್ಯುಂಜಯ, ವಾಸ್ತು ಹೋಮದ ಪೂಜೆ ನಡೆಯಲಿದೆ. ಅ 29 ರಂದು ಮೂರ್ತಿ ಸ್ಥಾಪನೆ ನಡೆಯಲಿದೆ.
ಚಿತ್ರದುರ್ಗದ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಕುಂಚಟಗಿಯ ಶಾಂತವೀರ ಮಹಾಸ್ವಾಮಿಗಳು, ಮಾದಾರ ಚನ್ನಯ್ಯ ಪೀಠದ ಬಸವಮೂರ್ತಿ ಶ್ರೀಗಳು ಸೇರಿದಂತೆ ೨೨ ಮಠಾಧೀಶರು ಹಾಗೂ ತಾಲ್ಲೂಕಿನ ವಿವಿಧ ಮಠಾಧೀಶರು, ಸಚಿವರು, ಶಾಸಕರು, ವಿಧಾನ ಪರಿಷತ್ತ ಸದಸ್ಯರು, ರಾಜಕೀಯ ಮುಂಖಡರು, ಸಮಾಜ ಸೇವಕರು ಭಾಗವಸಲಿದ್ದಾರೆ ಎಂದು ತಿಳಿಸಿದರು.
"ತ್ರಿಸೂರಿನ ಅರ್ಚಕರು, ಶಿಲ್ಪಕಾರರು, ದೊಡ್ಡ ಬಳ್ಳಾಪುರದ ಗ್ರೇನೆಟ್ ಕಲ್ಲುಗಳಿಂದ ತಯಾರಿಸಿದ ಕಂಭಗಳು, ಚಾವಣಿಗಳು ಜನರ ಮತ್ತು ಭಕ್ತರ ಕಣ್ಮನ ಸೇಳೆಯುತ್ತಿದೆ"
ವಿಶೇಷವಾಗಿ ಶಾಸಕಿ ಮಂಜುಳಾ, ಅರವಿಂದ ಲಿಂಬಾವಳಿ ಕುಟುಂಬ ಧಾರ್ಮಿಕ ಕಾರ್ಯಕ್ರಮ ನಡೆಸುವರೆಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಸಿದ್ದು ಪಾಟೀಲ, ಶರಣು ಪಗಲಾಪೂರ, ನಿಂಗಪ್ಪ ಹುಳಗೋಳ, ಬಸವರಾಜ ಬಿರಾದಾರ, ಸಿದ್ರಾಮ ಕುಸಾಳೆ, ದೇವದಾಸ ಜಾಧವ, ಡಾ.ಅಶೋಕ ಜಿಂಗಾಡೆ, ಶಿವರಾಜ ಕೋರೆ, ಶರಣಬಸಪ್ಪ ಕೋಬಾಳ, ಸೂರ್ಯಕಾಂತ ಕೋಬಾಳ ಸೇರಿದಂತೆ ಇತರರು ಇದ್ದರು.
ನಗರದ ಎಲ್ಲೆಡೆ ಕಮಾನ, ಕಟೌಟ್ ಬ್ಯಾನರ್ ಗಳ ಭರಾಟೆ :
ಕಲಬುರಗಿಯ ರಾಜಾಪೂರ ಕ್ರಾಸ್ ನಿಂದ ಪ್ರಾರಂಭವಾಗಿ ಶಹಾಬಾದ ನಗರಾದ್ಯಂತ ಪ್ರಮುಖ ರಸ್ತೆ, ಚೌಕ್ ಗಳಲ್ಲಿ ಪ್ರಥಮ ಭಾರಿ ಇಂತಹ ವಿಶಿಷ್ಟ ಹಾಗು ಭವ್ಯವಾದ ಸ್ವಾಗತ ಕಮಾನಗಳು, ಕಟೌಟ್, ಬ್ಯಾನರ್, ಪೋಸ್ಟರ್ ಗಳು ಜೊತೆಗೆ ಕೇಸರಿ ಧ್ವಜಗಳು ರಾರಾಜಿಸುತ್ತಿವೆ, ಶಹಾಬಾದ ನಗರ ಮಧುಮಣಿಗಿತ್ತಿಯಂತೆ ಶೃಂಗಾರ ಗೊಂಡಿದೆ.
ದೇವಿಯ ಭವ್ಯ ಮೆರವಣಿಗೆಗೆ
ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆಗೆ ಭವ್ಯವಾದ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 501 ಸುಮಂಗಲಿ ಯರಿಂದ ಪೂರ್ಣಕುಂಭ ಕಳಸದ ಮೆರವಣಿಗೆ ಹಾಗೂ ತಾಂಡೂರಿನ ಶ್ರೀ ಯಲ್ಲಮ್ಮದೇವಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬೆಂಗಳೂರಿನ ತಮಟೆ, ಡೋಳ್ಳು, ವೀರಗಾಸೆ ಕಲಾವಿದರು, ಹನುಮ ವೇಷದಾರಿಗಳು, ಛಧ್ಮ ವೇಷದಾರಿಗಳು, ಡೊಳ್ಳು ಕುಣಿತ, ತಮಟೆ ಕಲಾವಿದರು, ಕೋಲಾಟಗಾರರು ಭಾಗವಸಿಲಿದ್ದಾರೆ.
