ಜನಪ್ರತಿನಿಧಿಗಳು ಅಭಿವೃದ್ಧಿಯ ಸಾರಥಿಯಾಗಲು ಡಾ.ಪೆರ್ಲ ಕರೆ
ಜನಪ್ರತಿನಿಧಿಗಳು ಅಭಿವೃದ್ಧಿಯ ಸಾರಥಿಯಾಗಲು ಡಾ.ಪೆರ್ಲ ಕರೆ
ನೂತನ ಸದಸ್ಯರಾದ ವಿದ್ಯಾ ಕುಮಾರಿ ಮತ್ತು ಕೃಷ್ಣಪ್ಪಗೆ ಗೃಹ ಸನ್ಮಾನ ಸಮಾರಂಭ
ಕಾಸರಗೋಡು : ಪ್ರಜಾಪ್ರಭುತ್ವದಲ್ಲಿ ಚುನಾವಣೆ ಜನಪ್ರತಿನಿಧಿಗಳ ಆಯ್ಕೆಗೆ ಮಾತ್ರ ಸೀಮಿತವಾಗಿರಬೇಕು ಆಯ್ಕೆಗೊಂಡ ನಂತರ ಗೆದ್ದವರು ಅಭಿವೃದ್ಧಿಯ ಸಾರಥಿ ಆಗಬೇಕು ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಕರೆ ನೀಡಿದರು.
ಮಂಜೇಶ್ವರ ತಾಲೂಕಿನಲ್ಲಿ ನಡೆದ ಚುನಾವಣೆಯಲ್ಲಿ ತಾಲೂಕು ಪಂಚಾಯತಿ ಸದಸ್ಯರಾಗಿ ಆಯ್ಕೆ ಹೊಂದಿದ ವಿದ್ಯಾಶ್ರೀ ಪಂಚಾಯತ್ ನ 12ನೇ ವಾರ್ಡಿನಿಂದ ಆಯ್ಕೆ ಹೊಂದಿದ ಕೃಷ್ಣಪ್ಪ ಬಜಕೂಡ್ಲು ಅವರಿಗೆ ಡಿ. 28 ರಂದು
ಬಜಕೂಡ್ಲುನಲ್ಲಿ ಗೃಹ ಸನ್ಮಾನ ನೆರವೇರಿಸಿ ಮಾತನಾಡುತ್ತಾ ಗ್ರಾಮಾಂತರ ಪ್ರದೇಶದಲ್ಲಿ ಅಭಿವೃದ್ಧಿಯ ಚುಕ್ಕಾಣಿಯನ್ನು ಹಿಡಿದು ಜನಪ್ರತಿನಿಧಿಗಳು ಕೆಲಸ ನಿರ್ವಹಿಸಿದರೆ ವಿಕಸಿತ ಭಾರತದ ಪರಿಕಲ್ಪನೆ ಸಾಕಾರಗೊಳ್ಳುತ್ತದೆ. ಗ್ರಾಮ ಸ್ವರಾಜ್ಯದ ಮೂಲಕ ರಾಮರಾಜ್ಯ ಎಂದು ಸಾರಿದ ಮಹಾತ್ಮ ಗಾಂಧೀಜಿಯವರ ಸಂಕಲ್ಪ ಈಡೇರಬೇಕಾದರೆ ಪ್ರಾಮಾಣಿಕತೆಯಿಂದ ಜನಸೇವೆಯ ಕಾಯಕವನ್ನು ರೂಢಿಸಿಕೊಂಡ ಜನಪ್ರತಿನಿಧಿಗಳು ಮಾತ್ರ ಜನಮನದಲ್ಲಿ ಸದಾ ಉಳಿಯುತ್ತಾರೆ ಎಂದು ಅವರು ಹೇಳಿದರು.
ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ನ ಹಿರಿಯ ಸದಸ್ಯರಾದ ಶಿವಾನಂದ ಪೆರ್ಲ ಮಾತನಾಡಿ ಇಬ್ಬರು ನಮ್ಮ ಕ್ಲಬ್ ನ ಸದಸ್ಯರಾಗಿದ್ದು ಅವರ ಜನಪರ ಕಾಳಜಿಯನ್ನು ಮೆಚ್ಚಿ ಜನ ಆಯ್ಕೆ ಮಾಡಿ ಸೇವೆಗೆ ಅವಕಾಶ ಕಲ್ಪಿಸಿರುವುದು ಹೆಮ್ಮೆಯ ಸಂಗತಿ ಎಂದರು. ನಿವೃತ್ತ ಪೊಲೀಸ್ ಇನ್ಸ್ ಪೆಕ್ಟರ್ ಸುಂದರ ಸುವರ್ಣ ಮಾತನಾಡಿ ಸದಸ್ಯರಾಗಿ ಆಯ್ಕೆ ಹೊಂದಿರುವುದು ಅಧಿಕಾರವಲ್ಲ ಜನರ ದುಃಖ ದುಮ್ಮಾನ ಗಳಿಗೆ ಸ್ಪಂದನೆ ನೀಡಲು ಜನರು ನೀಡಿದ ಅವಕಾಶ ಎಂಬುದನ್ನು ಮರೆಯಬಾರದು ಎಂದು ಹೇಳಿದರು. ಸನ್ಮಾನಕ್ಕೆ ಪ್ರತ್ಯುತ್ತರಿಸಿದ ವಿದ್ಯಾ ಕುಮಾರಿ ಹಾಗೂ ಕೃಷ್ಣಪ್ಪ ಬಜಕೂಡ್ಲು
ಜಯ ಸಾಧಿಸಿದ ನೂತನ ಸದಸ್ಯರಿಗೆ ಶಾಲು, ಪೇಟ ಹಾಗೂ ಹಾರಗಳೊಂದಿಗೆ ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ಪೆರ್ಲ ಸಹಕಾರಿ ಬ್ಯಾಂಕಿನ ಅಡ್ಯನಡ್ಕ ಶಾಖೆಯ ಉಸ್ತುವಾರಿ ಮ್ಯಾನೇಜರ್ ಪದ್ಮನಾಭ ಸುವರ್ಣ, ಪುರುಷೋತ್ತಮ ಪೆರ್ಲ,ಉಷಾ ವಸಂತ್, ಸೃಜನ ಸುವರ್ಣ, ವಿಭವ್ ,ಶ್ರಾವ್ಯ, ಗೌಶಿಕ್, ವಿನೋದ್ ಸುವರ್ಣ ಸುಳ್ಯಪದವು,ಚಾರ್ವಿ ಮತ್ತಿತರರಿದ್ದರು.
