ಸಚಿವ ದಿನೇಶ್ ಗುಂಡುರಾವಗೆ ಮನವಿ
ಸಚಿವ ದಿನೇಶ್ ಗುಂಡುರಾವಗೆ ಮನವಿ
ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡುರಾವ್ ಕಲಬುರಗಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ನಿರೀಕ್ಷಣಾಧಿಕಾರಿಗಳು ಪದೋನ್ನತಿ ಯಿಂದ ವಂಚಿತರಾಗುತ್ತಿರುವುದು ಸಚಿವರ ಗಮನಕ್ಕೆ ತಂದು 371 (J) ಉಪಸಮಿತಿ ವರದಿ ಜಾರಿ ಮಾಡಿದಾಗ ಸದರಿ ವಿಭಾಗದ ನೌಕರರಿಗೆ ಪದೊನ್ನತಿ ಭಾಗ್ಯ ದೊರೆಯುತ್ತದೆ ಎಂಬುದು ಸಚಿವರಿಗೆ ಮನವರಿಕೆ ಮಾಡಿ ಕೊಡಲಾಯಿತು. ತಕ್ಷಣ ಸಚಿವರು ಉಪಸಮಿತಿ ವರದಿ ಅಧ್ಯಯನ ಮಾಡಿ ಜಾರಿ ಮಾಡುವುದಾಗಿ ಭರವಸೆ ನೀಡಿದರು. ಈ ಸಂಧರ್ಭದಲ್ಲಿ ವಿಠಲ ಬಡಿಗೇರ,ಬಸವರಾಜ ಕಲಶೆಟ್ಟಿ, ಮುಸ್ತಾಫ ಮೊಮಿನ್, ರಫೀಕ್ ಚಾಂದ, ಇಕ್ಬಾಲ್ ಹಾಗೂ ಸಂತೋಷ ಮುಳಜೆ ರವರು ಹಾಜರಿದ್ದರು.
